ಐಕಾನಿಕ್ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಾ ಬುಲೆಟ್ ಸದ್ದಡಗಿತೇ?

By Nagaraja

ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ಸಂಸ್ಥೆ ರಾಯಲ್ ಎನ್ ಫೀಲ್ಡ್ ನಿರ್ಮಿತ ಐಕಾನಿಕ್ ಎಲೆಕ್ಟ್ರಾ ಬುಲೆಟ್ ಸದ್ದಡಗಿತೇ ಎಂಬ ಪ್ರಶ್ನೆಗಳು ಬಲವಾಗಿ ಕೇಳಿ ಬರುತ್ತಿದೆ. ಇದರೊಂದಿಗೆ ದೇಶದ ರಸ್ತೆಗಳಲ್ಲಿ ರಾರಾಜಿಸುತ್ತಿದ್ದ ಎಲೆಕ್ಟ್ರಾ ಬುಲೆಟ್ ಯುಗಾಂತ್ಯ ಕಾಣಲಿದೆ.

ಈ ಬಗ್ಗೆ ಚೆನ್ನೈ ಮೂಲದ ರಾಯಲ್ ಎನ್ ಫೀಲ್ಡ್ ಸಂಸ್ಥೆಯಿಂದ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ. ಆದರೆ ವಾಹನೋದ್ಯಮದ ನಿಕಟ ಮೂಲಗಳಿಂದ ಲಭಿಸಿರುವ ಮಾಹಿತಿಗಳ ಪ್ರಕಾರ ಎಲೆಕ್ಟ್ರಾ ಉತ್ಪಾದನೆಯನ್ನು ಸ್ಧಗಿತಗೊಳಿಸಲಾಗಿದೆ.

ಐಕಾನಿಕ್ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಾ ಬುಲೆಟ್ ಸದ್ದಡಗಿತೇ?

ಸಮಕಾಲೀನ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾಂಟಿನೆಂಟಲ್ ಜಿಟಿ, ಹಿಮಾಲಯನ್, ಥಂಡರ್ ಬರ್ಡ್, ಕ್ಲಾಸಿಕ್ ಹಾಗೂ ಬುಲೆಟ್ ಶ್ರೇಣಿಯ ಬೈಕ್ ಗಳನ್ನು ರಾಯಲ್ ಎನ್ ಫೀಲ್ಡ್ ಮಾರಾಟ ಮಾಡುತ್ತಿದೆ.

ಐಕಾನಿಕ್ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಾ ಬುಲೆಟ್ ಸದ್ದಡಗಿತೇ?

ಈ ನಡುವೆ ಲಾಭದ ವಿಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಿರುವ ಎಲೆಕ್ಟ್ರಾ ಹಿಂಪಡೆದುಕೊಳ್ಳಲು ಎನ್ ಫೀಲ್ಡ್ ನಿರ್ಧರಿಸಿದೆ ಎಂಬ ಬಗ್ಗೆ ಮಾಹಿತಿಯಿದೆ.

ಐಕಾನಿಕ್ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಾ ಬುಲೆಟ್ ಸದ್ದಡಗಿತೇ?

ರಾಯಲ್ ಎನ್ ಫೀಲ್ಡ್ ಇತರೆ ಬೈಕ್ ಗಳನ್ನು ಹೋಲಿಸಿದಾಗ ಎಲೆಕ್ಟ್ರಾ ಕಡಿಮೆ ದುಬಾರಿ ಎನಿಸಿಕೊಂಡಿದೆ. ಇದು ಸಂಸ್ಥೆಯ ಅತಿ ಹಳೆಯ ಮಾದರಿಗಳಲ್ಲೂ ಒಂದಾಗಿದೆ.

ಐಕಾನಿಕ್ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಾ ಬುಲೆಟ್ ಸದ್ದಡಗಿತೇ?

1990ರ ದಶಕದಲ್ಲಿ ಎಂಟ್ರಿ ಕೊಟ್ಟಿರುವ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಾ, ಸಂಸ್ಥೆಯ ಅದೃಷ್ಟ ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಸಮಕಾಲೀನ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳಿಗೆ ಬೇಡಿಕೆ ಹೆಚ್ಚಿರುವುದು ಹಾಗೂ ನಿರ್ಮಾಣ ಜಟಿಲತೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಎಲೆಕ್ಟ್ರಾ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ಐಕಾನಿಕ್ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಾ ಬುಲೆಟ್ ಸದ್ದಡಗಿತೇ?

ಹಾಗಿದ್ದರೂ ಈಗಿರುವ ಎಲೆಕ್ಟ್ರಾ ಸ್ಟೋಕ್ ಗಳನ್ನು ಖಾಲಿ ಮಾಡಲು ಸಂಸ್ಥೆಯು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಸಂಸ್ಥೆಯ ಅಧಿಕೃತ ವೆಬ್ ಸೈಟ್ ನಿಂದ ಆಗಲೇ ಎಲೆಕ್ಟ್ರಾ ಮಾಯವಾಗಿದೆ.

ಐಕಾನಿಕ್ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಾ ಬುಲೆಟ್ ಸದ್ದಡಗಿತೇ?

ಐಯಾನ್ ಕಾಸ್ಟ್ ಎಂಜಿನ್ ನೊಂದಿಗೆ ಎಂಟ್ರಿ ಕೊಟ್ಟಿದ್ದ ಬುಲೆಟ್ ಎಲೆಕ್ಟ್ರಾ, ಆರಂಭದಲ್ಲಿ ಎಡಬದಿಯಲ್ಲಿ ಬ್ರೇಕ್ ಪೆಡಲ್ ಗಳನ್ನು ಪಡೆದುಕೊಂಡಿತ್ತು. ಬಳಿಕ ಟ್ವಿನ್ ಸ್ಪಾರ್ಕ್ ಫೈಸ್ ಸ್ಪೀಡ್ ಯುಸಿಇ ಎಂಜಿನ್ ಹಾಗೂ ಬಲಭಾಗದಲ್ಲಿ ಬ್ರೇಕ್ ಪೆಡಲ್ ಗಳನ್ನು ಗಿಟ್ಟಿಸಿಕೊಂಡಿತ್ತು.


More from DriveSpark

Article Published On: Wednesday, September 21, 2016, 13:23 [IST]
English summary
Royal Enfield Electra Taken Off Production — End Of A Legacy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+