ದೇಶದಲ್ಲೇ ಪ್ರಪ್ರಥಮ ಬಾರಿಗೆ ಮೊಬೈಲ್ ಸಂಚಾರಿ ಶೋ ರೂಂ
ನೀವು ಹೊಸತೊಂದು ಕಾರು ಅಥವಾ ಬೈಕ್ ಖರೀದಿಸುವುದಾದ್ದಲ್ಲಿ ಮೊದಲು ಏನು ಮಾಡುವೀರಾ? ಹತ್ತಿರದಲ್ಲಿ ಸ್ಥಿತಗೊಂಡಿರುವ ಶೋ ರೂಂಗಳ ಬಗ್ಗೆ ವಿವರಗಳನ್ನು ಹುಡುಕುವೀರಾ! ಹಾಗೊಂದು ವೇಳೆ ಇಡೀ ಶೋ ರೂಂ ನಿಮ್ಮ ಬಳಿ ಬಂದರೆ ಹೇಗಿರಬಹುದು?
Also Read: ದೊಡ್ಮನೆ ಹುಡುಗ ಪುನೀತ್ ಸೂಪರ್ ಬೈಕ್ ಕರಾಮತ್ತು
ಹ್ಹಾಂ..! ಅದೇಗೆ ಸಾಧ್ಯ? ಶೋ ರೂಂಗಳು ಕೈ, ಕಾಲುಗಳಿದೆಯೇ ಎಂದು ಗಾಬರಿಗೊಳಗಾಗದಿರಿ. ಇಂತಹದೊಂದು ಮಹತ್ತರ ಯೋಜನೆಯೊಂದಿಗೆ ವಾಹನ ಸಂಸ್ಥೆ ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ.

ಹೌದು, ಇದು ನಿಜ. ಇನ್ನು ಮುಂದೆ ಇಡೀ ಶೋ ರೂಂ ನಿಮ್ಮ ಬರಲಿದೆ. ಇಂತಹದೊಂದು ಕನಸನ್ನು ನನಸಾಗಿಸಿರುವುದು ಅಮೆರಿಕದ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಹಾರ್ಲೆ ಡೇವಿಡ್ಸನ್.

ಹಾರ್ಲೆ ನಿರ್ಮಿಸಿರುವ ಮೊಬೈಲ್ ಶೋ ರೂಂ ದೇಶದ್ಯಾಂತ ಸಂಚಾರ ನಡೆಸಲಿದ್ದು, ಬೈಕ್ ಪ್ರೇಮಿಗಳ ಬಳಿ ಬಂದು ತನ್ನ ಭಂಡಾರವನ್ನು ಪ್ರದರ್ಶಿಸಲಿದೆ.

2016 ಇಂಡಿಯಾ ಬೈಕ್ ವೀಕ್ ನಲ್ಲಿ ಹಾರ್ಲೆ ಡೇವಿಡ್ಸನ್ ತನ್ನ ಹಾಗೂ ದೇಶದ ಪ್ರಪ್ರಥಮ ಶೋ ರೂಂ ಪ್ರದರ್ಶನಕ್ಕಿರಿಸಿತ್ತು.

'ಲೆಜೆಂಡ್ ಆನ್ ಟೂರ್' ಎಂದು ಕರೆಯಲ್ಪಡುವ ಈ ಬಸ್ಸನ್ನು ದೇಶದ ಖ್ಯಾತ ವಿನ್ಯಾಸಗಾರ ದಿಲೀಪ್ ಚಾಬ್ರಿಯಾ ನೇತೃತ್ವದ ಡಿಸಿ ಡಿಸೈನ್ ನಿರ್ಮಿಸಿಕೊಟ್ಟಿದೆ.

ಸಾಮಾನ್ಯ ಹಾರ್ಲೆ ಡೇವಿಡ್ಸನ್ ಶೋ ರೂಂಗಳಲ್ಲಿ ಲಭ್ಯವಾಗುವ ಎಲ್ಲ ತರಹದ ಸೌಲಭ್ಯಗಳನ್ನು ಹಾರ್ಲೆ ಮೊಬೈಲ್ ಶೋ ರೂಂ ಬಸ್ಸಿನಲ್ಲೂ ಏರ್ಪಡಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಾರ್ಲೆ ಬೈಕ್ ಗಳು ಜೊತೆಗೆ ನೈಜ ಬಿಡಿಭಾಗಗಳು, ಆಕ್ಸೆಸರಿಗಳ ವ್ಯವಸ್ಥೆಗಳನ್ನು ಇದರಲ್ಲಿ ಒದಗಿಸಿಕೊಡಲಾಗಿದೆ.

ಇದೀಗಲೇ ದೇಶದ್ಯಾಂತ ತನ್ನ ಸಂಚಾರವನ್ನು ಆರಂಭಿಸಿರುವ ಹಾರ್ಲೇ ಲೆಜೆಂಡ್ ಆನ್ ಟೂರ್ ಬಸ್ ಮುಂಬೈ ಜೊತೆಗೆ ಪುಣೆ, ಗೋವಾ ಜೊತೆಗೆ ನಮ್ಮ ಬೆಂಗಳೂರಿಗೂ ಬಂದು ಸೇರಲಿದೆ.

