ಕಾಂಗರೂ, ಕಿವೀಸ್ ನಾಡಲ್ಲಿ ರಾಯಲ್ ಎನ್‌ಫೀಲ್ಡ್ ಅಬ್ಬರ!
ರಾಯಲ್ ಎನ್ ಫೀಲ್ಡ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿಭಾಗವು ಕಸ್ಟಮೈಸ್ಡ್ ಬೈಕ್ ಗಳಿಗಾಗಿ ವಿನೂತನ ಸ್ಪರ್ಧೆಯನ್ನು ಏರ್ಪಡಿಸಿತ್ತು.
ರಾಯಲ್ ಎನ್ ಫೀಲ್ಡ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿಭಾಗವು ಇದೇ ಮೊದಲ ಬಾರಿಗೆ 'ಡೀಲರ್ ಕಸ್ಟಮ್ ಬೈಕ್ ಬಿಲ್ಡ್ ಆಫ್' ಎಂಬ ವಿನೂತನ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ತನ್ಮೂಲಕ ದೇಶದ್ಯಾಂತ ಸ್ಥಿತಗೊಂಡಿರುವ ರಾಯಲ್ ಎನ್ ಫೀಲ್ಡ್ ಡೀಲರುಗಳಿಗೆ ತಮ್ಮ ವಿನೂತನ ಆರ್ ಇ ಸೃಷ್ಟಿಯೊಂದಿಗೆ ಮುಂದೆ ಬರಲು ಅವಕಾಶ ಮಾಡಿಕೊಡಲಾಗಿತ್ತು.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸೇರಿದಂತೆ ಸ್ಪರ್ಧೆಯಲ್ಲಿ ವಿಶೇಷವಾಗಿ ಮಾರ್ಪಾಡುಗೊಳಿಸಿದ್ದ ರಾಯಲ್ ಎನ್ ಫೀಲ್ಡ್ ನ ಎಂಟು ಬೈಕ್ ಗಳು ಪ್ರದರ್ಶನಗೊಳಿಸಲಾಗಿದ್ದವು.

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕನ್ನು ಅತಿ ವಿಶಿಷ್ಟವಾದ ರಫ್ ಕಟ್ ರೂಪದಲ್ಲಿ ಪ್ರದರ್ಶಿಸಿದ ರಾಯಲ್ ಎನ್ ಫೀಲ್ಡ್ ಸಿಡ್ನಿ ವಿಭಾಗವು ವಿಜಯ ಪತಾಕೆ ಹಾರಿಸಿತ್ತು.

ವಿಶ್ವ ವಿಖ್ಯಾತ ಅತಿ ಪುರಾತನ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ಯಾವೆಲ್ಲ ರೀತಿಯಲ್ಲಿ ಮಾರ್ಪಾಡುಗೊಳಿಸಬಹುದು ಎಂಬುದನ್ನು ಗ್ರಾಹಕರಿಗೆ ತಲುಪಿಸುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿತ್ತು.

ಕೇವಲ ಒಂದು ತಿಂಗಳ ಅವಧಿಯಲ್ಲೇ ವಿವಿಧ ಡೀಲರುಗಳು ತಮ್ಮ ವಿನೂತನ ಆರ್ ಇ ಉತ್ಪನ್ನದೊಂದಿಗೆ ಮುಂದೆ ಬಂದಿತ್ತು.

ತದಾ ಬಳಿಕ ನಡೆಸಿದ ಸಾರ್ವಜನಿಕ ಮತದಾನದ ಮೂಲಕ ವಿಜೇತ ಬೈಕನ್ನು ಆರಿಸಲಾಗಿತ್ತು.

ಎಲ್ಲರ ಕಠಿಣ ಪರಿಶ್ರಮವೂ ಯಶ ಕಂಡಿರುವುದರಲ್ಲಿ ರಾಯಲ್ ಎನ್ ಫೀಲ್ಡ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿಭಾಗವು ಅತೀವ ಹರ್ಷವನ್ನು ವ್ಯಕ್ತಪಡಿಸಿದೆ.

ಇಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೈಕ್ ಗಳನ್ನು ಜಗತ್ತಿನಾದ್ಯಂತ ಪ್ರೇಕ್ಷಕರಿಗಾಗಿ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಪುಟಗಳಲ್ಲಿ ಹಂಚಿಕೊಳ್ಳಲಾಗಿದೆ.

ರಾಯಲ್ ಎನ್ ಫೀಲ್ಡ್ ಕಸ್ಟಮೈಸ್ಡ್ ಬೈಕ್ ಗಳ ಕಲರವ


Click it and Unblock the Notifications