ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ಎಂಜಿನ್ ದೋಷ?

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಅತಿ ನೂತನ ರಸ್ತೆ ಹಾಗೂ ಆಫ್ ರೋಡ್ ಸಾಮರ್ಥ್ಯದ ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕನ್ನು ರಾಯಲ್ ಎನ್ ಫೀಲ್ಡ್ ಬಿಡುಗಡೆಗೊಳಿಸಿತ್ತು. ಇದೀಗ ಬಂದಿರುವ ನಿಕಟ ಮೂಲಗಳ ವರದಿಗಳ ಪ್ರಕಾರ ಎಂಜಿನ್ ದೋಷದ ಹಿನ್ನಲೆಯಲ್ಲಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗುತ್ತಿದೆ.

ಈ ಸಂಬಂಧ ಚೆನ್ನೈ ತಳಹದಿಯ ದೇಶದ ಪ್ರತಿಷ್ಠಿತ ಸಂಸ್ಥೆಯಿಂದ ಯಾವುದೇ ಅಧಿಕೃತ ಪ್ರಕಟಣೆಗಳು ಬಂದಿಲ್ಲ. ಹಾಗಿದ್ದರೂ ಡೀಲರುಗಳು ಹಿಂದಕ್ಕೆ ಕರೆಯಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಎಂಬುದು ತಿಳಿದು ಬಂದಿದೆ.

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ಎಂಜಿನ್ ದೋಷ?

ರಾಯಲ್ ಎನ್ ಫೀಲ್ಡ್ ಹಿಮಾನಲಯನ್ ಬೈಕ್ ನ ರಾಕರ್ ಶಾಫ್ಟ್ ಮತ್ತು ಕ್ಲಚ್ ಜೋಡಣೆಯಲ್ಲಿ ಸಮಸ್ಯೆ ಕಂಡುಬಂದಿದೆ ಎಂಬುದು ತಿಳಿದು ಬಂದಿದೆ.

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ಎಂಜಿನ್ ದೋಷ?

ಈ ಸಂಬಂಧ ಡೀಲರುಗಳು ಹಿಮಾಲಯನ್ ಬೈಕ್ ಗಳನ್ನು ಪರಿಶೀಲಿಸುತ್ತಿದ್ದು, ತೊಂದರೆ ಕಂಡುಬಂದ್ದಲ್ಲಿ ಸಂಪೂರ್ಣವಾಗಿ ಉಚಿತವಾಗಿ ಸಮಸ್ಯೆ ಬಗೆಹರಿಸಿಕೊಡಲಾಗುತ್ತಿದೆ.

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ಎಂಜಿನ್ ದೋಷ?

ಹಿಮಾಲಯನ್ ಬೈಕ್ ನಲ್ಲಿ ಅತಿಯಾದ ಶಬ್ದ ಮಾಲಿನ್ಯದ ಬಗ್ಗೆ ಗ್ರಾಹಕರು ದೂರು ದಾಖಲಿಸಿದ್ದಾರೆ. ಇದನ್ನು ಸಂಸ್ಥೆಯ ಗಮನಕ್ಕೂ ತರಲಾಗುತ್ತಿದೆ ಎನ್ನಲಾಗಿದೆ.

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ಎಂಜಿನ್ ದೋಷ?

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಮೊದಲ ಬಾರಿಗೆ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿತ್ತು. ತದ ಬಳಿಕ ದೇಶದ್ಯಾಂತ ಭರ್ಜರಿ ಬಿಡುಗಡೆ ಕಂಡಿತ್ತು.

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ಎಂಜಿನ್ ದೋಷ?

ನೂತನ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ದೆಹಲಿ ಆನ್ ರೋಡ್ ಬೆಲೆ 1,78,872 ರು.ಗಳಾಗಿರಲಿದೆ. ಇನ್ನು ಬೆಂಗಳೂರು ಆನ್ ರೋಡ್ ಬೆಲೆ 1,84,316 ರು.ಗಳಾಗಿರಲಿದೆ.

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ಎಂಜಿನ್ ದೋಷ?

ಇದರಲ್ಲಿರುವ 411 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ 4 ಸ್ಟ್ರೋಕ್ ಎಸ್ ಒಎಚ್ ಸಿ ಎಂಜಿನ್ 32 ಎನ್ ಎಂ ತಿರುಗುಬಲದಲ್ಲಿ 24.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಆಯಾಮ

ಆಯಾಮ

ಚಕ್ರಾಂತರ: 1465

ಗ್ರೌಂಡ್ ಕ್ಲಿಯರನ್ಸ್: 220

ಉದ್ದ: 2190

ಅಗಲ: 840

ಸೀಟು ಎತ್ತರ: 800

ಎತ್ತರ: 1360

ಭಾರ: 182

ಇಂಧನ ಸಾಮರ್ಥ್ಯ: 15 + 0.5 ಲೀಟರ್

Article Published On: Saturday, July 2, 2016, 13:34 [IST]
English summary
Himalayan To Be Recalled By Royal Enfield Due To Engine Issues
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+