ವೆಸ್ಪಾ ಶ್ರೇಣಿಯ ಸ್ಕೂಟರ್ ಗಳನ್ನು ಮೀರಿಸಿದ ಎಪ್ರಿಲಿಯಾ
ಎಪ್ರಿಲಿಯಾ
ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಪಿಯಾಜಿಯೊ, ಭಾರತಕ್ಕೆ ಈಗಾಗಲೇ ಎರಡು ಜನಪ್ರಿಯ ಸ್ಕೂಟರ್ ಬ್ರಾಂಡ್ ಗಳನ್ನು ದೇಶಕ್ಕೆ ಪರಿಚಯಿಸಿದೆ. ಅವುಗಳೇ ವೆಸ್ಪಾ ಮತ್ತು ಎಪ್ರಿಲಿಯಾ. ಈ ಪೈಕಿ ಮೊದಲು ವೆಸ್ಪಾವನ್ನು ಪರಿಚಯಿಸಿದರೆ ಎಪ್ರಿಲಿಯಾ ಪ್ರಸಕ್ತ ಸಾಲಿನಲ್ಲಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಆದರೆ ಬಿಡುಗಡೆಯಾದ ಮೂರು ತಿಂಗಳ ಅವಧಿಯಲ್ಲಿ ಮಾರಾಟ ಓಟದಲ್ಲಿ ತನ್ನ ಸೋದರಿಯನ್ನು ಹಿಂದಿಕ್ಕುವಲ್ಲಿ ಎಪ್ರಿಲಿಯಾ ಯಶ ಕಂಡಿದೆ.

ವೆಸ್ಪಾ ಪ್ರೀಮಿಯಂ ಶ್ರೇಣಿಯ ಸ್ಕೂಟರ್ ಗಳನ್ನು ದೇಶದಲ್ಲಿ ಒದಗಿಸುತ್ತಿದೆ. ಇದಕ್ಕಿಂತಲೂ ಪ್ರೀಮಿಯಂ ಸ್ಥಾನವನ್ನು ಎಪ್ರಿಲಿಯಾ ಎಸ್ ಆರ್ 150 ತುಂಬಿಕೊಂಡಿತ್ತು.

2016 ಆಗಸ್ಟ್ ತಿಂಗಳಲ್ಲಿ ಎಪ್ರಿಲಿಯಾ ಎಸ್ ಆರ್ 150 ಸಿಸಿ ಸ್ಕೂಟರ್ ದೇಶದಲ್ಲಿ ಬಿಡುಗಡೆಗೊಂಡಿತ್ತು. ಅಕ್ಟೋಬರ್ ವೇಳೆಯಾಗುವ ಈ ಪ್ರೀಮಿಯಂ ಸ್ಕೂಟರ್ ಹೆಚ್ಚಿನ ಬೇಡಿಕೆಯನ್ನು ಕಾಪಾಡಿಕೊಂಡಿದೆ.

ವಾಹನೋದ್ಯಮದಿಂದ ಬಂದಿರುವ ಮೂಲಗಳ ಪ್ರಕಾರ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾದ ಎಪ್ರಿಲಿಯಾ ಎಸ್ ಆರ್ 150 ಸ್ಕೂಟರ್ ಇದುವರೆಗೆ 3,403 ಯುನಿಟ್ ಗಳ ಮಾರಾಟವನ್ನು ಕಂಡಿದೆ.

ಇನ್ನೊಂದೆಡೆ ವೆಸ್ಪಾ ಶ್ರೇಣಿಯ ಸ್ಕೂಟರ್ ಗಳು ಅಕ್ಟೋಬರ್ ತಿಂಗಳಲ್ಲಿ 2,700 ಯುನಿಟ್ ಗಳ ಮಾರಾಟವನ್ನು ದಾಖಲಿಸುವಲ್ಲಿ ಯಶ ಕಂಡಿದೆ.

ಮಹಾರಾಷ್ಟ್ರದ ಬರಮತಿಯಲ್ಲಿ ಸ್ಥಿತಗೊಂಡಿರುವ ಪಿಯಾಜಿಯೊ ಘಟಕದಲ್ಲಿ ಎಪ್ರಿಲಿಯಾ ಎಸ್ ಆರ್ 150 ಮತ್ತು ವೆಸ್ಪಾ ಸ್ಕೂಟರ್ ಗಳನ್ನು ನಿರ್ಮಿಸಲಾಗುತ್ತಿದೆ.

ಆಕ್ರಮಣಕಾರಿ ಜೊತೆಗೆ ಕ್ರೀಡಾತ್ಮಕ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿರುವ ಎಪ್ರಿಲಿಯಾ ಎಸ್ 150 ಸ್ಕೂಟರ್ ಮೊದಲ ಬಾರಿಗೆ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿತ್ತು.

ವಿನ್ಯಾಸ
ಆಕ್ರಮಣಕಾರಿ, ಅಗತ್ಯ ಮತ್ತು ಕಾಂಪಾಕ್ಟ್ ಶೈಲಿ
ಸ್ಪೋರ್ಟ್ ಡಿಸೈನ್ ಹ್ಯಾಂಡಲ್ ಬಾರ್,
ಸ್ಟ್ರೀಮ್ ಫ್ರೇಮ್ ರಚನೆಯಿಂದ ಹೆಚ್ಚಿನ ಬಿಗಿತ,
ಏರೋಡೈನಾಮಿಕ್ ವಿನ್ಯಾಸ

ಎಂಜಿನ್
155 ಸಿಸಿ, 3 ವಾಲ್ವ್, 4 ಸ್ಟ್ರೋಕ್
11.6 ಪಿಎಸ್ @ 7000 ಆರ್ ಪಿಎಂ
11.5 ಎನ್ ಎಂ ತಿರುಗುಬಲ @ 5500 ಆರ್ ಪಿಎಂ

ವಿಶಿಷ್ಟತೆಗಳು
14 ಇಂಚುಗಳ ಬ್ಲ್ಯಾಕ್ 5 ಸ್ಪೋಕ್ ಅಲಾಯ್ ವೀಲ್,
ಟ್ಯೂಬೆಲೆಸ್ ಅಗಲವಾದ ಸ್ಪೋರ್ಟ್ ಸ್ಟ್ರೀಟ್ ಚಕ್ರಗಳು,
ಇಂಟೇಗ್ರೇಟಡ್ ಟರ್ನ್ ಇಂಡಿಕೇಟರ್ ಲೈಟ್,
ಡಬಲ್ ಬ್ಯಾರೆಲ್ ಹೆಡ್ ಲೈಟ್,
ಟ್ವಿನ್ ಪೊಡ್ ಅನಲಾಗ್ ಯುನಿಟ್ ಸ್ಪೀಡೋಮೀಟರ್,
ಫ್ಯೂಯಲ್ ಗೇಜ್,
ಓಡೋಮೀಟರ್


Click it and Unblock the Notifications








