ಸಾಹಸ ಪ್ರಿಯರಿಗಾಗಿ ಹೋಂಡಾ ಆಫ್ರಿಕಾ ಟ್ವಿನ್ ಬೈಕ್
ಸಾಹಸ ರೈಡಿಂಗ್ ಪ್ರಿಯರಿಗಾಗಿ ಅತಿ ನೂತನ ಬೈಕ್‌ವೊಂದರ ಪ್ರವೇಶವಾಗಿದೆ. ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ಸ್ ಆ್ಯಂಡ್ ಸ್ಕೂಟರ್ಸ್ ಇಂಡಿಯಾ (ಎಚ್‌ಎಂಎಸ್‌ಐ) ಸಂಸ್ಥೆಯು ದೆಹಲಿಯಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಆಫ್ರಿಕಾ ಟ್ವಿನ್ ಅಡ್ವೆಂಚರ್ ಬೈಕ್ ಅನಾವರಣಗೊಳಿಸಿದೆ.
ಇಲ್ಲಿ ಗಮನಾರ್ಹ ಅಂಶವೆಂದರೆ ಜಪಾನ್ ಮೂಲದ ಹೋಂಡಾ ಆಫ್ರಿಕಾ ಟ್ವಿನ್ ಭಾರತದಲ್ಲೇ ಸ್ಥಳೀಯವಾಗಿ ಜೋಡಣೆಯಾಗಲಿದ್ದು, ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

2016 ವರ್ಷಾಂತ್ಯದ ವೇಳೆಯಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸುವ ಇರಾದೆ ಹೊಂದಿರುವ ನೂತನ ಹೋಂಡಾ ಆಫ್ರಿಕಾ ಟ್ವಿನ್, 998 ಸಿಸಿ ಪ್ಯಾರಲಲ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.
94 ಅಶ್ವಶಕ್ತಿ (7500 ಆರ್‌ಪಿಎಂ)
98 ಎನ್‌ಎಂ ತಿರುಗುಬಲ (6000 ಆರ್‌ಪಿಎಂ) ಜೊತೆಗೆ ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (ಎಚ್‌ಎಸ್‌ಟಿಸಿ)
ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್.
ಆಫ್ ರೋಡ್ ಸವಾರರಿಗೆ ಪರಿಪೂರ್ಣ ಚಾಲನಾ ಅನುಭವ ನೀಡಲಿರುವ ನೂತನ ಹೋಂಡಾ ಆಫ್ರಿಕಾ ಟ್ವಿನ್ ಸಂಪೂರ್ಣವಾಗಿ ಹೊಂದಾಣಿಸಬಹುದಾದ ಲಾಂಗ್ ಟ್ರಾವೆಲ್ ಶೋವಾ ಫಾರ್ಕ್ ಮತ್ತು ಶಾಕ್ ಅಬ್ಸಾರ್ಬರ್ ಪಡೆಯಲಿದೆ. ಇನ್ನು 310 ಎಂಎಂ ಫ್ರಂಟ್ ಮತ್ತು 256 ಎಂಎಂ ರಿಯರ್ ಡಿಸ್ಕ್ ಬ್ರೇಕ್ ಗಳು, ಮುಂಭಾಗದಲ್ಲಿ 21 ಇಂಚು ಹಾಗೂ ಹಿಂಭಾಗದಲ್ಲಿ 18 ಇಂಚುಗಳ ಚಕ್ರಗಳು ಇರಲಿದೆ.
ಗ್ರೌಂಡ್ ಕ್ಲಿಯರನ್ಸ್: 250 ಎಂಎಂ
ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಎಬಿಎಸ್ ಸೌಲಭ್ಯವೂ ಲಭ್ಯವಾಗಲಿದೆ. ಇನ್ನುಳಿದಂತೆ ಟ್ವಿನ್ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಇಂಡಿಕೇಟರ್, 18.8 ಇಂಧನ ಟ್ಯಾಂಕ್ ಇದರಲ್ಲಿದ್ದು, 400 ಕೀ.ಮೀ. ವ್ಯಾಪ್ತಿಯ ವರೆಗೆ ಸಂಚರಿಸಬಹುದಾಗಿದೆ.


Click it and Unblock the Notifications

































