ತ್ರಿಡಿ ಶೈಲಿಯೊಂದಿಗೆ ಎಂಟ್ರಿ ಕೊಟ್ಟ ಸ್ಟೈಲಿಷ್ 2016 ಡಿಯೊ
ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮೆಟೆಡ್ (ಎಚ್‌ಎಂಎಸ್ ಐ) ಸಂಸ್ಥೆಯು ತನ್ನ ಜನಪ್ರಿಯ ಡಿಯೊ ಮಾದರಿಯನ್ನು ತಾಜಾತನದೊಂದಿಗೆ ಮರು ಬಿಡುಗಡೆಗೊಳಿಸಿದೆ.
2016 ಹೋಂಡಾ ಡಿಯೊ 48,264 ರು.ಗಳಷ್ಟು ದುಬಾರಿಯೆನಿಸಲಿದ್ದು (ಎಕ್ಸ್ ಶೋ ರೂಂ ನವದೆಹಲಿ), ಹೊಸ ಬಣ್ಣಗಳಿಂದ ಕಂಗೊಳಿಸಲಿದೆ. ಇಲ್ಲಿ ಹಳೆಯ ಡಿಯೊ ಮಾದರಿಯ ದರ ಕಾಯ್ದುಕೊಂಡಿರುವುದು ಗಮನಾರ್ಹ.

ನೂತನ 2016 ಡಿಯೊ ಸ್ಕೂಟರ್ ತ್ರಿಡಿ ಲಾಂಛನ ಹೊಂದಿರುವ ಹೊಸತಾದ ಮ್ಯಾಟ್ ಆಕ್ಸಿಸ್ ಗ್ರೇ ಬಣ್ಣವನ್ನು ಪಡೆಯಲಿದೆ. ಇದರೊಂದಿಗೆ ಐದು ಬಣ್ಣಗಳ ಆಯ್ಕೆಯು ದೊರಕಲಿದೆ.

ಪ್ರಸ್ತುತ ಲಭ್ಯವಿರುವ ನಾಲ್ಕು ಬಣ್ಣಗಳು ಇಂತಿದೆ - ಜಾಝ್ ಬ್ಲೂ ಮೆಟ್ಯಾಲಿಕ್, ಕ್ಯಾಂಡಿ ಪಾಲ್ಮ್ ಗ್ರೀನ್, ಸ್ಪೋರ್ಟ್ಸ್ ರೆಡ್ ಮತ್ತು ಬ್ಲ್ಯಾಕ್.

ಇದರಲ್ಲಿರುವ 109.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ 8.77 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ವಿ ಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಡಿಯೊ ಜೊತೆಗೆ ಆಕ್ಟಿವಾ ಐ, ಆಕ್ಟಿವಾ 3ಜಿ, ಎವಿಯೇಟರ್, ಆಕ್ಟಿವಾ 125 ಮಾದರಿಯನ್ನು ಮಾರಾಟ ಮಾಡುತ್ತಿರುವ ಹೋಂಡಾ ಇತ್ತೀಚೆಗಷ್ಟೇ ನವಿ ಬಿಡುಗಡೆಗೊಳಿಸಿತ್ತು.

2002ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿರುವ ಡಿಯೊ ಮಾರಾಟದ ವಿಚಾರದಲ್ಲಿ ಹಲವಾರು ದಾಖಲೆಗಳನ್ನು ಸ್ಥಾಪಿಸಿದೆ. ಇದು ಸಂಸ್ಥೆಯಿಂದ ರಫ್ತಾಗುತ್ತಿರುವ ನಂ.1 ಸ್ಕೂಟರ್ ಕೂಡಾ ಆಗಿದೆ.

ಹೋಂಡಾದ ಜನಪ್ರಿಯ ಇಕೊಸ ಟೆಕ್ನಾಲಜಿ ಅಥವಾ ಎಚ್ ಇಟಿ ತಂತ್ರಗಾರಿಕೆಯನ್ನು ಡಿಯೊದಲ್ಲಿ ಆಳವಡಿಸಲಾಗಿದೆ. ಇದು ಗರಿಷ್ಠ ಮೈಲೇಜ್ ನೀಡಲು ಸಹಕಾರಿಯಾಗಲಿದೆ. ಅಲ್ಲದೆ ಗಂಟೆಗೆ ಗರಿಷ್ಠ 83 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.


Click it and Unblock the Notifications