ಒಟ್ಟಿನಲ್ಲಿ ವಾಹನ ಪ್ರೇಮಿಗಳನ್ನು ಹೆಚ್ಚೆಚ್ಚು ಆಕರ್ಷಿಸಲು ವಾಹನ ಸಂಸ್ಥೆಗಳು ಯಾವುದೇ ರೀತಿಯ ಮಾರಾಟ ತಂತ್ರವನ್ನು ಅನುಸರಿಸಲು ಸಿದ್ಧ ಎಂಬುದಕ್ಕೆ ಹಾರ್ಲೆ ನಿದರ್ಶನವಾಗಿದೆ.

ಅಮೆರಿಕದ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹಾರ್ಲೆ, ಹರಿಯಾಣದ ಗುರ್ಗಾಂವ್ ನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಅಲ್ಲದೆ 2009ರಿಂದ ದೇಶದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿತ್ತು.

ಭಾರತದಲ್ಲಿ ಹಾರ್ಲೆಯ 13 ಮಾದರಿಗಳು ಮಾರಾಟದಲ್ಲಿದೆ. ಇವುಗಳು ಸ್ಪೋರ್ಟ್ ಸ್ಟರ್, ಡೈನಾ, ಸಾಫ್ಟೈಲ್, ವಿ ರೊಡ್, ಟೂರಿಂಗ್ ಮತ್ತು ಸ್ಟ್ರೀಟ್ ವಿಭಾಗಕ್ಕೆ ಸೇರಿದ್ದಾಗಿವೆ.

ಅಂದ ಹಾಗೆ ಹಾರ್ಲೆಗೆ ದೇಶದ್ಯಾಂತ 20ಕ್ಕೂ ಹೆಚ್ಚು ಶೋ ರೂಂಗಳಿಗಿವೆ. ಇವುಗಳು ನವದೆಹಲಿ, ಗುರ್ಗಾಂವ್, ಚಂಡೀಗಡ, ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ, ಕೊಚ್ಚಿ, ಕೋಲ್ಕತ್ತಾ, ಅಹಮದಾಬಾದ್, ಇಂಧೋರ್, ಪುಣೆ, ಗೋವಾ ಮತ್ತು ಜೈಪುರಗಳಲ್ಲಿ ಸ್ಥಿತಗೊಂಡಿದೆ.

ವಿನ್ಯಾಸದ ಬಗ್ಗೆ ಪ್ರತಿಕ್ರಿಯಿಸಿರುವ ದಿಲೀಪ್ ಚಾಬ್ರಿಯಾ "ಲೆಜೆಂಡ್ ಆನ್ ಟೂರ್ ಗೆ ವಿನ್ಯಾಸ ಕಲ್ಪಿಸಿಕೊಡಲು ಅತೀವ ಸಂತಸವಾಗುತ್ತಿದ್ದು, ನೋಟ ಹಾಗೂ ಅನುಭವದ ನಿಟ್ಟಿನಲ್ಲಿ ನೈಜ ಹಾರ್ಲೆಗೆ ಸಮಾನವಾದ ಶೋ ರೂಂ ನಿರ್ಮಿಸುವುದು ನಮ್ಮ ಇರಾದೆಯಾಗಿತ್ತು" ಎಂದಿದ್ದಾರೆ. ಮಾತು ಮುಂದುವರಿಸಿರುವ ಅವರು ಹಾರ್ಲೆಯ ಶ್ರೀಮಂತ ಪರಂಪರೆಯೇ ಮೊಬೈಲ್ ಶೋ ರೂಂ ನಿರ್ಮಿಸಲು ಸ್ಪೂರ್ತಿಯಾಗಿದೆ ಎಂದಿದ್ದಾರೆ.

ವಿಭಾಗ: ಸ್ಟ್ರೀಟ್
ಮಾದರಿ: ಸ್ಟ್ರೀಟ್ 750

ವಿಭಾಗ: ಸ್ಪೋರ್ಟ್ ಸ್ಟರ್
ಮಾದರಿ: ಐಯಾನ್ 883, 1200 ಕಸ್ಟಮ್, ಫೋರ್ಟಿ ಎೈಟ್

ವಿಭಾಗ: ಡೈನಾ
ಮಾದರಿ: ಸ್ಟ್ರೀಟ್ ಬಾಬ್, ಫಾಟ್ ಬಾಬ್

ವಿಭಾಗ: ಸಾಫ್ಟೈಲ್
ಮಾದರಿ: ಫಾಟ್ ಬಾಯ್, ಬ್ರೇಕೌಟ್, ಹೇರಿಟೇಜ್ ಸಾಫ್ಟೈಲ್ ಕ್ಲಾಸಿಕ್

ವಿಭಾಗ: ವಿ ರೊಡ್
ಮಾದರಿ: ನೈಟ್ ರೊಡ್ ಸ್ಪೆಷಲ್

ವಿಭಾಗ: ಟೂರಿಂಗ್
ಮಾದರಿ: ರೋಡ್ ಕಿಂಗ್, ಸ್ಟ್ರೀಟ್ ಗ್ಲೈಡ್ ಸ್ಪೆಷಲ್

ವಿಭಾಗ: ಸಿವಿಒ
ಮಾದರಿ: ಸಿವಿಒ ಲಿಮಿಟೆಡ್

01. ಮಹೇಂದ್ರ ಸಿಂಗ್ ಧೋನಿ ಬೈಕ್ ರೈಡಿಂಗ್ ಮಜಾ
02. ಗುಜರಾತ್ ಪೊಲೀಸ್ ಗೆ ಬಂತು ಆನೆ ಬಲ


Click it and Unblock the Notifications








