ಟಾರ್ಕ್ ಎಲೆಕ್ಟ್ರಿಕ್ ಬೈಕ್‌ನ ಎಕ್ಸ್‌ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

By Nagaraja

ಈಗಾಗಲೇ ಬೆಂಗಳೂರು ರಸ್ತೆಗೆ ಎಂಟ್ರಿ ಕೊಟ್ಟಿರುವ ದೇಶದ ಮೊತ್ತ ಮೊದಲ 'ಟಿ6ಎಕ್ಸ್' ಎಲೆಕ್ಟ್ರಿಕ್ ಬೈಕ್, ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ. ಅನೇಕ ವೈಶಿಷ್ಟ್ಯಗಳಿಂದ ಕೂಡಿರುವ ಟಾರ್ಕ್ ಟಿ6ಎಕ್ಸ್ ಬೈಕ್ 1.24,999 ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಟಾರ್ಕ್ ಟಿ6ಎಕ್ಸ್ ಭಾರತದ ಮೊತ್ತ ಮೊದಲ ಎಲೆಕ್ಟ್ರಿಕ್ ನಿರ್ವಹಣಾ ಮೋಟಾರ್ ಸೈಕಲ್ ಆಗಿದ್ದು, ಏಳು ವರ್ಷಗಳ ಸಮಗ್ರ ಅಧ್ಯಯನ ಮತ್ತು ಅಭಿವೃದ್ಧಿಯ ಬಳಿಕ ಬಿಡಗಡೆಗೊಳಿಸಲಾಗಿದೆ. ಆಧುನಿಕ ನಗರ ಪ್ರಯಾಣಿಕ ವ್ಯವಸ್ಥೆಗೆ ಹೊಸ ಜೀವ ತುಂಬಿರುವ ಟಿ6ಎಖ್ಸ್, ಕಟ್ಟಿಂಗ್ ಎಡ್ಜ್ ತಂತ್ರಗಾರಿಕೆಯೊಂದಿಗೆ ಪಾರುಪತ್ಯ ಸಾಧಿಸಿದೆ.

ಟಾರ್ಕ್ ಟಿ6ಎಕ್ಸ್

ವೈಶಿಷ್ಟ್ಯಗಳು

  • ಗಂಟೆಗೆ ಗಂಟೆಗೆ 100 ಕೀ.ಮೀ. ವೇಗ,
  • 100 ಕೀ.ಮೀ. ವ್ಯಾಪ್ತಿ,
  • 60 ನಿಮಿಷಗಳಲ್ಲೇ ಶೇಕಡಾ 80ರಷ್ಟು ಚಾರ್ಚಿಂಗ್,
  • 4.3 ಇಂಚುಗಳ ಟಚ್ ಸ್ಕ್ರೀನ್ ಟಿಎಫ್ ಟಿ ಜೊತೆ ನೇವಿಗೇಷನ್,
  • ಆಪ್ ಸಂಪರ್ಕ,
  • ಕ್ಲೌಡ್ ಕನೆಕ್ಟಿವಿಟಿ,
  • ಉಪಯುಕ್ತ ಸ್ಟೋರೆಜ್,
  • ಕಸ್ಟಮ್ ರೈಡಿಂಗ್ ಪ್ರೊಫೈಲ್,
  • ಎರಡು ತಾಸಿನಲ್ಲಿ ಸಂಪೂರ್ಣ ಚಾರ್ಜ್

ಟಾರ್ಕ್ ಟಿ6ಎಕ್ಸ್ ಎಲೆಕ್ಟ್ರಿಕ್ ಬೈಕ್, ಬ್ರಶ್ ಲೆಸ್ ಡಿಸಿ 6 ಕೆಡ್ಬ್ಲ್ಯು ಲಿಥಿಯಂ ಇಯಾನ್ ಬ್ಯಾಟರಿಂದ ನಿಯಂತ್ರಿಸಲ್ಪಡುತ್ತಿದ್ದು, 27 ಎನ್ ಎಂ ತಿರುಗುಬಲವನ್ನು ನೀಡುತ್ತದೆ.

