ಯಮಹಾ ರಸ್ತೆ ಸ್ನೇಹಿ ಸೂಪರ್ ಬೈಕ್ ಬಿಡುಗಡೆ
ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಯಮಹಾ, ರಸ್ತೆ ಸ್ನೇಹಿ ವೈಝಡ್‌ಎಫ್-ಆರ್1ಎಸ್ ಸೂಪರ್ ಬೈಕ್ ಬಿಡುಗಡೆ ಮಾಡಿದೆ. ಇದು ಮುಂದಿನ ವರ್ಷ ಅಂದರೆ 2016 ಫೆಬ್ರವರಿ ವೇಳೆಯಾಗುವಾಗ ಜಾಗತಿಕ ಮಾರುಕಟ್ಟೆಯನ್ನು ತಲುಪಲಿದೆ.
ನೂತನ ಯಮಹಾ ವೈಝಡ್‌ಎಫ್-ಆರ್1ಎಸ್ ಸೂಪರ್ ಬೈಕ್ ಭಾರತೀಯ ರುಪಾಯಿ ಪ್ರಕಾರ 10 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅಲ್ಲದೆ ಮೂರು ಆಯ್ಕೆಗಳಲ್ಲಿ ಬೈಕ್ ಪ್ರೇಮಿಗಳನ್ನು ತಲುಪಲಿದೆ. ಅವುಗಳೆಂದರೆ,
ಯಮಹಾ ವೈಝಡ್‌ಎಫ್-ಆರ್1ಎಸ್,
ಯಮಹಾ ವೈಝಡ್‌ಎಫ್-ಆರ್1ಎಂ,
ಯಮಹಾ ವೈಝಡ್‌ಎಫ್-ಆರ್1

2016 ಯಮಹಾ ವೈಝಡ್‌ಎಫ್-ಆರ್1ಎಸ್ ಸೂಪರ್ ಬೈಕ್ 998 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 112.4 ಎನ್‌ಎಂ ತಿರುಗುಬಲದಲ್ಲಿ 197.2 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 6 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.
ನೂತನ ಯಮಹಾ ವೈಝಡ್‌ಎಫ್-ಆರ್1ಎಸ್ ಸೂಪರ್ ಬೈಕ್ ನಲ್ಲಿ ನೇರ-ಕೋನ ಸೂಕ್ಷ್ಮವಾದ ಟಿಎಸ್‌ಸಿ, ಪವರ್ ಡೆಲಿವರಿ ಮೋಡ್, ಸ್ಲೈಡ್ ಕಂಟ್ರೋಲ್ ಸಿಸ್ಟಂ, ಲಿಫ್ಟ್ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಸಿಸ್ಟಂಗಳಿರಲಿದ್ದು, ಈ ಸೂಪರ್ ಬೈಕನ್ನು ಸ್ಟ್ರೀಟ್ ನಲ್ಲೂ ಚಲಿಸಲು ನೆರವಾಗಲಿದೆ.

ಯುಮಹಾ ಮೊಟೊಜಿಪಿ ರೇಸಿಂಗ್ ಬೈಕ್ ಗಳಿಂದ ಸ್ಪೂರ್ತಿ ಪಡೆದಿರುವ ವೈಝಡ್‌ಎಫ್-ಆರ್1ಎಸ್ ಸೂಪರ್ ಬೈಕ್ ನಲ್ಲಿ ಎಲ್ ಇಡಿ ಟರ್ನ್ ಸಿಗ್ನಲ್ ಹಾಗೂ ಟೈಲ್ ಲೈಟ್ ಕಂಡುಬರಲಿದೆ. ಅಲ್ಲದೆ ನಾಲ್ಕು ಬಣ್ಣಗಳ ಆಯ್ಕೆಯೂ ಇರುತ್ತದೆ.
ಮ್ಯಾಟ್ ಗ್ರೇ,
ರಾಪಿಡ್ ರೆಡ್,
ಇಂಟೆಕ್ಷನ್ ವೈಟ್,
ರೇವನ್

ಭಾರತಕ್ಕೂ ಬರುತ್ತಾ?
ಪ್ರಸ್ತುತ ವೈಝಡ್‌ಎಫ್-ಆರ್1 ಮತ್ತು ವೈಝಡ್‌ಎಫ್-ಆರ್1ಎಂ ಮಾದರಿಗಳು ಮಾರಾಟದಲ್ಲಿದೆ. ಹಾಗೊಂದು ವೇಳೆ ನಿಕಟ ಭವಿಷ್ಯದಲ್ಲೇ ರಸ್ತೆ ಸ್ನೇಹಿ ವೈಝಡ್‌ಎಫ್-ಆರ್1ಎಸ್ ಮಾದರಿಯು ದೇಶ ಪ್ರವೇಶಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.


Click it and Unblock the Notifications