15 ಲಕ್ಷ ರು.ಗಳಷ್ಟು ಬೆಲೆಬಾಳುವ ಡುಕಾಟಿ ಎಕ್ಸ್ ಡಯಾವಲ್ ಭಾರತಕ್ಕೆ
ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಡುಕಾಟಿ, ನಿಕಟ ಭವಿಷ್ಯದಲ್ಲೇ ಭಾರತದಲ್ಲಿ ಅತಿ ನೂತನ ಎಕ್ಸ್ ಡಯಾವಲ್ ಕ್ರೂಸರ್ ಬೈಕನ್ನು ಬಿಡುಗಡೆ ಮಾಡಲಿದೆ.
ನೂತನ ಡುಕಾಟಿ ಎಕ್ಸ್ ಡಯಾವಲ್ ಮತ್ತು ಎಕ್ಸ್ ಡೇವಿಯನ್ ಎಸ್ ಗಳೆಂಬ ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಇದರ ಮುಂಬೈ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 15.50 ಲಕ್ಷ ರು.ಗಳಾಗಿರಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ಡುಕಾಟಿ ಎಕ್ಸ್ ಡಯಾವಲ್: 15.50 ಲಕ್ಷ ರು.
ಡುಕಾಟಿ ಎಕ್ಸ್ ಡಯಾವಲ್ ಎಸ್: 18.10 ಲಕ್ಷ ರು.

ಹೊಚ್ಚ ಹೊಸ ಸ್ಟೀಲ್ ಟ್ಯೂಬುಲರ್ ಟ್ರೆಲ್ಲಿಸ್ ಫ್ರೇಮ್ ತಳಹದಿಯಲ್ಲಿ ನಿರ್ಮಾಣವಾಗಿರುವ ಎಕ್ಸ್ ಡಯಾವಲ್, ಸಿಂಗಲ್ ಸೈಡಡ್ ಸ್ವಿಂಗ್ ಆರ್ಮ್ ಪಡೆಯಲಿದೆ.

1262 ಸಿಸಿ ಎಲ್ ಟ್ವಿನ್ ಟೆಸ್ಟಾಸ್ಟ್ರೆಟ್ಟಾ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಡುಕಾಟಿ ಎಕ್ಸ್ ಡಯಾವಲ್ ಆವೃತ್ತಿಗಳು, 129 ಎನ್ ಎಂ ತಿರುಗುಬಲದಲ್ಲಿ 155 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಕಾರ್ನರಿಂಗ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್ ಸಿಸ್ಟಂಗಳಂತಹ ರೈಡಿಂಗ್ ಮೋಡ್ ಗಳನ್ನು ಪಡೆಯಲಿದೆ.

ತಾನ್ಯಾಕೆ 15 ಲಕ್ಷ ರು.ಗಳಷ್ಟು ಬೆಲೆ ಬಾಳುವ ಬೈಕ್ ಎಂಬುದನ್ನು ಸಮರ್ಥಿಸಿಕೊಂಡಿರುವ ಡುಕಾಟಿ ಎಕ್ಸ್ ಡಯಾವಲ್, ಇನ್ಪೋಟೈನ್ಮೆಂಟ್ ಸಿಸ್ಟಂ, ಬ್ಲೂಟೂತ್ ಮೊಡ್ಯುಲ್, ಗ್ಲೋಸಿ ಬ್ಲ್ಯಾಕ್ ಬಣ್ಣಗಳ ಆಯ್ಕೆ, ಆಕರ್ಷಕ ಅಲಾಯ್ ವೀಲ್, ಪ್ರೀಮಿಯಂ ಸೀಟು ಇತ್ಯಾದಿ ಸೌಲಭ್ಯಗಳನ್ನು ಪಡೆಯಲಿದೆ.

ಡುಕಾಟಿ ಎಕ್ಸ್ ಡಯಾವಲ್ ವಿತರಣೆ ಪ್ರಕ್ರಿಯೆಯು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು, ಆಸಕ್ತರು ಎರಡು ಲಕ್ಷ ರು.ಗಳನ್ನು ಮುಗಂಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಪ್ರಮುಖವಾಗಿಯೂ ಹಾರ್ಲೆ ಡೇವಿಡ್ಸನ್ ಬ್ರೇಕೌಟ್ ಮತ್ತು ಟ್ರಯಂಪ್ ಥಂಡರ್ ಬರ್ಡ್ ಸ್ಟ್ರೋಮ್ ಆವೃತ್ತಿಗಳಿಗೆ ನೂತನ ಡುಕಾಟಿ ಎಕ್ಸ್ ಡಯಾವಲ್ ಪೈಪೋಟಿಯನ್ನು ಒಡ್ಡಲಿದೆ.


Click it and Unblock the Notifications








