ಬೈಕ್ ದೈತ್ಯ ಯಮಹಾದಿಂದ ಕ್ರೀಡಾ ಕಾರು ಅನಾವರಣ

By Nagaraja

ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಜಪಾನ್ ಮೂಲದ ಯಮಹಾ, ತವರೂರಿನಲ್ಲೇ ನಡೆಯುತ್ತಿರುವ 44ನೇ ಟೋಕಿಯೋ ಮೋಟಾರು ಶೋದಲ್ಲಿ ಅತಿ ನೂತನ ಕ್ರೀಡಾ ಕಾರನ್ನು ಅನಾವರಣಗೊಳಿಸಿದೆ.

Also Read: ಸಾರ್ವಕಾಲಿಕ 15 ಶ್ರೇಷ್ಠ ಯಮಹಾ ಬೈಕ್ಸ್ ಮುಂದಕ್ಕೆ ಓದಿ

ಯಮಹಾದಿಂದ ಇಂತಹದೊಂದು ನಡೆಯು ವಾಹನ ಪ್ರೇಮಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದ್ದು, ಅದೇ ಸಮಯಕ್ಕೆ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಈ ಬಹುನಿರೀಕ್ಷಿತ ಕಾರಿಗೆ ಯಮಹಾ ಸ್ಪೋರ್ಟ್ಸ್ ರೈಡ್ ಎಂದು ಹೆಸರಿಸಲಾಗಿದೆ.

ಬೈಕ್ ದೈತ್ಯ ಯಮಹಾದಿಂದ ಕ್ರೀಡಾ ಕಾರು ಅನಾವರಣ

ಈ ಎರಡು ಸೀಟುಗಳ ಸ್ಪೋರ್ಟ್ಸ್ ಕಾರನ್ನು ಐಸ್ಟ್ರೀಮ್ ತಯಾರಿಕಾ ವ್ಯವಸ್ಥೆಯ ತಳಹದಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಗೊರ್ಡನ್ ಮುರ್ರೆ ಡಿಸೈನ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.

ಬೈಕ್ ದೈತ್ಯ ಯಮಹಾದಿಂದ ಕ್ರೀಡಾ ಕಾರು ಅನಾವರಣ

ಹಗುರ ಭಾರ, ಗಡುಸಾದ ದೇಹ ರಚನೆ ಹಾಗೂ ಫಾರ್ಮುಲಾ ಒನ್ ತಂತ್ರಗಾರಿಕೆ ಇದರಲ್ಲಿ ಆಳವಡಿಸಲಾಗಿದೆ. ಹಾಗಿದ್ದರೂ ಕಾರಿನ ಎಂಜಿನ್ ತಾಂತ್ರಿಕತೆಯ ಬಗ್ಗೆ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಬೈಕ್ ದೈತ್ಯ ಯಮಹಾದಿಂದ ಕ್ರೀಡಾ ಕಾರು ಅನಾವರಣ

ಕಾರಿನ ಒಟ್ಟಾರೆ ಭಾರ 900 ಕೆ.ಜಿಗಿಂತಲೂ ಕಡಿಮೆಯಾಗಿರಲಿದೆ. ಅಂತೆಯೇ ಕಡು ಬೂದು ಹೊರಮೈ ಹಾಗೂ ಕಡು ಕಂದು ಒಳಮೈ ಜೊತೆಗೆ ಕಾರ್ಬನ್ ಫೈಬರ್, ಲೆಥರ್ ಸೀಟು ಹಾಗೂ ಮೆಟ್ಯಾಲಿಕ್ ಫಿನಿಶ್ ಕಾಣಬಹುದಾಗಿದೆ.

ಬೈಕ್ ದೈತ್ಯ ಯಮಹಾದಿಂದ ಕ್ರೀಡಾ ಕಾರು ಅನಾವರಣ

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸೈನ್ ತಂಡವನ್ನು ಮುನ್ನಡೆಸುತ್ತಿರುವ ಟೊಯೊಟಾದ ಮಾಜಿ ವಿನ್ಯಾಸಗಾರ ದೆಝಿ ನಗಯಾ, ಯಮಹಾ ಮೋಟಾರ್ ಸೈಕಲ್ಸ್ ಗಳಿಂದ ಪ್ರೇರಣೆ ಪಡೆದು ಯಮಹಾ ಸ್ಪೋರ್ಟ್ಸ್ ರೈಡ್ ಕಾನ್ಸೆಪ್ಟ್ ಕಾರನ್ನು ರಚಿಸಲಾಗಿದೆ ಎಂದಿದ್ದಾರೆ.

