ಸೆಲ್ಪ್ ಸ್ಟ್ಯಾರ್ಟ್‌ನೊಂದಿಗೆ ಹೋಂಡಾ ಸಿಡಿ 100 ಡ್ರೀಮ್ ಬೈಕ್ ಬಿಡುಗಡೆ

By Nagaraja

ಹೋಂಡಾದ ಅಗ್ಗದ ಬೈಕ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಆದರೆ ಸೆಲ್ಪ್ ಸ್ಟ್ಯಾರ್ಟ್ ಇಲ್ಲವೆಂಬ ಚಿಂತೆ ಕಾಡುತ್ತಿದ್ದೆಯೇ? ಇನ್ನು ಅಂತಹ ಯಾವುದೇ ಬೇಸರಗಳಿಗೆ ಸ್ಥಾನವಿರುವುದಿಲ್ಲ. ಯಾಕೆಂದರೆ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೋಂಡಾ ಟು ವೀಲರ್ಸ್, ಸೆಲ್ಪ್ ಸ್ಟ್ಯಾರ್ಟ್ ಆಯ್ಕೆಯೊಂದಿಗೆ ನೂತನ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ಬಿಡುಗಡೆಗೊಳಿಸಿದೆ.

ನೂತನ ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ದೆಹಲಿ ಎಕ್ಸ್ ಶೋ ರೂಂ ಬೆಲೆ 46,197 ರು.ಗಳಾಗಿರಲಿದೆ. ಈ ಮುಖಾಂತರ 50,000 ರು.ಗಳ ಬಜೆಟ್ ನೊಳಗೆ ಪ್ರಯಾಣಿಕ ಬೈಕ್ ಹುಡುಕಾಡುತ್ತಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಸೆಲ್ಪ್ ಸ್ಟ್ಯಾರ್ಟ್‌ನೊಂದಿಗೆ ಹೋಂಡಾ ಸಿಡಿ 100 ಡ್ರೀಮ್ ಬೈಕ್ ಬಿಡುಗಡೆ

ಸೆಲ್ಪ್ ಸ್ಟ್ಯಾರ್ಟ್‌ನೊಂದಿಗೆ ಹೋಂಡಾ ಸಿಡಿ 100 ಡ್ರೀಮ್ ಬೈಕ್ ಬಿಡುಗಡೆ

ಸೆಲ್ಪ್ ಸ್ಟ್ಯಾರ್ಟ್‌ನೊಂದಿಗೆ ಹೋಂಡಾ ಸಿಡಿ 100 ಡ್ರೀಮ್ ಬೈಕ್ ಬಿಡುಗಡೆ

ಹೋಂಡಾದ ಎಚ್‌ಇಟಿ ತಂತ್ರಗಾರಿಕೆಯಿಂದ ನಿಯಂತ್ರಿಸಲ್ಪಡುವ ನೂತನ ಡ್ರೀಮ್ 100 ಬೈಕ್ ಏರ್ ಕೂಲ್ಡ್ 4 ಸ್ಟ್ರೋಕ್ 109.19 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡಲಿದೆ.

ಸೆಲ್ಪ್ ಸ್ಟ್ಯಾರ್ಟ್‌ನೊಂದಿಗೆ ಹೋಂಡಾ ಸಿಡಿ 100 ಡ್ರೀಮ್ ಬೈಕ್ ಬಿಡುಗಡೆ

ಇದು 8.63 ಎನ್ ಎಂ ತಿರುಗುಬಲದಲ್ಲಿ 8.25 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಸೆಲ್ಪ್ ಸ್ಟ್ಯಾರ್ಟ್‌ನೊಂದಿಗೆ ಹೋಂಡಾ ಸಿಡಿ 100 ಡ್ರೀಮ್ ಬೈಕ್ ಬಿಡುಗಡೆ

ಸಂಸ್ಥೆಯ ಪ್ರಕಾರ ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ಪ್ರತಿ ಲೀಟರ್ ಗೆ 74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಸೆಲ್ಪ್ ಸ್ಟ್ಯಾರ್ಟ್‌ನೊಂದಿಗೆ ಹೋಂಡಾ ಸಿಡಿ 100 ಡ್ರೀಮ್ ಬೈಕ್ ಬಿಡುಗಡೆ

ರಸ್ತೆಯಲ್ಲಿ ಅತ್ಯುತ್ತಮ ಸ್ಥಿರತೆಗಾಗಿ ವರ್ಧಿತ 1258 ಎಂಎಂ ಚಕ್ರಾಂತರವನ್ನು ಮತ್ತು 179 ಎಂಎಂ ಗ್ರೌಂಡ್ ಕ್ಲಿಯರನ್ಸ್ ಕೊಡಲಾಗಿದೆ.

ಸೆಲ್ಪ್ ಸ್ಟ್ಯಾರ್ಟ್‌ನೊಂದಿಗೆ ಹೋಂಡಾ ಸಿಡಿ 100 ಡ್ರೀಮ್ ಬೈಕ್ ಬಿಡುಗಡೆ

ಇನ್ನುಳಿದಂತೆ ಆರಾಮದಾಯಕ ಚಾಲನೆ, ಟ್ಯೂಬ್ ಲೆಸ್ ಚಕ್ರಗಳು ಮತ್ತು ನಿರ್ವಹಣೆ ಉಚಿತ ಬ್ಯಾಟರಿಗಳು ಇತರ ಪ್ರಮುಖ ವೈಶಿಷ್ಟ್ಯಗಳಾಗಿರಲಿದೆ. ಅಂತೆಯೇ ಐದು ಆಕರ್ಷಕ ಬಣ್ಣಗಳ ಆಯ್ಕೆಯಲ್ಲೂ ಲಭ್ಯವಿರುತ್ತದೆ.

ಸೆಲ್ಪ್ ಸ್ಟ್ಯಾರ್ಟ್‌ನೊಂದಿಗೆ ಹೋಂಡಾ ಸಿಡಿ 100 ಡ್ರೀಮ್ ಬೈಕ್ ಬಿಡುಗಡೆ

ನಿಮ್ಮ ಮಾಹಿತಿಗಾಗಿ, ಹೋಂಡಾ 110 ಡ್ರೀಮ್ ಪ್ರಾರಂಭಿಕ ಬೆಲೆ 43,997 ರು.ಗಳಾಗಿದ್ದು, ಈಗ ಬಿಡುಗಡೆಯಾಗಿರುವ ಸಿಡಿ 110 ಡ್ರೀಮ್ ಡಿಲಕ್ಸ್ ವೆರಿಯಂಟ್ 46,197 ರು.ಗಳಷ್ಟು ದುಬಾರಿಯೆನಿಸಲಿದೆ.

Article Published On: Saturday, March 12, 2016, 11:32 [IST]
English summary
Honda CD 110 Dream 'Deluxe' Launched In India For Rs. 46,197/-
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+