ಕವಾಸಕಿ ವರ್ಸಿಸ್ 250 ಬಿಡುಗಡೆ; ಮುಂದಿನ ಗುರಿ ಭಾರತ

ಇಂಡೋನೇಷ್ಯಾದಲ್ಲಿ ಕವಾಸಕಿ ವರ್ಸಿಸ್ 250 ಬೈಕ್ ಬಿಡುಗಡೆಗೊಂಡಿದ್ದು ಮುಂದಿನ ವರ್ಷ ಭಾರತಕ್ಕೂ ಆಗಮಿಸಲಿದೆ.

By Nagaraja

ನೆರೆಯ ಇಂಡೋನೇಷ್ಯಾದಲ್ಲಿ ಅತಿ ನೂತನ ಕವಾಸಕಿ ವೆರ್ಸಿಸ್ 250 ಬೈಕ್ ಭರ್ಜರಿ ಬಿಡುಗಡೆಗೊಂಡಿದೆ. ಇದು ಮುಂದಿನ ಸಾಲಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆಯೆಂಬ ವರದಿಯು ಅತಿ ಹೆಚ್ಚು ಆಸಕ್ತಿಯನ್ನು ಕೆರಳಿಸಿದೆ.

ಕವಾಸಕಿ ವರ್ಸಿಸ್ 250 ಬಿಡುಗಡೆ; ಮುಂದಿನ ಗುರಿ ಭಾರತ

ಅತ್ಯಂತ ಶಕ್ತಿಶಾಲಿ ವೆರ್ಸಿಸ್ 650 ಮಾದರಿಯಿಂದ ಸ್ಪೂರ್ತಿ ಪಡೆದುಕೊಂಡು ಇದನ್ನು ರಚಿಸಲಾಗಿದ್ದು, ಜನಪ್ರಿಯ ನಿಂಜಾ 250ಆರ್ ಮತ್ತು ಝಡ್250 ಎಂಜಿನ್ ತಾಂತ್ರಿಕತೆಗಳನ್ನು ಅನುಸರಿಸಲಾಗಿದೆ.

ಕವಾಸಕಿ ವರ್ಸಿಸ್ 250 ಬಿಡುಗಡೆ; ಮುಂದಿನ ಗುರಿ ಭಾರತ

ಕವಾಸಕಿ ವೆರ್ಸಿಸ್ 250 ಎಂಟ್ರಿ ಲೆವೆಲ್ ಕ್ರೀಡಾ ಟೂರರ್ ಬೈಕಾಗಿದ್ದು, ಭಾರತದಲ್ಲೂ ಗರಿಷ್ಠ ಬೇಡಿಕೆ ಗಿಟ್ಟಿಸಿಕೊಳ್ಳುವುದಂತೂ ಗ್ಯಾರಂಟಿ. ಇದು ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಕವಾಸಕಿ ವರ್ಸಿಸ್ 250 ಬಿಡುಗಡೆ; ಮುಂದಿನ ಗುರಿ ಭಾರತ

ಕವಾಸಕಿ ವೆರ್ಸಿಸ್ ಅಡ್ವೆಂಚರ್ ಮತ್ತು ವೆರ್ಸಿಸ್ 250 ಟೂರರ್ ಮಾದರಿಗಳು ಅನುಕ್ರಮವಾಗಿ ಭಾರತೀಯ ರುಪಾಯಿ ಪ್ರಕಾರ 3.12 ಮತ್ತು 3.66 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಕವಾಸಕಿ ವರ್ಸಿಸ್ 250 ಬಿಡುಗಡೆ; ಮುಂದಿನ ಗುರಿ ಭಾರತ

249 ಸಿಸಿ 8 ವಾಲ್ವ್ ಟ್ವಿನ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಕವಾಸಕಿ ವೆರ್ಸಿಸ್ 250 ಮಾದರಿಯು 21.7 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಕವಾಸಕಿ ವರ್ಸಿಸ್ 250 ಬಿಡುಗಡೆ; ಮುಂದಿನ ಗುರಿ ಭಾರತ

ಡೈಮಂಡ್ ಫ್ರೇಮ್ ವರ್ಕ್ ನಿಂದ ಅತ್ಯುತ್ತಮ ಸ್ಥಿರತೆ ಪ್ರದಾನ ಮಾಡಲಿದೆ. ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫಾರ್ಕ್ ಮತ್ತು ಹಿಂಭಾಗದಲ್ಲಿ ಪೆಡಲ್ ಡಿಸ್ಕ್ ಬ್ರೇಕ್ ಗಳಿರಲಿದೆ.

