ಕಿಡಿ ಹೊತ್ತಿಸಿದ ಯಮಹಾ ಎಂಟಿ-09 ಸ್ಟ್ರೀಟ್ ಫೈಟರ್
ದೇಶದ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ವಿಭಾಗದಲ್ಲಿ ರಾಜಾರೋಷ ಮೆರೆದಿರಿರುವ ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಯಮಹಾ, 2016 ಆಟೋ ಎಕ್ಸ್ ಪೋದಲ್ಲಿ ಬಾಲಿವುಡ್ ನಟ ಜಾನ್ ಅಬ್ರಹಾಂ ಸಾರಥ್ಯದಲ್ಲಿ ಅತಿ ದುಬಾರಿ ಎಂಟಿ-09 ಬೈಕ್ ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 10.20 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ಯಮಹಾದ ಮುಖ್ಯ ಪ್ರಚಾರ ರಾಯಭಾರಿ ಕೂಡಾ ಆಗಿರುವ ಜಾನ್ ಅಬ್ರಹಾಂ, ಎಂಟಿ-09 ಮಾರಾಟಕ್ಕೆ ಉತ್ತೇಜನ ತುಂಬಲಿದ್ದಾರೆ. ಇದು ಮುಂದಿನ ದಿನಗಳಲ್ಲಿ ಶ್ರೀಮಂತ ಜೀವನಶೈಲಿಯ ಬೈಕ್ ಖರೀದಿಗಾರರ ಪ್ರೀತಿಗೆ ಪಾತ್ರವಾಗಲಿದೆ.

ಎಂಜಿನ್ ತಾಂತ್ರಿಕತೆ
847 ಸಿಸಿ ಲಿಕ್ವಿಡ್ ಕೂಲ್ಡ್ ಇನ್ ಲೈನ್ ಟ್ರಿಪಲ್ ಜೊತೆ ಡ್ಯುಯಲ್ ಓವರ್ ಹೆಡ್ ಕಾಮ್ ಶಾಫ್ಟ್.
112.4 ಅಶ್ವಶಕ್ತಿ (10000 ಆರ್‌ಪಿಎಂ)
87.5 ಎನ್‌ಎಂ ತಿರುಗುಬಲ ಅಶ್ವಶಕ್ತಿ (8500 ಆರ್‌ಪಿಎಂ)
ವೇಗವರ್ಧನೆ: 3.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗ: ಗಂಟೆಗೆ 225 ಕೀ.ಮೀ.
ಮೈಲೇಜ್: 19.1 ಕೀ.ಮೀ.
ಗೇರ್ ಬಾಕ್ಸ್: 6 ಸ್ಪೀಡ್
ಇಂಧನ ಟ್ಯಾಂಕ್: 14 ಲೀಟರ್
ಭಾರ: 188 ಕೆ.ಜಿ
ಸಸ್ಪೆನ್ಷನ್ ಮತ್ತು ಬ್ರೇಕ್
137 ಎಂಎಂ ಟ್ರಾವೆಲ್ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಹಾಗೂ 130 ಎಂಎಂ ಟ್ರಾವೆಲ್ ಲಿಂಕ್ ಟೈಪ್ ಮೊನೊಶಾಕ್ ಸಸ್ಪೆನ್ಷನ್ ಇದರಲ್ಲಿರಲಿದೆ. ಅಂತೆಯೇ ಮುಂಭಾಗದಲ್ಲಿ 298 ಎಂಎಂ ಟ್ವಿನ್ ಹೈಡ್ರಾಲಿಕ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 245 ಎಂಎಂ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಗಳಿರಲಿದೆ.
ವಿಶಿಷ್ಟತೆಗಳು
ಡೈಮಂಡ್ ಟೈಪ್ ಚಾಸೀ,
ಡೈಕಾಸ್ಟ್ ಅಲ್ಯೂಮಿನಿಯಂ ಫ್ರೇಮ್,
ಸ್ವಿಗ್ ಆರ್ಮ್,
ರೈಡ್ ಬೈ ವೈರ್ ಸಿಸ್ಟಂ,
ಮೂರು ಚಾಲನಾ ವಿಧಗಳು,
ಟ್ರಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್
ಶೈಲಿ
ಒಂದು ನೆಕ್ಡ್ ಸ್ಟ್ರೀಟ್ ಫೈಟರ್ ಗೆ ಬೇಕಾದ ಎಲ್ಲ ಸವಲತ್ತುಗಳನ್ನು ಯಮಹಾ ಎಂಟಿ-09 ಪಡೆದಿದೆ. ಮುಂಭಾಗದಲ್ಲಿ ಶಕ್ತಿಯುತ ಇಂಧನ ಟ್ಯಾಂಕ್ ಮೇಲೆ ಯಮಹಾ ಲಾಂಛನಾ ಹಾಗೂ ಒಟ್ಟಾರೆ ನಿಖರ ವಿನ್ಯಾಸವನ್ನು ಕಾಪಾಡಿಕೊಂಡಿದೆ.
ಲಭ್ಯತೆ ಮತ್ತು ಪ್ರತಿಸ್ಪರ್ಧಿಗಳು
ದೇಶದ್ಯಾಂತ ಯಮಹಾ ಅಧಿಕೃತ ಶೋ ರೂಂಗಳನ್ನು ತಲುಪಲಿರುವ ಯಮಹಾ ಎಂಟಿ-09 ಪ್ರಮುಖವಾಗಿಯೂ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಮತ್ತು ಕವಾಸಕಿ ಝಡ್800 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications
























































































