ನೀಲಿ ಬಣ್ಣದೊಂದಿಗೆ ಕಂಗೊಳಿಸುವ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಾ
ಈ ಮೊದಲೇ ತಿಳಿಸಿರುವಂತೆಯೇ ರಾಯಲ್ ಎನ್‌ಫೀಲ್ಡ್‌ನ ಐಕಾನಿಕ್ ಎಲೆಕ್ಟ್ರಾ ಬುಲೆಟ್‌ಗೆ ಹೊಸ ಬಣ್ಣದ ಸ್ಪರ್ಶ ತಗುಲಿದೆ. 2016ನೇ ಸಾಲಿನಲ್ಲಿ ಎಲೆಕ್ಟ್ರಾ ಹೊಸತಾದ ನೀಲಿ ಬಣ್ಣದೊಂದಿಗೆ ಕಂಗೊಳಿಸಲಿದೆ.
ಇದರೊಂದಿಗೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಾ ನಾಲ್ಕು ಬಣ್ಣಗಳ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ. ಅವುಗಳೆಂದರೆ,

ಬೆಳ್ಳಿ, ಕಪ್ಪು, ಕೆಂಗಂದು ಮತ್ತು ನೀಲಿ.
ಹಾಗಿದ್ದರೂ ವಿನ್ಯಾಸ ಹಾಗೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಇದಕ್ಕೂ ಮೊದಲು ಎಲೆಕ್ಟ್ರಾ ಮೂರು ಬಣ್ಣಗಳ ಆಯ್ಕೆಗಳಲ್ಲಿ ಮಾತ್ರ ಲಭ್ಯವಾಗಿತ್ತು.
ಎಂಜಿನ್ ತಾಂತ್ರಿಕತೆ
- 346 ಸಿಸಿ, ಸಿಂಗಲ್ ಸಿಲಿಂಡರ್,
- ಏರ್ ಕೂಲ್ಡ್, ಟ್ವಿನ್ ಸ್ಪಾರ್ಕ್ ಎಂಜಿನ್

- ಗೇರ್ ಬಾಕ್ಸ್: 5 ಸ್ಪೀಡ್
- ಅಶ್ವಶಕ್ತಿ: 19.8
- ತಿರುಗುಬಲ: 28 ಎನ್‌ಎಂ
ಬ್ರೇಕ್ ವ್ಯವಸ್ಥೆ
- ಮುಂದಗಡೆ: ಡಿಸ್ಕ್
- ಹಿಂದುಗಡೆ: ಡ್ರಮ್


Click it and Unblock the Notifications