ಹೋಂಡಾ ಬೈಕ್, ಸ್ಕೂಟರ್ ದೀಪಾವಳಿ ಆಫರ್ ಮಿಸ್ ಮಾಡದಿರಿ
ಹೋಂಡಾ ಆಫರ್
ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್ ಎಂಎಸ್ ಐ) ಸಂಸ್ಥೆಯು ದೀಪಾವಳಿ ಹಬ್ಬದ ಸಂಭ್ರಮದ ಅಂಗವಾಗಿ ಅತ್ಯುತ್ತಮ ಆಫರ್ ಗಳನ್ನು ಮುಂದಿಟ್ಟಿದೆ. ಈ ಹಬ್ಬದ ಸಂಭ್ರಮದ ವಾತಾವರಣದಲ್ಲಿ ಹೋಂಡಾದ ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿಸುವ ಗ್ರಾಹಕರು ಈ ಲೇಖನವನ್ನು ಓದಲು ಮರೆಯದಿರಿ.

ಹೋಂಡಾ ಸಂಸ್ಥೆಯೀಗ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ನೌಕರರಿಗೆ 2,000 ರುಪಾಯಿಗಳ ವರೆಗೆ ನಗದು ಡಿಸ್ಕೌಂಟ್ ನೀಡುತ್ತಿದೆ.

ಹಾಗೆಯೇ ಈ ಹಬ್ಬದ ಆವೃತ್ತಿಯ ವೇಳೆಯಲ್ಲಿ ಹೋಂಡಾ ಬೈಕ್, ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಕಡಿಮೆ ಬಡ್ಡದರಲ್ಲಿ ಹಣಕಾಸು ನೆರವನ್ನು ಒದಗಿಸಲಾಗುವುದು.

ಹಾಗೆಯೇ 125 ಸಿಸಿ ಎಂಜಿನ್ ಸಾಮರ್ಥ್ಯ ವರೆಗಿನ ದ್ವಿಚಕ್ರ ವಾಹನಗಳಿಗೆ ಉಚಿತ ವಿಮಾ ಸೇವೆಯನ್ನು ನೀಡಲಿದೆ.

ಈ ಹಬ್ಬದ ವೇಳೆಯಲ್ಲಿ ಗ್ರಾಹಕರು ತಮ್ಮ ಮೆಚ್ಚಿನ ಬೈಕ್ ಸ್ಕೂಟರ್ ಗಾಗಿ ವಾರಗಟ್ಟಲೆ ಕಾಯಬೇಕಾದ ಅಗತ್ಯವಿಲ್ಲ. ಶೀಘ್ರದಲ್ಲೇ ವಿತರಣೆಗೆ ಹೋಂಡಾ ಚಾಲನೆ ನೀಡಿದೆ.

ಇದರ ಹೊರತಾಗಿಪಂಜಾಬ್ ನಲ್ಲಿ ಹೋಂಡಾ ದ್ವಿಚಕ್ರ ವಾಹನ ಖರೀದಿ ವೇಳೆಯಲ್ಲಿ 1,500 ರು.ಗಳ ಎಕ್ಸ್ ಚೇಂಜ್ ಆಫರ್ ಲಭ್ಯವಾಗಲಿದೆ.

2016ನೇ ಸಾಲಿನ ಹಬ್ಬದ ಆವೃತ್ತಿಯಲ್ಲಿ ಶೇಕಡಾ 20ರಷ್ಟು ಮಾರಾಟ ಏರಿಕೆಯನ್ನು ಹೋಂಡಾ ಗುರಿಯಾಗಿರಿಸಿಕೊಂಡಿದೆ.

ಅಂದ ಹಾಗೆ 2017ನೇ ಸಾಲಿನಲ್ಲಿ ಹೋಂಡಾ ಸಂಸ್ಥೆಯು ತನ್ನ ನೂತನ ಹಾಗೂ ಮೂರನೇ ಘಟಕವನ್ನು ನಮ್ಮ ಬೆಂಗಳೂರಿನಲ್ಲಿ ತೆರೆದುಕೊಳ್ಳಲಿದೆ.

ವರ್ಷಾಂತ್ಯದಲ್ಲಿ 800ರಷ್ಟು ಡೀಲರ್ ಶಿಪ್ ತೆರೆದುಕೊಳ್ಳುವ ಇರಾದೆಯಲ್ಲಿರುವ ಹೋಂಡಾ, ಮುಂದಿನ ವರ್ಷ ಮಾರ್ಚ್ ವೇಳೆಯಾಗುವ ದೇಶದೆಲ್ಲೆಡೆ ಒಟ್ಟು 5,400ರಷ್ಟು ಡೀಲರ್ ಶಿಪ್ ಗಳನ್ನು ಗುರಿಯಿರಿಸಿಕೊಂಡಿದೆ.


Click it and Unblock the Notifications








