ಜೋಡಿ ಬಣ್ಣದೊಂದಿಗೆ 2016 ಹೋಂಡಾ ಡ್ರೀಮ್ ಯುಗಾ ಚಮಕ್

By Nagaraja

ಭಾರತದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಡ್ರೀಮ್ ಯುಗಾ ಜೋಡಿ ಬಣ್ಣದೊಂದಿಗೆ ಪರಿಚಯಿಸಿದೆ.

ನೂತನ 2016 ಹೋಂಡಾ ಡ್ರೀಮ್ ಯುಗಾ, ಬ್ಲ್ಯಾಕ್ ಜೊತೆಗೆ ಅಥ್ಲೆಟಿಕ್ ಬ್ಯೂ ಮೆಟ್ಯಾಲಿಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಹಾಗಿದ್ದರೂ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ ಎಂಬುದನ್ನು ಸಂಸ್ಥೆಯು ಸ್ಪಷ್ಟಪಡಿಸಿದೆ.

ಜೋಡಿ ಬಣ್ಣದೊಂದಿಗೆ 2016 ಹೋಂಡಾ ಡ್ರೀಮ್ ಯುಗಾ ಚಮಕ್

110 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೋಂಡಾ ಡ್ರೀಮ್ ಯುಗಾ 8.63 ಎನ್ ಎಂ ತಿರುಗುಬಲದಲ್ಲಿ 8.15 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಜೋಡಿ ಬಣ್ಣದೊಂದಿಗೆ 2016 ಹೋಂಡಾ ಡ್ರೀಮ್ ಯುಗಾ ಚಮಕ್

ಹೋಂಡಾದ ನೂತನ ಇಕೊ ಟೆಕ್ನಾಲಜಿ ಜೊತೆ ಆಗಮನವಾಗಿರುವ ಹೋಂಡಾ ಡ್ರೀಮ್ ಯುಗಾ ಗಮನಾರ್ಹ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಜೋಡಿ ಬಣ್ಣದೊಂದಿಗೆ 2016 ಹೋಂಡಾ ಡ್ರೀಮ್ ಯುಗಾ ಚಮಕ್

ಪ್ರತಿ ಗಂಟೆಗೆ 86 ಕೀ.ಮೀ. ವೇಗವರ್ಧಿಸುವಷ್ಟು ಸಾಮರ್ಥ್ಯ ಹೊಂದಿರುವ ಹೋಂಡಾ ಡ್ರೀಮ್ ಯುಗಾ ಪ್ರತಿ ಲೀಟರ್ ಗೆ 84 ಕೀ.ಮೀ. ಮೈಲೇಜ್ ನೀಡುವಷ್ಟು ಸಮರ್ಥವೆನಿಸಿಕೊಂಡಿದೆ.

ಜೋಡಿ ಬಣ್ಣದೊಂದಿಗೆ 2016 ಹೋಂಡಾ ಡ್ರೀಮ್ ಯುಗಾ ಚಮಕ್

ಟ್ಯೂಬ್ ಲೆಸ್ ಚಕ್ರಗಳು, ಸ್ನಿಗ್ಧತೆಯ ಏರ್ ಫಿಲ್ಟರ್, ನಿರ್ವಹಣಾ ರಹಿತ ಬ್ಯಾಟರಿಗಳು ಹೋಂಡಾ ಡ್ರೀಮ್ ಯುಗಾ ಬಾಳ್ವಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಜೋಡಿ ಬಣ್ಣದೊಂದಿಗೆ 2016 ಹೋಂಡಾ ಡ್ರೀಮ್ ಯುಗಾ ಚಮಕ್

ಇದರೊಂದಿಗೆ ಹೋಂಡಾ ಡ್ರೀಮ್ ಯುಗಾ ಬಣ್ಣಗಳು ಆರಕ್ಕೆ ಏರಿಕೆಯಾಗಿದೆ. ಅವುಗಳೆಂದರೆ, ಬ್ಲ್ಯಾಕ್ ವಿತ್ ಅಥ್ಲೆಟಿಕ್ ಬ್ಲೂ ಮೆಟ್ಯಾಲಿಕ್, ಪಿಯರ್ಸ್ ಅಮೆಜಿಂಗ್ ವೈಟ್, ಬ್ಲ್ಯಾಕ್, ಬ್ಲ್ಯಾಕ್ ವಿತ್ ರೇಡಿಯಂಟ್ ರೆಡ್ ಮೆಟ್ಯಾಲಿಕ್, ಬ್ಲ್ಯಾಕ್ ವಿತ್ ಹೆವಿ ಗ್ರೇ ಮೆಟ್ಯಾಲಿಕ್ ಮತ್ತು ಸ್ಪೋರ್ಟ್ಸ್ ರೆಡ್.

ಜೋಡಿ ಬಣ್ಣದೊಂದಿಗೆ 2016 ಹೋಂಡಾ ಡ್ರೀಮ್ ಯುಗಾ ಚಮಕ್

ಎಂಟ್ರಿ ಲೆವೆಲ್ ಪ್ರಯಾಣಿಕ ದ್ವಿಚಕ್ರ ವಾಹನ ಸಾಲಿನಲ್ಲಿ ಗುರುತಿಸಿಕೊಂಡಿರುವ ಹೋಂಡಾ ಡ್ರೀಮ್ ಯುಗಾ, ವಿವಿಧ ರೀತಿಯ ಭೂಪ್ರದೇಶಗಳಲ್ಲೂ ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಜೋಡಿ ಬಣ್ಣದೊಂದಿಗೆ 2016 ಹೋಂಡಾ ಡ್ರೀಮ್ ಯುಗಾ ಚಮಕ್

ಪ್ರಯಾಣಿಕ ವಿಭಾಗದಲ್ಲೂ ಗ್ರಾಹಕರು ನಿರ್ವಹಣೆ ಹಾಗೂ ಶೈಲಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದೆ. ಈ ಎಲ್ಲದರ ನಿಟ್ಟಿನಲ್ಲಿ ಹೋಂಡಾ ಡ್ರೀಮ್ ಶ್ರೇಣಿಯ ಬೈಕ್ ಗಳು ತನ್ನ ಬದ್ಧತೆಯನ್ನು ಪ್ರದರ್ಶಿಸಿದೆಯೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಜೋಡಿ ಬಣ್ಣದೊಂದಿಗೆ 2016 ಹೋಂಡಾ ಡ್ರೀಮ್ ಯುಗಾ ಚಮಕ್

ತನ್ನ ಸಾಲಿನಲ್ಲಿ ಯಮಹಾ ಸೆಲ್ಯೂಟೊ, ಸುಜುಕಿ ಹಯಾಟೆ ಇಪಿ, ಹೀರೊ ಸೂಪರ್ ಸ್ಪ್ಲೆಂಡರ್ ಹಾಗೂ ಟಿವಿಎಸ್ ಫೀನಿಕ್ಸ್ ಗಳಂತಹ ಬೈಕ್ ಗಳಿಗೆ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಡ್ರೀಮ್ ಯುಗಾ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 51,499 ರು.ಗಳಷ್ಟು ದುಬಾರಿಯೆನಿಸಲಿದೆ.

More from DriveSpark

Article Published On: Tuesday, August 16, 2016, 17:54 [IST]
English summary
Dream Yuga Now Available In Black With Athletic Blue Metallic Colour
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+