ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬಿಡುಗಡೆ; ಬೆಲೆ 8.9 ಲಕ್ಷ ರು.

By Nagaraja

ಅಮೆರಿಕದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹಾರ್ಲೆ ಡೇವಿಡ್ಸನ್, ಭಾರತದಲ್ಲಿ ಅತಿ ನೂತನ 1200 ಕಸ್ಟಮ್ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 8.9 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ನೂತನ ಹಾರ್ಲೆ ಡೇವಿಡ್ಸ್ 1200 ಕಸ್ಟಮ್ ಮಾದರಿಯು ಸ್ಪೋರ್ಟ್ಸ್ ಸ್ಟರ್ ಶ್ರೇಣಿಯ ಬೈಕ್ ಗಳಲ್ಲಿ ಗುರುತಿಸಿಕೊಳ್ಳಲಿದೆ.

ಹಾರ್ಲೆ ಡೇವಿಡ್ಸನ್ 1200 ಕಸ್ಟಮ್


ಎಂಜಿನ್ ತಾಂತ್ರಿಕತೆ
  • 1202 ಸಿಸಿ, ಏರ್ ಕೂಲ್ಡ್,
  • ಇವೊಲ್ಯೂಷನ್ ಎಂಜಿನ್ ಜೊತೆ ಎಲೆಕ್ಟ್ರಾನಿಕ್ ಸಿಕ್ವೇನ್ಸಿಯಲ್ ಪೋರ್ಟ್ ಫ್ಯೂಯಲ್ ಇಂಜೆಕ್ಷನ್,
  • 5 ಸ್ಪೀಡ್ ಗೇರ್ ಬಾಕ್ಸ್,
  • 96 ಎನ್‌ಎಂ ತಿರುಗುಬಲ

ಹಿಂದಿನ ಹಾರ್ಲೆ ಮಾದರಿಗೆ ಹೋಲಿಸಿದಾಗ ಕಸ್ಟಮ್ 1200 ಮಾದರಿಯು ಕಡಿಮೆ ಭಾರವನ್ನು ಹೊಂದಿರಲಿದೆ. 268 ಕೆ.ಜಿ ಮಾತ್ರ ತೂಕದ ನೂತನ ಬೈಕ್ ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ.

ಇತ್ತೀಚೆಗಷ್ಟೇ ಹಾರ್ಲೆ ಡೇವಿಡ್ಸನ್ ದೇಶದ ಮಾರುಕಟ್ಟೆಯಿಂದ ಸೂಪರ್ ಲೊ ಕ್ರೂಸರ್ ಮಾದರಿಯನ್ನು ಹಿಂಪಡೆದಿತ್ತು. ಈಗ ಇದರ ಸ್ಥಾನವನ್ನು ನೂತನ ಕಸ್ಟಮ್ 1200 ತುಂಬಲಿದೆ.

ಅಂದ ಹಾಗೆ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ಹಾರ್ಲೆ ಬೈಕ್ ದೇಶವನ್ನು ತಲುಪಲಿದೆ. ಪ್ರಸ್ತುತ ಸಂಸ್ಥೆಯ ಹರಿಯಾಣ ಘಟಕದಲ್ಲಿ ಎಂಟು ಮಾದರಿಗಳನ್ನು ಜೋಡಣೆ ಮಾಡಲಾಗುತ್ತಿದೆ.

More from DriveSpark

Article Published On: Saturday, January 30, 2016, 10:49 [IST]
English summary
Harley Davidson 1200 Custom Launched In India For Rs. 8.9 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+