ಎಪ್ರಿಲಿಯಾ ಎಸ್‌ಆರ್150 ಬೆನ್ನಲ್ಲೇ ಎಸ್ಆರ್ ಮೋಟಾರ್ಡ್ 125 ಭಾರತಕ್ಕೆ?
ಇನ್ನೇನು ಕೆಲವೇ ದಿನಗಳಲ್ಲಿ ಎಪ್ರಿಲಿಯಾ ಎಸ್‌ಆರ್150 ಭಾರತದಲ್ಲಿ ಬಿಡುಗಡೆಗೊಳ್ಳಲಿರುವಂತೆಯೇ ತೆರೆಮರೆಯಲ್ಲಿ ಮಗದೊಂದು ಆಕರ್ಷಕ ಸ್ಕೂಟರನ್ನು ಬಿಡುಗಡೆ ಮಾಡುವ ತಯಾರಿಗಳು ನಡೆಯುತ್ತಿದೆ.
ಬೆಂಗಳೂರಿನ ಡೀಲರ್ ಶಿಪ್ ವೊಂದರಲ್ಲಿ ನೂತನ ಎಪ್ರಿಲಿಯಾ ಎಸ್‌ಆರ್ ಮೋಟಾರ್ಡ್ 125 ಪತ್ತೆಯಾಗಿದ್ದು, ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಮತ್ತು ವಿವರಗಳನ್ನು ವಾಹನ ಪ್ರೇಮಿಗಳ ಜೊತೆಗೆ ಹಂಚಿಕೊಳ್ಳಲಾಗುತ್ತಿದೆ.

ವೆಸ್ಪಾ ಬಳಿಕ ಮಗದೊಂದು ಐಕಾನಿಕ್ ಸ್ಕೂಟರ್ ಬ್ರಾಂಡ್ ಪರಿಚಯಿಸಲು ಬದ್ಧವಾಗಿರುವ ಇಟಲಿಯ ಮೂಲದ ಪಿಯಾಜಿಯೊ ಸಂಸ್ಥೆಯು ಪ್ರಸಕ್ತ ತಿಂಗಳಲ್ಲೇ ಎಪ್ರಿಲಿಯಾ ಎಸ್‌ಆರ್ 150 ಸ್ಕೂಟರನ್ನು ಬಿಡುಗಡೆ ಮಾಡಲಿದೆ.

ಈ ನಡುವೆ ಎಪ್ರಿಲಿಯಾ ಎಸ್‌ಆರ್ ಮೋಟಾರ್ಸ್ 125 ಸಹ ಶೋ ರೂಂಗಳಲ್ಲಿ ಪ್ರತ್ಯಕ್ಷಗೊಂಡಿರುವುದು ಅಚ್ಚರಿ ಮೂಡಿಸಿದೆ. ಇದು 150 ಆವೃತ್ತಿಯ ಬೆನ್ನಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ.

ಮೊದಲ ನೋಟದಲ್ಲಿ ಎಸ್‌ಆರ್150 ವಿನ್ಯಾಸಕ್ಕೆ ಸಾಮತ್ಯೆಯನ್ನು ಪಡೆದುಕೊಂಡಿರುವ ಎಸ್‌ಆರ್ ಮೋಟಾರ್ಡ್ 125, ಚಿಟ್ಟೆಯಾಕಾರದ ಹೆಡ್ ಲ್ಯಾಂಪ್, ಸ್ಟೀರಿಂಗ್ ಮೌಂಟೆಡ್ ಟರ್ನ್ ಇಂಡಿಕೇಟರ್, ಟ್ವಿನ್ ಪಾಡ್ ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸಾಲ್, ಬಾಗಿದ ಎಂಜಿನ್ ಕವರ್, ಡ್ಯುಯಲ್ ಟೋನ್ ಸೀಟು, 14 ಇಂಚುಗಳ ಅಲಾಯ್ ವೀಲ್ ಇತ್ಯಾದಿ ಸೌಲಭ್ಯಗಳಿರಲಿದೆ.

125ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಎಪ್ರಿಲಿಯಾ ಎಸ್‌ಆರ್ 150 ಆರ್, 8.2 ಎನ್ ಎಂ ತಿರುಗುಬಲದಲ್ಲಿ 9.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ತಾಂತ್ರಿಕತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಟ್ಯೂಬಲರ್ ಸ್ಟೀಲ್ ಫ್ರೇಮ್, ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್, ಸಿಂಗಲ್ ಸೈಡಡ್ ರಿಯರ್ ಸ್ಪ್ರಿಂಗ್ ವ್ಯವಸ್ಥೆಯನ್ನು ಕಾಣಬಹುದಾಗಿದೆ.

