ಯಮಹಾ ಬೈಕ್ ಗಳಿಗೆ ಭಾರತದಲ್ಲಿ ರಿಕಾಲ್ ಬಿಸಿ

Written By:

ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಯಮಹಾ ತನ್ನೆರಡು ಐಕಾನಿಕ್ ಮಾದರಿಗಳಿಗೆ ಹಿಂದಕ್ಕೆ ಕರೆ ನೀಡಿದೆ. ಪ್ರಸಕ್ತ ಸಾಲಿನಲ್ಲಷ್ಟೇ ಮಾರಾಟ ಆರಂಭಿಸಿದ್ದ ವೈಝಡ್‌ಎಫ್-ಆರ್1 ಮತ್ತು ವೈಝಡ್‌ಎಫ್-ಆರ್1ಎಂ ಸೂಪರ್ ಬೈಕ್ ಗಳಲ್ಲಿ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಯಮಹಾ ವಾಪಾಸ್ ಕರೆ ನೀಡಿದೆ.

ಈ ಎರಡು ಬೈಕ್ ಗಳ ಗೇರ್ ಬಾಕ್ಸ್ ನಲ್ಲಿ ದೋಷ ಕಂಡುಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಿಕಾಲ್ ನೀಡಿದೆ. ಸಂಸ್ಥೆಯಿಂದ ಬಂದಿರುವ ಮಾಹಿತಿಗಳ ಪ್ರಕಾರ ಫಸ್ಟ್ ಮತ್ತು ಸೆಕೆಂಡ್ ಗೇರ್ ಪದೇ ಪದೇ ಬಳಕೆ ಮಾಡುವುದರಿಂದ ಗೇರ್ ಬಾಕ್ಸ್ ಗೆ ಪೆಟ್ಟಾಗುವ ಸಾಧ್ಯತೆಯಿದೆ.

ಯಮಹಾ ಬೈಕ್

ವೈಯಕ್ತಿಕವಾಗಿ ಯಮಹಾ ಡೀಲರ್ ಶಿಪ್ ವಕ್ತಾರರು ಗ್ರಾಹಕರನ್ನು ಸಂಪರ್ಕಿಸುತ್ತಿದ್ದಾರೆ. ಅಲ್ಲದೆ ಸಂಪೂರ್ಣ ಉಚಿತವಾಗಿ ಸಮಸ್ಯೆ ಬಗೆ ಹರಿಸಿಕೊಡಲಾಗುತ್ತದೆ.

ಯಮಹಾ ಬೈಕ್

ಒಟ್ಟಿನಲ್ಲಿ ಭಾರತದಲ್ಲೂ ಯಮಹಾ ಬೈಕ್ ಗಳಿಗೆ ಅತಿ ಹೆಚ್ಚಿನ ಬೇಡಿಕೆಯಿರುವ ಇದೇ ಸಂದರ್ಭದಲ್ಲಿ ಹೈ ಎಂಡ್ ವೆರಿಯಂಟ್ ಗೆ ಇಂತಹ ತೊಂದರೆ ಅಪ್ಪಳಿಸಿರುವುದು ಸ್ವಲ್ಪ ಹಿನ್ನಡೆಯಾಗಿ ಪರಿಣಮಿಸಿದೆ.

Read more on ಯಮಹಾ yamaha
English summary
Yamaha Issues Recall Of YZF-R1 & YZF-R1M Sold In India
Story first published: Wednesday, December 23, 2015, 18:05 [IST]
Please Wait while comments are loading...

Latest Photos