ಭಾರತದ 'ವರ್ಷದ ಬೈಕ್' - ಯಮಹಾ ವೈಝಢ್ಎಫ್-ಆರ್25
ಜಪಾನ್ ಮೂಲದ ಐಕಾನಿಕ್ ಸಂಸ್ಥೆ ಯಮಹಾ 2015 ಆಗಸ್ಟ್ ತಿಂಗಳಲ್ಲಿ ವೈಝಡ್‌ಎಫ್-ಆರ್3 ಕ್ರೀಡಾ ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ ಮೋಟಾರುಸೈಕಲ್ ಭಾರತದ 'ವರ್ಷದ ಬೈಕ್' ಎಂಬ ಪ್ರಶಸ್ತಿಗೆ ಭಾಜನವಾಗಿದೆ.
ಪ್ರಶಸ್ತಿ ರೇಸ್ ನಲ್ಲಿ ಹೋಂಡಾ ಸಿಬಿಆರ್650ಎಫ್ ಮತ್ತು ಡಿಎಸ್‌ಕೆ ಬೆನೆಲ್ಲಿ 300 ಮಾದರಿಯು ನಿಕಟ ಪೈಪೋಟಿ ಒಡ್ಡಿದ್ದರೂ ತನ್ನೆಲ್ಲ ಪ್ರತಿಸ್ಪರ್ಧಿಗಳನ್ನು ಮೀರಿಸಿರುವ ಯಮಹಾ ವೈಝಡ್‌ಎಫ್-ಆರ್3 ಅದ್ಭುತ ನಿರ್ವಹಣೆ ದಾಖಲಿಸುವ ಮೂಲಕ ವರ್ಷದ ಬೈಕ್ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ವಿನ್ಯಾಸ, ಬೆಲೆ, ಅನುಕೂಲ, ಸುರಕ್ಷತೆ, ನಾವೀನ್ಯ ತಾಂತ್ರಿಕತೆ ಇತ್ಯಾದಿ ಮಾನದಂಡಗಳನ್ನು ಆಧರಿಸಿ ತೀರ್ಪುಗಾರರ ಸಮಿತಿಯು ದೇಶದ ವರ್ಷದ ಬೈಕ್ ಆಯ್ಕೆ ಮಾಡಿತ್ತು.

ಭಾರತಕ್ಕೆ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದ ಮುಖಾಂತರ ಲಗ್ಗೆಯಿಟ್ಟಿರುವ ಯಮಹಾ ವೈಝಡ್‌ಎಫ್-ಆರ್3 ಒಂದು ಫುಲ್ ಫೇರ್ಡ್ ಕ್ರೀಡಾ ಬೈಕಾಗಿದೆ.

ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 3.25 ಲಕ್ಷ ರು.ಗಳಾಗಿದೆ. ಆದರೆ ದುರದೃಷ್ಟವಶಾತ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ವ್ಯವಸ್ಥೆಯು ಕಾಡುತ್ತಿದೆ.

321 ಸಿಸಿ ಇನ್ ಲೈನ್ ಟು ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಯಮಹಾ ವೈಝಢ್ಎಫ್-ಆರ್3 ಬೈಕ್ ಆರು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದುಕೊಂಡಿದೆ. ಇದು 29.6 ಎನ್‌ಎಂ ತಿರುಗುಬಲದಲ್ಲಿ 41.43 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಪ್ರತಿ ಗಂಟೆಗೆ 150 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಯಮಹಾ ವೈಝಡ್‌ಎಫ್-ಆರ್3 ಕ್ರೀಡಾ ಸ್ನೇಹಿ ಬೈಕ್ ಸವಾರರಿಗೆ ಅದ್ಬುತ ಚಾಲನಾ ಅನುಭವ ನೀಡಲಿದೆ.


Click it and Unblock the Notifications