ವಿಶಿಷ್ಟ ಶೈಲಿಯ ಸ್ಕೂಟರ್ ಯಮಹಾ ಎನ್ ಮ್ಯಾಕ್ಸ್
2016 ಆಟೋ ಎಕ್ಸ್ ಪೋದಲ್ಲಿ ಅನೇಕ ವಿಶಿಷ್ಟ ಶೈಲಿಯ ಸ್ಕೂಟರ್ ಗಳ ಪ್ರವೇಶವಾಗಿದೆ. ಇವುಗಳಲ್ಲಿ ಜಪಾನ್ ಮೂಲದ ಇಂಡಿಯಾ ಯಮಹಾ ಮೋಟಾರು ಸಂಸ್ಥೆ ಪ್ರದರ್ಶಿಸಿರುವ 2016 ಎನ್ ಮ್ಯಾಕ್ಸ್ ಹೆಚ್ಚಿನ ಗಮನ ಸೆಳೆಯಲು ಯಶಸ್ವಿಯಾಗಿತ್ತು.
2016 ಆಟೋ ಎಕ್ಸ್ ಪೋದಲ್ಲಿ ತನ್ನ ಶ್ರೇಣಿಯ ವಾಹನಗಳನ್ನು ಪ್ರದರ್ಶಿಸಿರುವ ಯಮಹಾ, ವಿಭಿನ್ನ ಶೈಲಿಯ ಎನ್ ಮ್ಯಾಕ್ ಮುಖಾಂತರ ಹೆಚ್ಚಿನ ಕುತೂಹಲ ಕಾಪಾಡಿಕೊಂಡಿರುವುದಂತೂ ನಿಜ. ಈ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ನೂತನ 2016 ಯಮಹಾ ಎನ್ ಮ್ಯಾಕ್ಸ್ 125 ಸಿಸಿ ಲಿಕ್ವಿಡ್ ಕೂಲ್ಡ್ ಎಸ್‌ಒಎಚ್ ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 11.7 ಎನ್‌ಎಂ ತಿರುಗುಬಲದಲ್ಲಿ (7,250 ಆರ್‌ಪಿಎಂ) 12 ಅಶ್ವಶಕ್ತಿಯನ್ನು (7,500 ಆರ್‌ಪಿಎಂ) ಉತ್ಪಾದಿಸಲಿದೆ.

ನಾಲ್ಕು ವಾಲ್ವ್ ಹಾಗೂ ಫ್ಯೂಯಲ್ ಇಂಜೆಕ್ಷನ್ ವ್ಯವಸ್ಥೆಯನ್ನು ಹೊಂದಿರುವ ಯಮಹಾ ಎನ್ ಮ್ಯಾಕ್ಸ್ ವಿ ಬೆಲ್ಟ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದೆ.

ಸಂಸ್ಥೆಯ ಪ್ರಕಾರ 2016 ಯಮಹಾ ಎನ್ ಮ್ಯಾಕ್ಸ್ ಪ್ರತಿ ಲೀಟರ್ ಗೆ 45.6 ಕೀ.ಮೀ. ಮೈಲೇಜ್ ನೀಡುವಲ್ಲಿ ಸಕ್ಷಮವಾಗಿರಲಿದೆ.

ಆಯಾಮ (ಎಂಎಂ)
ಉದ್ದ: 1995
ಅಗಲ: 740
ಎತ್ತರ: 1115
ಚಕ್ರಾಂತರ: 1350

ಆಯಾಮ (ಎಂಎಂ)
ಸೀಟು ಎತ್ತರ: 765
ಗ್ರೌಂಡ್ ಕ್ಲಿಯರನ್ಸ್: 135
ಭಾರ: 127 ಕೆ.ಜಿ.
ಇಂಧನ ಟ್ಯಾಂಕ್: 6.6 ಲೀಟರ್

ಸಸ್ಪೆನ್ಷನ್
ಟೆಲಿಸ್ಕಾಪಿಕ್ ಫಾರ್ಕ್ ಜೊತೆ 100 ಎಂಎಂ ಟ್ರಾವೆಲ್,
ಹಿಂದುಗಡೆ ಡ್ಯುಯಲ್ ಶಾಕ್ಸ್

ಬ್ರೇಕ್ ಮತ್ತು ಚಕ್ರಗಳು
ಬ್ರೇಕ್
ಮುಂದುಗಡೆ ಮತ್ತು ಹಿಂದುಗಡೆ 230 ಡಿಸ್ಕ್,
ಡ್ಯುಯಲ್ ಚಾನೆಲ್ ಎಬಿಎಸ್
ಚಕ್ರಗಳು
ಮುಂಭಾಗ: 110/70-13
ಹಿಂಭಾಗ: 130/70-13


Click it and Unblock the Notifications