ಕವಾಸಕಿ ವರ್ಸಿಸ್ 250 ಬಿಡುಗಡೆ; ಮುಂದಿನ ಗುರಿ ಭಾರತ

ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಜೊತೆ 170 ಎಂಎಂ ಸಸ್ಪೆನ್ಷನ್ ಟ್ರಾವೆಲ್, ಹಿಂಭಾಗದಲ್ಲಿ ಮೊನೊಶಾಕ್, ಸ್ಪೋಕ್ಡ್ ಚಕ್ರಗಳು, ಮುಂಭಾಗದಲ್ಲಿ 19 ಇಂಚು ಮತ್ತು ಹಿಂಭಾಗದಲ್ಲಿ 17 ಇಂಚುಗಳ ಚಕ್ರಗಳು, ಆಫ್ ರೋಡ್ ಚಕ್ರಗಳು, ಟ್ವಿನ್ ಥ್ರಾಟಲ್ ವಾಲ್ವ್ ಇಂಟೇಕ್, ಸ್ಲಿಪರ್ ಕ್ಲಚ್ ಇತ್ಯಾದಿ ವ್ಯವಸ್ಥೆಗಳಿರಲಿದೆ.

ಕವಾಸಕಿ ವರ್ಸಿಸ್ 250 ಬಿಡುಗಡೆ; ಮುಂದಿನ ಗುರಿ ಭಾರತ

ಟೂರರ್ ವೆರಿಯಂಟ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ಗಿಟ್ಟಿಸಿಕೊಳ್ಳಲಿದೆ. ಇನ್ನೊಂದೆಡೆ ಎಂಟ್ರಿ ವೆವೆಲ್ ನಲ್ಲಿ ಐಚ್ಛಿಕ ಎಬಿಎಸ್ ಆಯ್ಕೆಯಿರುತ್ತದೆ.

ಬಣ್ಣಗಳು

ಬಣ್ಣಗಳು

ಸ್ಟ್ಯಾಂಡರ್ಡ್ ವೆರ್ಸಿಸ್ 250 - ಕ್ಯಾಂಡಿ ಲೈಮ್ ಗ್ರೀನ್/ಮೆಟ್ಯಾಲಿಕ್ ಗ್ರಾಫೈಟ್ ಗ್ರೇ, ಮೆಟ್ಯಾಲಿಕ್ ಗ್ರಾಫೈಟ್ ಗ್ರೇ/ಫ್ಲಾಟ್ ಎಬೋನಿ.

ಟೂರರ್ ವೆರ್ಸಿಸ್ 250 - ಕ್ಯಾಂಡಿ ಲೈಮ್ ಗ್ರೀನ್/ಮೆಟ್ಯಾಲಿಕ್ ಗ್ರಾಫೈಟ್ ಗ್ರೇ, ಕ್ಯಾಂಡಿ ಬರ್ನ್ಟ್ ಆರೆಂಜ್/ಮೆಟ್ಯಾಲಿಕ್ ಗ್ರಾಫೈಟ್ ಗ್ರೇ.

ಕವಾಸಕಿ ವರ್ಸಿಸ್ 250 ಬಿಡುಗಡೆ; ಮುಂದಿನ ಗುರಿ ಭಾರತ

ಭಾರತದಲ್ಲಿ ನಿರ್ವಹಣಾ ವಿಭಾಗದಲ್ಲಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್, ಮಹೀಂದ್ರ ಮೊಜೊ ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಕೆಟಿಎಂ ಡ್ಯೂಕ್ 390 ಮತ್ತು ಬಿಎಂಡಬ್ಲ್ಯು ಜಿ310 ಮುಂತಾದ ಮಾದರಿಗಳಿಗೆ ಕವಾಸಕಿ ವೆರ್ಸಿಸ್ 250 ಬೈಕ್ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

More from DriveSpark

Article Published On: Thursday, December 1, 2016, 15:52 [IST]
English summary
Kawasaki 250cc Versys Launched — Maybe This Is One Adventure Bike India Needs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+