ದೇಶದಲ್ಲಿ ಅವಳಿ ಮೊಟೊಕ್ರಾಸ್ ಬೈಕ್ ಬಿಡುಗಡೆ ಮಾಡಲಿರುವ ಕವಾಸಕಿ
ಭಾರತದಲ್ಲಿ ಅವಳಿ ಮೊಟೊಕ್ರಾಸ್ ಬೈಕ್ ಗಳನ್ನು ಕವಾಸಕಿ ಬಿಡುಗಡೆ ಮಾಡಲಿದೆ.
ಜಪಾನ್ ಮೂಲದ ದೈತ್ಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಕವಾಸಕಿ, ಭಾರತದಲ್ಲಿ ಅವಳಿ ಮೊಟೊಕ್ರಾಸ್ ಬೈಕ್ ಗಳನ್ನು ಬಿಡುಗಡೆ ಮಾಡಲಿದೆ. ಬಲ್ಲ ಮೂಲಗಳ ಪ್ರಕಾರ 2016 ಡಿಸೆಂಬರ್ 18ರಂದು ಕೆಎಕ್ಸ್250 ಮತ್ತು ಕೆಎಕ್ಸ್100 ಮಾದರಿಗಳನ್ನು ಕವಾಸಕಿ ಬಿಡುಗಡೆ ಮಾಡಲಿದೆ.

ನೂತನ ಕವಾಸಕಿ ಕೆಎಕ್ಸ್250 ಮತ್ತು ಕೆಎಕ್ಸ್100 ಮೊಟೊಕ್ರಾಸ್ ಬೈಕ್ ಗಳು ಟ್ರ್ಯಾಕ್ ನಲ್ಲಿ ಮಾತ್ರ ಬಳಕೆ ಮಾಡಲು ಸಾಧ್ಯವಾಗಲಿದ್ದು, ರಸ್ತೆ ಮಾನ್ಯತೆಯನ್ನು ಗಿಟ್ಟಿಸಿಕೊಂಡಿಲ್ಲ.

ಇದೇ ಕಾರಣಕ್ಕಾಗಿ ಕವಾಸಕಿಯ ಈ ಎರಡು ಬೈಕ್ ಗಳಲ್ಲಿ ಹೆಡ್ ಲೈಟ್ ಹಾಗೂ ಟರ್ನ್ ಇಂಡಿಕೇಟರ್ ಗಳಿಲ್ಲ. ಅಷ್ಟೇ ಯಾಕೆ ಲೈಸನ್ಸ್ ಪ್ಲೇಟ್ ಕೂಡಾ ಇರುವುದಿಲ್ಲ.

249 ಸಿಸಿ ಫೋರ್ಡ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಕವಾಸಕಿ ಕೆಎಕ್ಸ್250 ಬೈಕ್, ಆಫ್ ರೋಡ್ ಚಾಲನೆಗೆ ತಕ್ಕಂದೆ ಗರಿಷ್ಠ ಗ್ರೌಂಡ್ ಕ್ಲಿಯರನ್ಸ್ ಮತ್ತು ಲಾಂಗ್ ಟ್ರಾವೆಲ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಗಿಟ್ಟಿಸಿಕೊಂಡಿದೆ.

ಮುಂಭಾಗದಲ್ಲಿ 48 ಎಂಎಂ ಶೋವಾ ಟೆಲಿಸ್ಕಾಪಿಕ್ ಫಾರ್ಕ್ ಜೊತೆಗೆ 40 ವಿಧಗಳ ಸ್ಪ್ರಿಂಗ್ ಪ್ರಿಲೋಡ್ ಹೊಂದಾಣಿಸಬಹುದಾದ ಮತ್ತು 22 ಪೊಸಿಷನ್ ಕಂಪ್ರೆಷನ್ ಮತ್ತು 22 ಪೊಸಿಷನ್ ರಿ ಬೌಂಡ್ ಡ್ಯಾಂಪಿಂಗ್ ಹೊಂದಾಣಿಸಬಹುದಾದ ವ್ಯವಸ್ಥೆಯಿರಲಿದೆ.

ಸುರಕ್ಷತೆಗೂ ಆದ್ಯತೆ ಕೊಡಲಾಗಿದ್ದು ಮುಂಭಾಗದಲ್ಲಿ 270 ಎಂಎಂ ಪೆಡಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಇರಲಿದೆ. ಅಲ್ಲದೆ 105 ಕೆ.ಜಿ ತೂಕವನ್ನು ಹೊಂದಿರಲಿದೆ.

ನೋಡಲು ಕೆಎಕ್ಸ್250 ಮಾದರಿಗೆ ಹೋಲುವ ಕೆಎಕ್ಸ್100 ಮಾದರಿಯು 99 ಸಿಸಿ ಟು ಸ್ಟ್ರೋಕ್ ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಉಚ್ಚಕರ್ಷಕ
ಸ್ಟೀಲ್ ಪೆರಿಮೀಟರ್ ಫ್ರೇಮ್ ಪಡೆದಿದೆ.

ಇವೆಲ್ಲದರ ಮೂಲಕ ದೇಶದಲ್ಲಿ ಮೊಟೊಕ್ರಾಸ್ ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನುಂಟು ಮಾಡುವ ಇರಾದೆಯನ್ನು ಕವಾಸಕಿ ಹೊಂದಿದೆ.

ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ದೇಶವನ್ನು ತಲುಪಲಿರುವ ಕವಾಸಕಿ ಕೆಎಕ್ಸ್100 ಮತ್ತು ಕೆಎಕ್ಸ್250 ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ ಈ ಎರಡು ಬೈಕ್ ಗಳು ಅಮೆರಿಕದಲ್ಲಿ ಭಾರತೀಯ ರುಪಾಯಿ ಬೆಲೆ ಪ್ರಕಾರ 3.10 ಲಕ್ಷ ರು. ಮತ್ತು 5.12 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.


Click it and Unblock the Notifications








