ಹೋಂಡಾ ಲಿವೊ ವಾರ್ಷಿಕ ಆವೃತ್ತಿ ಮತ್ತಷ್ಟು ಕಲರ್‌ಫುಲ್

By Nagaraja

ರಸ್ತೆಗೆ ಪ್ರವೇಶಿಸಿದ ಬಳಿಕ ಮೊದಲನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಹೋಂಡಾ ಲಿವೊಗೆ ಎರಡು ಹೊಚ್ಚ ಹೊಸ ಬಣ್ಣಗಳ ಆಯ್ಕೆಯನ್ನು ನೀಡುವ ಮೂಲಕ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಈಗಿರುವ ಬಣ್ಣಗಳ ಜೊತೆಗೆ ಎರಡು ಹೊಚ್ಚ ಹೊಸ ಬಣ್ಣಗಳು ಹೋಂಡಾ ಲಿವೊ 110 ಸಿಸಿ ಪ್ರೀಮಿಯಂ ಪ್ರಯಾಣಿಕ ಬೈಕ್ ಗೆ ಸೇರ್ಪಡೆಯಾಗಲಿದೆ. ಇದರೊಂದಿಗೆ ಲಿವೊ ಮತ್ತಷ್ಟು ಕಲರ್ ಫುಲ್ ಎನಿಸಿಕೊಂಡಿದೆ.

ಹೋಂಡಾ ಲಿವೊ ವಾರ್ಷಿಕ ಆವೃತ್ತಿ ಮತ್ತಷ್ಟು ಕಲರ್‌ಫುಲ್

ಇಂಪಿರಿಯಲ್ ರೆಡ್ ಮೆಟ್ಯಾಲಿಕ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟ್ಯಾಲಿಕ್ ಗಳೆಂಬ ಎರಡು ಹೊಸ ಬಣ್ಣಗಳ ಆಯ್ಕೆಗಳನ್ನು ಹೋಂಡಾ ಲಿವೊಗೆ ಕೊಡಲಾಗಿದೆ.

ಹೋಂಡಾ ಲಿವೊ ವಾರ್ಷಿಕ ಆವೃತ್ತಿ ಮತ್ತಷ್ಟು ಕಲರ್‌ಫುಲ್

ಇತರೆ ವಿಭಾಗಗಳಿಗೆ ಹೋಲಿಸಿದಾಗ 100-110 ಸಿಸಿ ವಿಭಾಗವು ಕಳೆದೊಂದು ವರ್ಷದಲ್ಲಿ ಹಿನ್ನಡೆ ಅನುಭವಿಸಿದ್ದು, 2.5 ಲಕ್ಷ ಯುನಿಟ್ ಗಳನ್ನಷ್ಟೇ ಮಾರಾಟವನ್ನು ಕಂಡಿದೆ. ಈ ನಡುವೆಯೂ ಯುವ ಗ್ರಾಹಕರ ಮನ ಗೆಲ್ಲುವಲ್ಲಿ ಲಿವೊ ಯಶಸ್ವಿಯಾಗಿದೆ.

ಹೋಂಡಾ ಲಿವೊ ವಾರ್ಷಿಕ ಆವೃತ್ತಿ ಮತ್ತಷ್ಟು ಕಲರ್‌ಫುಲ್

ಇದರೊಂದಿಗೆ ಹೋಂಡಾ ಲಿವೊ ಒಟ್ಟು ಬಣ್ಣಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದ್ದು, ಗ್ರಾಹಕರಿಗೆ ತಮ್ಮ ಮನ ಮೆಚ್ಚಿದ ಬಣ್ಣವನ್ನು ಆಯ್ಕೆ ಮಾಡಬಹುದಾಗಿದೆ. ಇತರೆ ಬಣ್ಣಗಳ ಆಯ್ಕೆಯು ಇಂತಿದೆ: ಅಥ್ಲೆಟಿಕ್ ಬ್ಲೂ ಮೆಟ್ಯಾಲಿಕ್, ಬ್ಲ್ಯಾಕ್ ಸನ್ ಸೆಟ್, ಬ್ರೌನ್ ಮೆಟ್ಯಾಲಿಕ್ ಪಿಯರ್ಲ್, ಅಮೇಜಿಂಗ್ ವೈಟ್

ಹೋಂಡಾ ಲಿವೊ ವಾರ್ಷಿಕ ಆವೃತ್ತಿ ಮತ್ತಷ್ಟು ಕಲರ್‌ಫುಲ್

ಕಡಿಮೆ ಮಾರಾಟದಲ್ಲಿದ್ದ ಟ್ವಿಸ್ಟರ್ ಬದಲಾಗಿ ಕಳೆದ ವರ್ಷದಲ್ಲಿ ಹೊಚ್ಚ ಹೊಸ ಲಿವೊ ಬೈಕನ್ನು ಹೋಂಡಾ ಬಿಡುಗಡೆಗೊಳಿಸಿತ್ತು. ಇದು ಸಂಸ್ಥೆಯ ಜನಪ್ರಿಯ ಡ್ರೀಮ್ ಸಿರೀಸ್ ತಳಹದಿಯಲ್ಲಿ ನಿರ್ಮಾಣಗೊಂಡಿತ್ತು.

