ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಭರ್ಜರಿ ಎಂಟ್ರಿ
ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವ ರಾಯಲ್ ಎನ್‌ಫೀಲ್ಡ್ ಅಡ್ವೆಂಚರ್ ಟೂರರ್ ಬೈಕ್ ಭಾರತ ಮಾರುಕಟ್ಟೆಯಲ್ಲಿ ಭರ್ಜರಿ ಅನಾವರಣಗೊಂಡಿದೆ. ಇದು 500 ಸಿಸಿ ವಿಭಾಗದೊಳಗೆ ಚೆನ್ನೈ ಮೂಲದ ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಮೊದಲ ಆಫ್ ರೋಡ್ ಬೈಕ್ ಕೂಡಾ ಆಗಿದೆ.
Also Read: ಸಂತೋಷ್ ಮೆಚ್ಚೆಗುಗೆ ಪಾತ್ರವಾದ ಹಿಮಾಲಯನ್ ಬೈಕ್
2016 ಆಟೋ ಎಕ್ಸ್ ಪೋಗೂ ಮುಂಚಿತವಾಗಿ ಭರ್ಜರಿ ಪ್ರದರ್ಶನ ಕಂಡಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾರ್ಚ್ ವೇಳೆಯಾಗುವಾಗ ಮಾರಾಟಕ್ಕೆ ಲಭ್ಯವಾಗಲಿದೆ. ಇತರೆಲ್ಲ ಎನ್ ಫೀಲ್ಡ್ ಮಾದರಿಗಿಂತಲೂ ಸಂಪೂರ್ಣ ವಿಭಿನ್ನವಾಗಿರುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ 1.8 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಎಂಜಿನ್ ತಾಂತ್ರಿಕತೆ
ವಿಧ: ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಒಎಚ್‌ಸಿ
ಸಾಮರ್ಥ್ಯ: 411 ಸಿಸಿ
ಗರಿಷ್ಠ ಪವರ್: 24.5 ಅಶ್ವಶಕ್ತಿ (18.02 KW) @ 6500 RPM
ಗರಿಷ್ಠ ತಿರುಗುಬಲ: 32 ಎನ್‌ಎಂ @ 4000 - 4500 RPM
ಇಗ್ನಿಷನ್ ಸಿಸ್ಟಂ: TCI, ಮಲ್ಟಿ ಕರ್ವ್
ಕ್ಲಚ್: ವೆಟ್, ಮಲ್ಟಿ ಪ್ಲೇಟ್
ಗೇರ್ ಬಾಕ್ಸ್: 5 ಸ್ಪೀಡ್ ಕಾಂಸ್ಟಂಟ್ ಮೆಶ್,
ಲ್ಯೂಬ್ರಿಕೇಷನ್: ವೆಟ್ ಸಂಪ್,
ಫ್ಯೂಯಲ್ ಸಪ್ಲೈ: ಕಾರ್ಬ್ಯುರೇಟರ್ ಜೊತೆ ಥ್ರಾಟಲ್ ಪೊಸಿಶನ್ ಸೆನ್ಸಾರ್
ಎಂಜಿನ್ ಸ್ಟ್ಯಾರ್ಟ್: ಎಲೆಕ್ಟ್ರಿಕ್
ಚಾಸೀ ಮತ್ತು ಸಸ್ಪೆನ್ಷನ್
ವಿಧ: ಹಾಲ್ಪ್ ಡುಪ್ಲೆಕ್ಸ್ ವಿಭಜಿತ ಕ್ರಾಡಲ್ ಫ್ರೇಮ್
ಮುಂಭಾಗ: ಟೆಲಿಸ್ಕಾಪಿಕ್, 41 ಎಂಎಂ ಫಾರ್ಕ್, 200 ಎಂಎಂ ಟ್ರಾವೆಲ್,
ಹಿಂಭಾಗ: ಮೊನೊಶಾಕ್ ಜೊತೆ ಲಿಂಕೇಜ್, 180 ಎಂಎಂ ವೀಲ್ ಟ್ರಾವೆಲ್.
ಆಯಾಮ (ಎಂಎಂ )
ಚಕ್ರಾಂತರ: 1465
ಗ್ರೌಂಡ್ ಕ್ಲಿಯರನ್ಸ್: 220
ಉದ್ದ: 2190
ಅಗಲ: 840
ಸೀಟು ಎತ್ತರ: 800
ಎತ್ತರ: 1360
ಭಾರ: 182
ಇಂಧನ ಸಾಮರ್ಥ್ಯ: 15 + 0.5 ಲೀಟರ್
ಬ್ರೇಕ್ ಮತ್ತು ಚಕ್ರಗಳು
ಮುಂಭಾಗ: 90/90-21
ಹಿಂಭಾಗ : 120/90 - 17
ಫ್ರಂಟ್ ಬ್ರೇಕ್: 300 ಎಂಎಂ ಡಿಸ್ಕ್, 2 ಪಿಸ್ತಾನ್ ಪ್ಲೋಟಿಂಗ್ ಕ್ಯಾಲಿಪರ್
ರಿಯರ್ ಬ್ರೇಕ್: 240 ಎಂಎಂ ಡಿಸ್ಕ್, ಸಿಂಗಲ್ ಪಿಸ್ತಾನ್ ಪ್ಲೋಟಿಂಗ್ ಕ್ಯಾಲಿಪರ್
ಎಲೆಕ್ಟ್ರಿಕಲ್ಸ್
ಎಲೆಕ್ಟ್ರಿಕಲ್ ಸಿಸ್ಟಂ: 12 ವಾಟ್ - ಡಿಸಿ
ಬ್ಯಾಟರಿ: 12 ವಾಟ್, 8 ಎಚ್ ವಿಆರ್‌ಎಲ್‌ಎ
ಹೆಡ್ ಲ್ಯಾಂಪ್: 12 H4 60/ 55W
ಟೈಲ್ ಲ್ಯಾಂಪ್: ಎಲ್‌ಇಡಿ


Click it and Unblock the Notifications


