ಎಲ್‌ಎಂಡಬ್ಲ್ಯು-ಎಂಡಬ್ಲ್ಯುಟಿ-9

ಎಲ್‌ಎಂಡಬ್ಲ್ಯು-ಎಂಡಬ್ಲ್ಯುಟಿ-9

ಇದೇ ಸಂದರ್ಭದಲ್ಲಿ ಕೆಲವು ಆಕರ್ಷಕ ಬೈಕ್ ಮಾದರಿಗಳನ್ನು ಯಮಹಾ ಪ್ರದರ್ಶನಗೊಳಿಸಿತ್ತು. ಇವುಗಳಲ್ಲಿ ಲೀನ್ ಮಲ್ಟಿ ವೀಲ್ (ಎಲ್‌ಎಂಡಬ್ಲ್ಯು) ತ್ರಿಚಕ್ರ ಕಾನ್ಸೆಪ್ಟ್ ಒಂದಾಗಿದೆ. ಮುಂಭಾಗದಲ್ಲಿ ಎರಡು ಚಕ್ರಗಳು ಇದರ ವಿಶಿಷ್ಟತೆಯಾಗಿದ್ದು 849 ಸಿಸಿ, ಇನ್ ಲೈನ್ ತ್ರಿ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಮೊಟೊಬೊಟ್ ವರ್ಷನ್ 1 (MOTOBOT Ver.1)

ಮೊಟೊಬೊಟ್ ವರ್ಷನ್ 1 (MOTOBOT Ver.1)

ಯಮಹಾದ ಭವಿಷ್ಯತ್ತಿನ ಪರಿಕಲ್ಪನೆಯು ಇದಾಗಿದ್ದು, ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಸ್ವಯಂಚಾಲತ ಬೈಕ್ ಅನ್ನು ಯಮಹಾ ರೋಬೋಟ್ ಓಡಿಸುವುದನ್ನು ನೀವು ಕಾಣಬಹುದಾಗಿದೆ.

ರೆಸನೇಟರ್ 125 (Resonator125)

ರೆಸನೇಟರ್ 125 (Resonator125)

ಯುವ ಜನಾಂಗಕ್ಕೆ ಹೇಳಿ ಮಾಡಿಸಿದ ಹಗುರ ಭಾರದ ಕಾಂಪಾಕ್ಟ್ ವಾಹನ ಇದಾಗಿದೆ. ಇದು 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

 ವೈಪಿಜೆ-ಎಂಟಿಬಿ ಕಾನ್ಸೆಪ್ಟ್

ವೈಪಿಜೆ-ಎಂಟಿಬಿ ಕಾನ್ಸೆಪ್ಟ್

ಕೇವಲ ಕಾರು ಹಾಗೂ ಬೈಕ್ ಮಾತ್ರವಲ್ಲದೆ ಪರಿಸರ ಸ್ನೇಹಿ ಸೈಕಲನ್ನು ಯಮಹಾ ಪರಿಚಯಿಸಿತ್ತು. ಇವುಗಳಲ್ಲಿ ವೈಪಿಜೆ-ಎಂಟಿವಿ ಪರ್ವತ ಬೈಕ್ ಒಂದಾಗಿದೆ. ಈ ಗರಿಷ್ಠ ನಿರ್ವಹಣೆಯ ಸೈಕಲ್ ಯಾವುದೇ ಭೂಪ್ರದೇಶದಲ್ಲೂ ಚಾಲನೆ ಮಾಡುವ ಶಕ್ತಿ ಹೊಂದಿದೆ.

ಇವನ್ನೂ ಓದಿ

ಯಮಹಾ ಆರ್3 Vs ಕವಾಸಕಿ ನಿಂಜಾ 300 Vs ಕೆಟಿಎಂ ಆರ್‌ಸಿ 390 ಮುಂದಕ್ಕೆ ಓದಿ

Article Published On: Thursday, October 29, 2015, 9:24 [IST]
English summary
Yamaha Sports Car Concept Revealed At Tokyo Motor Show
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+