ಹೋಂಡಾದಿಂದ 125 ಸಿಸಿ ಅಗ್ಗದ ಬೈಕ್ ಮಾರುಕಟ್ಟೆಗೆ?
ಭಾರತದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ದೇಶದಲ್ಲಿ ಅತಿ ಅಗ್ಗದ 125 ಸಿಸಿ ಬೈಕ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಅದುವೇ, ಹೋಂಡಾ ಟಿಎಂಎಕ್ಸ್ 125
ಪ್ರಮುಖವಾಗಿಯೂ ದೇಶದ ಗ್ರಾಮೀಣ ಮಾರುಕಟ್ಟೆಯನ್ನು ಗುರಿಯಾಗಿರಿಸಿಟ್ಟುಕೊಂಡು ನೂತನ ಹೋಂಡಾ ಟಿಎಂಎಕ್ಸ್ 125 ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ದಿಟ್ಟ ಹೆಜ್ಜೆಯನ್ನಿಟ್ಟಿರುವ ಹೋಂಡಾ ಸಂಸ್ಥೆಯು ಅಧ್ಯಯನ ಮತ್ತು ಅಭಿವೃದ್ಧಿ ಅಗತ್ಯಗಳಿಗಾಗಿ ಹೋಂಡಾ ಎರಡು ಟಿಎಂಎಕ್ಸ್ 125 ಬೈಕ್ ಗಳನ್ನು ಸಂಸ್ಥೆಯ ಘಟಕಕ್ಕೆ ತರಿಸಿದೆ.

ಅಂದ ಹಾಗೆ ಹೋಂಡಾ ಟಿಎಂಎಕ್ಸ್ 125 ದೇಶದ ಆಯ್ದ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಾಗಲಿದೆ. ಅಲ್ಲದೆ ಬೇಡಿಕೆಯ ಆಧಾರದಲ್ಲಿ ಇತರ ಮಾರುಕಟ್ಟೆಗಳಿಗೂ ವಿಸ್ತರಿಸಲಾಗುವುದು.

ಒಮ್ಮೆ ಹೋಂಡಾ ಟಿಎಂಎಕ್ಸ್ 125 ಮಾರುಕಟ್ಟೆಗೆ ಪ್ರವೇಶಿಸಿದಾಗ ದೇಶದ ಅತ್ಯಂತ ಅಗ್ಗದ 125 ಬೈಕ್ ಎನಿಸಿಕೊಳ್ಳಲಿದೆ.

ಹೋಂಡಾ ಟಿಎಂಎಕ್ಸ್ 125 ಭಾರತದಲ್ಲಿ 30,000 ರು.ಗಳಿಂದ 35,000 ರು.ಗಳ ವರೆಗೆ ದುಬಾರಿಯೆನಿಸುವ ಸಾಧ್ಯತೆಯಿದೆ.

124 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ನೂತನ ಹೋಂಡಾ ಟಿಎಂಎಕ್ಸ್ 125, 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಪ್ರಯಾಣಿಕ ಬೈಕ್ ಗಳಿಗಿಂತ ವ್ಯತಿರಿಕ್ತವಾಗಿ ವಿಭಿನ್ನ ವಿನ್ಯಾಸವನ್ನು ಮೈಗೂಡಿಸಿ ಬಂದಿರುವ ಹೋಂಡಾ ಟಿಎಂಎಕ್ಸ್ 125 ಬೈಕ್‌ಗೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ. ಆದರೂ ಈ ಗ್ರಾಮೀಣ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟ ಕಂಡುಕೊಂಡಿರುವ ಬಜಾಜ್ ಸಿಟಿ100 ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಅತ್ತ ದೇಶದ ನಂ.1 ಪ್ರಯಾಣಿಕ ಬೈಕ್ ಪಟ್ಟವನ್ನು ಹೋಂಡಾದ್ದೇ ಆಗಿರುವ ಸಿಸಿ ಶೈನ್ ಆಲಂಕರಿಸಿಕೊಂಡಿದೆ. ಇದು ಹೋಂಡಾಗೆ ಮತ್ತಷ್ಟು ವರದಾನವಾಗಿ ಪರಿಣಮಿಸಲಿದೆ.


Click it and Unblock the Notifications