2016 ಹೋಂಡಾ ಡ್ರೀಮ್ ನಿಯೊ ಬೈಕ್ ಬಿಡುಗಡೆ

By Nagaraja

ಮಾರುಕಟ್ಟೆಯಲ್ಲಿ ತಾಜಾತನ ಕಾಪಾಡಿಕೊಳ್ಳುವುದರೊಂದಿಗೆ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಂಎಸ್‌ಐ), ತಮ್ಮ ಡ್ರೀಮ್ ಶ್ರೇಣಿಯ ಅತಿ ನೂತನ 2016 ಡ್ರೀಮ್ ನಿಯೊ ಬೈಕನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 49,070 ರು. (ಎಕ್ಸ್ ಶೋ ರೂಂ ದೆಹಲಿ)

ಇದಕ್ಕೂ ಮೊದಲು ಫೆಬ್ರವರಿ ತಿಂಗಳಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ನೂತನ ಹೋಂಡಾ ಡ್ರೀಮ್ ನಿಯೊ ಪ್ರದರ್ಶನ ಕಂಡಿತ್ತು. ಈಗ ಕೆಲವೊಂದು ಗಮನಾರ್ಹ ಕಾಸ್ಮೆಟಿಕ್ ಬದಲಾವಣೆಗಳನ್ನು ಗಿಟ್ಟಿಸಿಕೊಂಡಿದೆ.

ಬೆಂಗಳೂರು ಬೆಲೆ

ಬೆಂಗಳೂರು ಬೆಲೆ

  • ಎಕ್ಸ್ ಶೋ ರೂಂ: 50053 ರು.
  • ಆನ್ ರೋಡ್: 58302 ರು.
  • 2016 ಹೋಂಡಾ ಡ್ರೀಮ್ ನಿಯೊ ಬೈಕ್ ಬಿಡುಗಡೆ

    ಐದು ಜಪಾನ್ ಮೂಲದ ದ್ವಿಚಕ್ರ ವಾಹನ ಸಂಸ್ಥೆ ದೇಶದಲ್ಲಿ ಬಿಡುಗಡೆ ಮಾಡುತ್ತಿರುವ ಐದನೇ ಮಾದರಿಯಾಗಿದೆ. ನೂತನ ಹೋಂಡಾ ಡ್ರೀಮ್ ನಿಯೊದಲ್ಲಿ ಪ್ರಮುಖವಾಗಿಯೂ ಗ್ರಾಫಿಕ್ಸ್ ಹಾಗೂ ಮೂರು ಹೊಸ ಬಣ್ಣಗಳು ಸೇರ್ಪಡೆಯಾಗಿದೆ.

    ಮೂರು ಆಕರ್ಷಕ ಬಣ್ಣಗಳು ಇಂತಿದೆ

    ಮೂರು ಆಕರ್ಷಕ ಬಣ್ಣಗಳು ಇಂತಿದೆ

    • ಬ್ಲ್ಯಾಕ್ ಜೊತೆ ಬ್ಲೂ ಸ್ಟ್ರೈಪ್,
    • ಇಂಪಿರಿಯಲ್ ರೆಡ್ ಮೆಟ್ಯಾಲಿಕ್,
    • ಗೆನಿ ಗ್ರೇ ಮೆಟ್ಯಾಲಿಕ್.
    • 2016 ಹೋಂಡಾ ಡ್ರೀಮ್ ನಿಯೊ ಬೈಕ್ ಬಿಡುಗಡೆ

      ನೂತನ ಹೋಂಡಾ ಡ್ರೀಮ್ ನಿಯೊ ಪ್ರಯಾಣಿಕ ಬೈಕ್ ನಲ್ಲಿ ಕ್ರೋಮ್ ಪ್ಲೇಟಡ್ ಮಫ್ಲರ್ ಪ್ರೊಟೆಕ್ಟರ್ ಮತ್ತು ಇಂಧನ ಟ್ಯಾಂಕ್ ಮೇಲೆ ತ್ರಿಡಿ ಲಾಂಛನವನ್ನು ಬಳಕೆ ಮಾಡಲಾಗಿದೆ.

      2016 ಹೋಂಡಾ ಡ್ರೀಮ್ ನಿಯೊ ಬೈಕ್ ಬಿಡುಗಡೆ

      ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದರ 109.19 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 8.63 ಎನ್ ಎಂ ತಿರುಗುಬಲದಲ್ಲಿ (5,500 rpm) 8.25 ಅಶ್ವಶಕ್ತಿಯನ್ನು (7,500 rpm) ಉತ್ಪಾದಿಸಲಿದೆ.

      2016 ಹೋಂಡಾ ಡ್ರೀಮ್ ನಿಯೊ ಬೈಕ್ ಬಿಡುಗಡೆ

      ಐದು ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಹೀರೊ ಡ್ರೀಮ್ ನಿಯೊದಲ್ಲಿ ಸಂಸ್ಥೆಯ ಹೋಂಡಾ ಇಕೊ ತಂತ್ರಜ್ಞಾನವನ್ನು (ಎಚ್ ಇಟಿ) ನೀಡಲಾಗಿದ್ದು, ಗರಿಷ್ಠ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.

      ಮೈಲೇಜ್

      ಮೈಲೇಜ್

      ಸಂಸ್ಥೆಯ ಪ್ರಕಾರ 2016 ಹೋಂಡಾ ಡ್ರೀಮ್ ನಿಯೊ ಬೈಕ್ ಪ್ರತಿ ಲೀಟರ್ ಗೆ 74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

      2016 ಹೋಂಡಾ ಡ್ರೀಮ್ ನಿಯೊ ಬೈಕ್ ಬಿಡುಗಡೆ

      ಅಂದ ಹಾಗೆ ಹೋಂಡಾ ಡ್ರೀಮ್ ನಿಯೊ ಏಕಮಾತ್ರ ಡ್ರಮ್ ಬ್ರೇಕ್ ವೆರಿಯಂಟ್ ನಲ್ಲಿ ಮಾತ್ರ ಲಭ್ಯವಿರುತ್ತದೆ. ಇದು ಸೆಲ್ಪ್ ಸ್ಟ್ಯಾರ್ಟರ್ ಮತ್ತು ಅಲಾಯ್ ವೀಲ್ ಗಳನ್ನು ಪಡೆಯಲಿದೆ.

Article Published On: Thursday, April 7, 2016, 17:57 [IST]
English summary
Honda Dream Neo 2016 Model Gets New Colours & Style Updates
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+