ಇನ್ನು ಮುಂದುಗಡೆ 220 ಎಂಎಂ ಡಿಸ್ಕ್ ಹಾಗೂ ಹಿಂದುಗಡೆ 140 ಎಂಎಂ ಡ್ರಮ್ ಬ್ರೇಕ್ ಜೋಡಣೆ ಮಾಡಲಾಗಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಪರೀಕ್ಷಾರ್ಥ ಚಾಲನೆಯ ಭಾಗವಾಗಿ ಎಪ್ರಿಲಿಯಾ ಎಸ್ ಆರ್ ಮೋಟಾರ್ಡ್ 125, ಬೆಂಗಳೂರಿಗೆ ತರಿಸಲಾಗಿದೆ. ಆದರೂ ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.

ಇನ್ನೊಂದೆಡೆ ಎಪ್ರಿಲಿಯಾ ಎಸ್‌ಆರ್150 ಮುಂಗಡ ಬುಕ್ಕಿಂಗ್ ದರ 5,000 ರು.ಗಳಾಗಿದ್ದು, ಆನ್ ರೋಡ್ ಬೆಲೆಯು ಸರಿ ಸುಮಾರು 80,000 ರು.ಗಳಷ್ಟು ದುಬಾರಿಯೆನಿಸಲಿದೆ.

ದೇಶದ ಚೊಚ್ಚಲ ಕ್ರಾಸೋವರ್ ಸ್ಪೋರ್ಟ್-ಸ್ಕೂಟರ್ ಬೈಕಾಗಿರುವ ಎಪ್ರಿಲಿಯಾ ಎಸ್‌ಆರ್150, ಪ್ರಮುಖವಾಗಿಯೂ ದೇಶದ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಿದೆ.

ಕ್ರೀಡಾತ್ಮಕ ಬೈಕ್ ಗಳ ಶಕ್ತಿ ಹಾಗೂ ಆಟೋಮ್ಯಾಟಿಕ್ ಸ್ಕೂಟರ್ ಗಳ ಅನುಕೂಲತೆಗಳು ಎಪ್ರಿಲಿಯಾ ಎಸ್ಆರ್150 ಬೈಕ್ ನ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಅಲ್ಲದೆ ಮೋಟಾರ್ ಸೈಕಲ್ ಹಾಗೂ ಸ್ಕೂಟರಿಂದ ಸ್ಪೂರ್ತಿ ಪಡೆದು ವಿಶಿಷ್ಟ ವಿನ್ಯಾಸವನ್ನು ರಚಿಸಲಾಗಿದೆ.

ಎಂಜಿನ್
ಎಂಜಿನ್: 154.4 ಸಿಸಿ, 4 ಸ್ಟ್ರೋಕ್
ಪವರ್: 11.6 ಅಶ್ವಶಕ್ತಿ
ಟಾರ್ಕ್: 11.5 ಎನ್ ಎಂ

ವಿಶಿಷ್ಟತೆ
ಸ್ಪೋರ್ಟಿ ಹ್ಯಾಂಡಲ್ ಬಾರ್,
ಇಂಟೇಗ್ರೇಟಡ್ ಟರ್ನ್ ಇಂಡಿಕೇಟರ್ ಲೈಟ್,
ಡಬಲ್ ಬ್ಯಾರೆಲ್ ಹೆಡ್ ಲೈಟ್,
ಟ್ವಿನ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,

ಸಸ್ಪೆನ್ಷನ್
ಫ್ರಂಟ್ ಸಸ್ಪೆನ್ಷನ್: ಹೈಡ್ರಾಲಿಕ್ ಟೆಲಿಸ್ಕಾಪಿಕ್ ಫಾರ್ಕ್ 32 ಎಂಎಂ
ರಿಯರ್ ಸಸ್ಪೆನ್ಷನ್: ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್

ಬ್ರೇಕ್
ಫ್ರಂಟ್ ಬ್ರೇಕ್: 220 ಎಂಎಂ ಡಿಸ್ಕ್ ಜೊತೆ ಟ್ವಿನ್ ಪಿಸ್ತಾನ್ ಕ್ಯಾಲಿಪರ್
ರಿಯರ್ ಬ್ರೇಕ್: ಡ್ರಮ್ 240 ಎಂಎಂ

ಇಂಧನ ಟ್ಯಾಂಕ್: 6 ಲೀಟರ್
ದೇಹ ಬಣ್ಣ: ಮ್ಯಾಟ್ ಬ್ಲ್ಯಾಕ್, ವೈಟ್

ಚಕ್ರಗಳು
ಫ್ರಂಟ್ ಚಕ್ರ: ಟ್ಯೂಬ್ ಲೆಸ್ 120/70 - 14 ಇಂಚುಗಳು
ರಿಯರ್ ಚಕ್ರ: ಟ್ಯೂಬ್ ಲೆಸ್ 120/70 - 14 ಇಂಚುಗಳು


Click it and Unblock the Notifications








