ಟಿವಿಎಸ್ ಸಾರಥ್ಯದಲ್ಲಿ ಬಿಎಂಡಬ್ಲ್ಯು ಚೊಚ್ಚಲ ಬೈಕ್ ಭಾರತಕ್ಕೆ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ 13ನೇ ಆವೃತ್ತಿಯ ದೇಶದ ಬೃಹತ್ ವಾಹನ ಪ್ರದರ್ಶನ ಮೇಳದಲ್ಲಿ ಜರ್ಮನಿಯ ಮೂಲದ ಪ್ರಖ್ಯಾತ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಅತಿ ನೂತನ ಜಿ310ಆರ್ ಬೈಕನ್ನು ಅನಾವರಣಗೊಳಿಸಿದೆ.
2016 ಆಟೋ ಎಕ್ಸ್ ಪೋ ತಾಜಾ ಸುದ್ದಿಗಾಗಿ ಇಲ್ಲಿಗೆ ಭೇಟಿ ಕೊಡುತ್ತಿರಿ
ಬಿಎಂಡಬ್ಲ್ಯು ಮೊಟೊರಾಡ್ ಪರಿಚಯಿಸಿರುವ ನೂತನ ಬೈಕ್ ಹಲವಾರು ಕಾರಣಗಳಿಂದಾಗಿ ನಿರ್ಣಾಯಕವೆನಿಸುತ್ತಿದೆ. ಇದು ಬಿಎಂಡಬ್ಲ್ಯು ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಚೊಚ್ಚಲ ಎಂಟ್ರಿ ಲೆವೆಲ್ ಬೈಕಾಗಿದೆ.

ಅಷ್ಟೇ ಯಾಕೆ ಜಿ310ಆರ್ ಬೈಕನ್ನು ಸಂಸ್ಥೆಯ ಜರ್ಮನಿಯ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಭಾರತದಲ್ಲಿ ಟಿವಿಎಸ್ ಮೋಟಾರ್ಸ್ ಸಾರಥ್ಯದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಟಿವಿಎಸ್ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಜಿ310ಆರ್ ಮುಂಬರುವ ದಿನಗಳಲ್ಲಿ ದೇಶದ ರಸ್ತೆಗಳಲ್ಲಿ ಭಾರಿ ಸದ್ದು ಮಾಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಎಂಜಿನ್ ತಾಂತ್ರಿಕತೆ
- 313 ಸಿಸಿ ವಾಟರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಜೊತೆ ಓವರ್ ಹೆಡ್ ಕಾಮ್ ಶಾಪ್ಟ್,
- 33.6 ಅಶ್ವಶಕ್ತಿ (9500 ಆರ್‌ಪಿಎಂ)
- 28 ಎನ್‌ಎಂ ತಿರುಗುಬಲ ಅಶ್ವಶಕ್ತಿ (7500 ಆರ್‌ಪಿಎಂ)
- ಗರಿಷ್ಠ ವೇಗ ಗಂಟೆಗೆ 145 ಕೀ.ಮೀ.
- ಮೈಲೇಜ್: 30 ಕೀ.ಮೀ.
- ಗೇರ್ ಬಾಕ್ಸ್: 6 ಸ್ಪೀಡ್
- ಇಂಧನ ಟ್ಯಾಂಕ್: 11 ಲೀಟರ್
- ಭಾರ: 158 ಕೆ.ಜಿ.


ಬೆಂಗಳೂರು ಸಮೀಪದ ಹೊಸೂರುನಲ್ಲಿ ಸ್ಥಿತಗೊಂಡಿರುವ ಟಿವಿಎಸ್ ಘಟಕದಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ನಿರ್ಮಾಣಗೊಳ್ಳುತ್ತಿರುವುದು ಮಗದೊಂದು ವಿಶೇಷತೆಯಾಗಿದೆ.

ಬಿಎಂಡಬ್ಲ್ಯು ಶಕ್ತಿಶಾಲಿ ಬೈಕ್ ಗಳಾದ ಎಸ್ 1000 ಆರ್ ಆರ್ ಮತ್ತು ಆಱ್ 1200 ಆರ್ ಬೈಕ್ ಗಳಿಂದ ವಿನ್ಯಾಸ ಪ್ರೇರಣೆ ಪಡೆದುಕೊಂಡು ಇದನ್ನು ನಿರ್ಮಿಸಲಾಗಿದೆ.

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಎಬಿಎಸ್ ತಂತ್ರಜ್ಞಾನವೂ ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಲಿದೆ.

ಉಳಿದಂತೆ ಯುಎಸ್‌ಡಿ ಫ್ರಂಟ್ ಫಾರ್ಕ್ ಹಾಗೂ ಮೊನೊಶಾಕ್ ರಿಯರ್ ಸಸ್ಪೆನ್ಷನ್ ವ್ಯವಸ್ಥೆಗಳನ್ನು ಪಡೆಯಲಿದೆ. ಅಂತೆಯೇ ಮುಂಭಾಗದಲ್ಲಿ 300 ಎಂಎಂ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ.

ಒಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲೇ ಮಾರುಕಟ್ಟೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ಮೊಟೊರಾಡ್ ಜಿ310ಆರ್, ಕೆಟಿಎಂ ಮುಂತಾದ ಬೈಕ್ ಗಳಿಗೆ ಪ್ರಬಲ ಪೈಪೋಟಿಯನ್ನು ಒಡ್ಡಲಿದೆ.


Click it and Unblock the Notifications








