ರೋಮಾಂಚನದ ರಂಗು ಮೆರೆದ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

By Nagaraja

2016 ಆಟೋ ಎಕ್ಸ್ ಪೋದಲ್ಲಿ ಹೊಸ ಆತಿಥಿಯೊಂದರ ಆಗಮನವಾಗಿತ್ತು. ನೆರೆದಿದ್ದ ವಾಹನ ಪ್ರೇಮಿಗಳಲ್ಲಿ ರೋಮಾಂಚನದ ರಂಗು ಮೆರೆದಿರುವ ಇಟಲಿಯ ಐಕಾನಿಕ್ ಪಿಯಾಜಿಯೊ ಸಂಸ್ಥೆಯ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್ ಭಾರತ ಪ್ರವೇಶಿಸಿದೆ.

2016 ಆಟೋ ಎಕ್ಸ್ ವಿಶೇಷ ಪುಟಕ್ಕೆ ಭೇಟಿ ಕೊಡುತ್ತಿರಿ

ಈಗಾಗಲೇ ವೆಸ್ಪಾ ಬ್ರಾಂಡ್ ದೇಶಕ್ಕೆ ಪರಿಚಯಿಸಿರುವ ಪಿಯಾಜಿಯೊ, ಈ ಮುಖಾಂತರ ಎಪ್ರಿಲಿಯಾ ಭಾರತ ಪ್ರವೇಶಕ್ಕೆ ಮುನ್ನುಡಿ ಬರೆದಿದೆ. ನೂತನ ಎಪ್ರಿಲಿಯಾ ಎಸ್‌ಆರ್150 ಒಂದು ಕ್ರಾಸೋವರ್ ಶೈಲಿಯ ಸ್ಕೂಟರ್ ಎನಿಸಿಕೊಳ್ಳಲಿದೆ.

ರೋಮಾಂಚನದ ರಂಗು ಮೆರೆದ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಪ್ರಸಕ್ತ ಸಾಲಿನ ಆಗಸ್ಟ್ ತಿಂಗಳ ವೇಳೆಯಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಹೊಂದಿರುವ ಎಪ್ರಿಲಿಯಾ ಎಸ್ಆರ್150 ಪ್ರೀಮಿಯಂ ಸ್ಕೂಟರ್, ಸವಾರರಿಗೆ ಹೊಸ ಅನುಭವಕ್ಕೆ ಕಾರಣವಾಗಲಿದೆ.

ರೋಮಾಂಚನದ ರಂಗು ಮೆರೆದ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಬೈಕ್ ಗಳಲ್ಲಿರುವಂತೆಯೇ 14 ಇಂಚುಗಳ ಬೃಹತ್ತಾದ ಚಕ್ರಗಳನ್ನು ಹೊಂದಿರುವ ಎಪ್ರಿಲಿಯಾ ಎಸ್ಆರ್150, ಸ್ಕೂಟರ್ ಗಳಂತೆ ಆಟೋ ಗೇರ್ ನಲ್ಲಿ ಚಲಿಸಲಿದೆ.

ರೋಮಾಂಚನದ ರಂಗು ಮೆರೆದ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಪ್ರಮುಖವಾಗಿಯೂ ಕ್ರೀಡಾ ಬೈಕ್ ಇಷ್ಟಪಡುವ ಗ್ರಾಹಕರನ್ನು ಎಪ್ರಿಲಿಯಾ ಗುರಿ ಮಾಡಿಕೊಳ್ಳಲಿದೆ. ಇದು ನಿಮ್ಮ ದೈನಂದಿನ ಅಗತ್ಯಗಳಿಗೆ ಹೇಳಿ ಮಾಡಿಸಿದಂತಹ ಸ್ಕೂಟರ್ ಆಗಿದೆ.

ರೋಮಾಂಚನದ ರಂಗು ಮೆರೆದ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಸಾಂಪ್ರದಾಯಿಕ ಆಟೋಮ್ಯಾಟಿಕ್ ಸ್ಕೂಟರ್ ಗಿಂತಲೂ ಮಿಗಿಲಾಗಿ ಎಪ್ರಿಲಿಯಾ ಎಸ್ಆರ್150 ಒಂದು ಕ್ರಾಸೋವರ್ ಕ್ರೀಡಾ ಸ್ಕೂಟರ್ ಎನಿಸಿಕೊಳ್ಳಲಿದೆ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ.

ರೋಮಾಂಚನದ ರಂಗು ಮೆರೆದ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಇನ್ನು ಬ್ರೇಕ್ ಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂದುಗಡೆ 220 ಎಂಎಂ ಡಿಸ್ಕ್ ಹಾಗೂ ಹಿಂಬದಿಯಲ್ಲಿ 140 ಎಂಎಂ ಡ್ರಮ್ ಬ್ರೇಕ್ ಕಂಡುಬರಲಿದೆ.

ರೋಮಾಂಚನದ ರಂಗು ಮೆರೆದ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಪುಣೆಯಲ್ಲಿ ಸ್ಥಿತಗೊಂಡಿರುವ ಪಿಯಾಜಿಯೊದ ಬರಮತಿ ಘಟಕದಲ್ಲಿ ಎಪ್ರಿಲಿಯಾ ಎಸ್ಆರ್150 ಸ್ಕೂಟರ್ ಗಳು ಸ್ಥಳೀಯವಾಗಿ ನಿರ್ಮಾಣವಾಗಲಿದೆ. ಇದು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ನರೆವಾಗಲಿದೆ.

ರೋಮಾಂಚನದ ರಂಗು ಮೆರೆದ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಎಪ್ರಿಲಿಯಾ ಎಸ್ಆರ್150 ಸ್ಕೂಟರ್ ನಲ್ಲಿ ವೆಸ್ಪಾ 150 ಮಾದರಿಯಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ. ಇದು 11.5 ಎನ್ ಎಂ ತಿರುಗುಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ರೋಮಾಂಚನದ ರಂಗು ಮೆರೆದ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಅಂದ ಹಾಗೆ ಒಮ್ಮೆ ಭಾರತದಲ್ಲಿ ಬಿಡುಗಡೆಯಾದಾಗ ಎಪ್ರಿಲಿಯಾ ಎಸ್ಆರ್150 ಸ್ಕೂಟರ್ 80,000 ರು.ಗಳಿಂದ ಒಂದು ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

More from DriveSpark

Article Published On: Friday, February 12, 2016, 9:16 [IST]
English summary
Aprilia SR 150 debuts at Auto Expo 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+