ಟಾರ್ಕ್ ಟಿ6ಎಕ್ಸ್

ಟೈಯೊಸ್ ತಾಂತ್ರಿಕ ವ್ಯವಸ್ಥೆ
ಇವೆಲ್ಲದಕ್ಕೂ ಹೊರತಾಗಿ ಟೈಯೊಸ್ ಅಥವಾ ಟಾರ್ಕ್ ಟಾರ್ಕ್ ಇಟ್ಯೂಟಿವ್ ಸಿಗ್ನೇಚರ್ ಓಪರೇಟಿಂಗ್ ಸಿಸ್ಟಂ (TRIOS) ಟಿ6ಎಕ್ಸ್ ಎಲೆಕ್ಟ್ರಿಕ್ ಬೈಕನ್ನು ಮೇಲ್ದರ್ಜೆಯಲ್ಲಿ ಗುರುತಿಸುವಂತೆ ಮಾಡಿದೆ. ಇದು ಸವಾರಿಯ ಎಲ್ಲ ವಿವರಗಳ ಹೊರತಾಗಿ ಪವರ್ ಮ್ಯಾನೇಜ್ ಮೆಟ್, ರಿಯಲ್ ಟೈಮ್ ಪವರ್ ಬಳಕೆ, ವ್ಯಾಪ್ತಿ ಹಾಗೂ ಹೇಗೆ ಚಾಲನೆ ಮಾಡಿದರೆ ಸೂಕ್ತ ಎಂಬುದರ ಬಗ್ಗೆ ಮಾಹಿತಿಯನ್ನು ಒದಗಿಸಲಿದೆ.

ಕಸ್ಟಮೈಸ್ಡ್ ಚಾಲನೆ ಆಯ್ಕೆ ಇರುವುದರಿಂದ ಶಕ್ತಿ ವಿತರಣೆಯನ್ನು ಹೊಂದಾಣಿಸಬಹುದಾಗಿದೆ. ಕೇವಲ ಒಂದೇ ಬಟನ್ ಟಚ್ ನಲ್ಲಿ ಸ್ಪೋರ್ಟ್ ನಿಂದ ಇಕೊ ಕ್ರೂಸರ್ ಮೋಡ್ ಗಳನ್ನು ಆಯ್ಕೆ ಮಾಡಬಹುದಾಗಿದೆ. ಕ್ಲೌಡ್ ಆಟೋಮ್ಯಾಟಿಕ್ ತಂತ್ರಜ್ಞಾನವನ್ನು ಟಿ6ಎಕ್ಸ್ ಪಡೆದುಕೊಂಡಿದ್ದು, ರಸ್ತೆಯ ಸ್ಮಾರ್ಟ್ ಮೋಟಾರ್ ಸೈಕಲ್ ಆಗಿ ಪರಿವರ್ತಿಸಲಿದೆ.

ಸದ್ಯಕ್ಕೆ ಮೂರು ನಗರಗಳಲ್ಲಿ ಲಭ್ಯ: ಬೆಂಗಳೂರು, ದೆಹಲಿ ಮತ್ತು ಪುಣೆ.

ಬ್ರೇಕ್ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ. ತನ್ಮೂಲಕ ಗರಿಷ್ಠ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗಿದೆ. ಇನ್ನು ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ಮೊನೊ ಸಸ್ಪೆನ್ಷನ್ ಜೋಡಣೆ ಮಾಡಲಾಗಿದೆ.

ಟಾರ್ಕ್ ಟಿ6ಎಕ್ಸ್

ಬ್ಯಾಟರಿ ಬಾಳ್ವಿಕೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಬಳಕೆಗೆ ಅನುಗುಣವಾಗಿ 80,000 ಕೀ.ಮೀ. ಗಳಿಂದ 1,00,000 ಕೀ.ಮೀ. ವರೆಗೆ ಬಾಳ್ವಿಕೆ ಬರಲಿದೆ.

ಸಂಪೂರ್ಣ ಡಿಜಿಟಲ್ ಟಿಎಫ್ ಟಿ ಮಾನಿಟರ್, ಮೊಬೈಲ್ ಮಾನಿಟರ್ ಪೋರ್ಟ್, ಜಿಪಿಎಸ್ ಮತ್ತು ನೇವಿಗೇಷನ್, ಹೆಲ್ಮೆಟ್ ಸ್ಟೋರೆಜ್, ಮೊಬೈಲ್ ಆಪ್ ಸಪೋರ್ಟ್, ಆ್ಯಂಟಿ ಥೆಪ್ಟ್, ಜಿಯೋ ಫೆನ್ಸಿಂಗ್ ಮತ್ತು ಡೇಟೈಮ್ ರನ್ನಿಂಗ್ ಲೈಟ್ಸ್ ಗಳಿಂದ ಕೂಡಿರುವ ನೂತನ ಟಾರ್ಕ್ ಎಲೆಕ್ಟ್ರಿಕ್ ಬೈಕ್ ವೈಶಿಷ್ಟ್ಯಗಳಿಂದ ತುಂಬಿ ತುಳುಕಲಿದೆ.


Most Read Articles

Kannada
English summary
All you want to know about India's First Electric Performance Motorcylce the Tork T6X
Story first published: Saturday, October 1, 2016, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X