ಹೋಂಡಾ ಲಿವೊ ವಾರ್ಷಿಕ ಆವೃತ್ತಿ ಮತ್ತಷ್ಟು ಕಲರ್‌ಫುಲ್

109.19 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೋಂಡಾ ಲಿವೊ 8.63 ಎನ್ ಎಂ ತಿರುಗುಬಲದಲ್ಲಿ 8.2 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಆಯಾಮ

ಆಯಾಮ

ಉದ್ದ: 2020 ಎಂಎಂ

ಅಗಲ: 746 ಎಂಎಂ

ಎತ್ತರ: 1099 ಎಂಎಂ

ಚಂಕ್ರಾಂತರ: 1285 ಎಂಎಂ

ಗ್ರೌಂಡ್ ಕ್ಲಿಯರನ್ಸ್: 180 ಎಂಎಂ

ಹೋಂಡಾ ಲಿವೊ ವಾರ್ಷಿಕ ಆವೃತ್ತಿ ಮತ್ತಷ್ಟು ಕಲರ್‌ಫುಲ್

ಕರ್ಬ್ ಭಾರ: 111 ಕೆ.ಜಿ

ಇಂಧನ ಟ್ಯಾಕ್ ಸಾಮರ್ಥ್ಯ: 8.5 ಲೀಟರ್

ಗರಿಷ್ಠ ವೇಗ: ಪ್ರತಿ ಗಂಟೆಗೆ 86 ಕೀ.ಮೀ.

ಹೋಂಡಾ ಲಿವೊ ವಾರ್ಷಿಕ ಆವೃತ್ತಿ ಮತ್ತಷ್ಟು ಕಲರ್‌ಫುಲ್

ಡೈಮಂಡ್ ಫ್ರೇಮ್ ವಿಧವನ್ನು ಹೊಂದಿರುವ ಹೋಂಡಾ ಲಿವೊ, ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಹಾಗೂ ರಿಯರ್ ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಹೊಂದಿದೆ.

ಹೋಂಡಾ ಲಿವೊ ವಾರ್ಷಿಕ ಆವೃತ್ತಿ ಮತ್ತಷ್ಟು ಕಲರ್‌ಫುಲ್

ಡಿಸ್ಕ್ ಹಾಗೂ ಡ್ರಮ್ ಬ್ರೇಕ್ ಗಳ ಆಯ್ಕೆಗಳಲ್ಲೂ ಹೋಂಡಾ ಲಿವೊ ಲಭ್ಯವಿರುತ್ತದೆ.

ಬ್ರೇಕ್ ವಿಧ (ಫ್ರಂಟ್): ಡ್ರಮ್ 130/ಡಿಸ್ಕ್ 240ಎಂಎಂ

ಬ್ರೇಕ್ ವಿಧ (ರಿಯರ್): ಡ್ರಮ್ 130 ಎಂಎಂ

ವಿಶಿಷ್ಟತೆ

ವಿಶಿಷ್ಟತೆ

ಮುಂದುವರಿದ ಫ್ರಂಟ್ ಫಾರ್ಕ್, ಆಕರ್ಷಕ ಮಫ್ಲರ್, ಎಚ್ ಇಟಿ ಹೋಂಡಾ ಎಂಜಿನ್, ಎನರ್ಜಿಟಿಕ್ ಟ್ಯಾಂಕ್, ತ್ರಿಡಿ ವಿಂಗ್ ಮಾರ್ಕ್, ಆಕರ್ಷಕ ಟೈಲ್ ಲೈಟ್, ಗ್ರಾಬ್ ರೈಲ್, ಟ್ಯೂಬ್ ಲೆಸ್ ಚಕ್ರ, ನಾನೀನ್ಯತೆಯ ಮೀಟರ್ ಡಿಸೈನ್, ಐದು ವಿಧಗಳಲ್ಲಿ ಹೊಂದಾಣಿಸಬಹುದಾದ ಸಸ್ಪೆನ್ಷನ್, ಎಂಎಫ್ ಬ್ಯಾಟರಿ ಮತ್ತು ಸ್ಥಿಗತೆ ಫಿಲ್ಟರ್.

ಬೆಲೆ ಮಾಹಿತಿ (ಆನ್ ರೋಡ್ ಬೆಂಗಳೂರು)

ಬೆಲೆ ಮಾಹಿತಿ (ಆನ್ ರೋಡ್ ಬೆಂಗಳೂರು)

ಲಿವೊ ಡ್ರಮ್ - 64,896 ರು.

ಲಿವೊ ಡಿಸ್ಕ್ - 67,733 ರು.

More from DriveSpark

Article Published On: Friday, August 5, 2016, 13:50 [IST]
English summary
Honda Introduces Two Exciting New Colours For Livo (110cc)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+