ರಾಯಲ್ ಎನ್ ಫೀಲ್ಡ್ ಬುಲೆಟ್ ಗಳಿಗೆ ತಟ್ಟಿದ ಬೆಲೆ ಏರಿಕೆ ಬಿಸಿ

By Nagaraja

ರಾಯಲ್ ಎನ್ ಫೀಲ್ಡ್ ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಬೇಡಿಕೆಯ ದ್ವಿಚಕ್ರ ವಾಹನ ಸಂಸ್ಥೆ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ. ಆದರೆ ರಾಯಲ್ ಎನ್ ಫೀಲ್ಡ್ ಪ್ರೇಮಿಗಳಿಗೆ ನಿರಾಸೆ ಕಾದಿದೆ. ಅದೇನೆಂದರೆ ಚೆನ್ನೈ ಮೂಲದ ಈ ಬುಲೆಟ್ ಸಂಸ್ಥೆಯು ತನ್ನೆಲ್ಲ ಶ್ರೇಣಿಯ ಬೈಕ್ ಗಳಿಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

ಭಾರತದಲ್ಲಿ 100 ವರ್ಷಕ್ಕೂ ಹೆಚ್ಚಿನ ಇತಿಹಾಸ ಪರಂಪರೆಯನ್ನು ಹೊಂದಿರುವ ರಾಯಲ್ ಎನ್ ಫೀಲ್ಡ್, ಕಾಲ ಕಾಲಕ್ಕೆ ಬೆಲೆಯನ್ನು ಪರಿಷ್ಕರಿಸುತ್ತಲೇ ಬಂದಿದೆ. ಈಗ ರಾಯಲ್ ಎನ್ ಫೀಲ್ಡ್ ಶ್ರೇಣಿಯ ದ್ವಿಚಕ್ರ ವಾಹನಗಳಿಗೆ 1,200 ರುಪಾಯಿಗಳಿಂದ ಗರಿಷ್ಠ 3,6000 ರು.ಗಳಷ್ಟು ಬೆಲೆ ಏರಿಕೆ ಕಂಡುಬಂದಿದೆ. ಆದರೆ ಯಾವ ಕಾರಣಕ್ಕೆ ಬೆಲೆ ಏರಿಕೆಗೊಳಿಸಲಾಗಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಬುಲೆಟ್ 350

ಬುಲೆಟ್ 350

ರಾಯಲ್ ಎನ್ ಫೀಲ್ಡ್ ಬುಲೆಟ್ 350 ಮುಂಬೈ ಆನ್ ರೋಡ್ ಬೆಲೆಗಳಲ್ಲಿ 2,779 ರುಪಾಯಿಗಳಷ್ಟು ಬೆಲೆ ಏರಿಕೆ ಕಂಡುಬಂದಿದೆ.

ಕ್ಲಾಸಿಕ್ 350

ಕ್ಲಾಸಿಕ್ 350

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಮುಂಬೈ ಆನ್ ರೋಡ್ ಬೆಲೆಗಳಲ್ಲಿ 3,057 ರುಪಾಯಿಗಳ ವರ್ಧನೆಯುಂಟಾಗಿದೆ.

ಕಾಂಟಿನೆಂಟಲ್ ಜಿಟಿ

ಕಾಂಟಿನೆಂಟಲ್ ಜಿಟಿ

ರಾಯಲ್ ಎನ್ ಫೀಲ್ಡ್ ಕಾಟಿನೆಂಟಲ್ ಜಿಟಿ ಮುಂಬೈ ಆನ್ ರೋಡ್ ಬೆಲೆಯ ಮೇಲೆ 1,659 ರುಪಾಯಿಗಳ ಏರಿಕೆ ಕಂಡುಬಂದಿದೆ.

ಹಿಮಾಲಯನ್

ಹಿಮಾಲಯನ್

ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಮುಂಬೈ ಆನ್ ರೋಡ್ ಬೆಲೆಗಳಲ್ಲಿ 1,235 ರು.ಗಳ ಏರಿಕೆಯಾಗಿದೆ.

ಥಂಡರ್ ಬರ್ಡ್ 350

ಥಂಡರ್ ಬರ್ಡ್ 350

ಅದೇ ರೀತಿ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 350 ಆವೃತ್ತಿಯ ಮುಂಬೈ ಆನ್ ರೋಡ್ ಬೆಲೆಗಳಲ್ಲೂ 1,570 ರು.ಗಳಷ್ಟು ಏರಿಕೆಯಾಗಿದೆ.

ಥಂಡರ್ ಬರ್ಡ್ 500

ಥಂಡರ್ ಬರ್ಡ್ 500

ಇನ್ನು ಶಕ್ತಿಶಾಲಿ ಥಂಡರ್ ಬರ್ಡ್ 500 ಮಾದರಿಯ ಮುಂಬೈ ಆನ್ ರೋಡ್ ಬೆಲೆಯಲ್ಲಿ 1,630 ರುಪಾಯಿಗಳಷ್ಟು ವರ್ಧನೆಯುಂಟಾಗಿದೆ.

ಕ್ಲಾಸಿಕ್ 500

ಕ್ಲಾಸಿಕ್ 500

ಅತ್ತ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಆವೃತ್ತಿಯ ಮುಂಬೈ ಆನ್ ರೋಡ್ ಬೆಲೆಗಳಲ್ಲಿ 3,516 ರು.ಗಳಷ್ಟು ಏರಿಕೆಯಾಗಿದ್ದು, ದುಬಾರಿಯೆನಿಸಿದೆ.

ಡೆಸರ್ಟ್ ಸ್ಟ್ರೋಮ್

ಡೆಸರ್ಟ್ ಸ್ಟ್ರೋಮ್

ಅಂತೆಯೇ ರಾಯನ್ ಎನ್ ಫೀಲ್ಡ್ ಡೆಸರ್ಟ್ ಸ್ಟ್ರೋಮ್ ಮುಂಬೈ ಆನ್ ರೋಡ್ ಬೆಲೆಗಳಲ್ಲೂ 3,552 ರುಪಾಯಿಗಳ ಏರಿಕೆಯುಂಟಾಗಿದೆ.

ಕ್ಲಾಸಿಕ್ ಕ್ರೋಮ್

ಕ್ಲಾಸಿಕ್ ಕ್ರೋಮ್

ಕೊನೆಯದಾಗಿ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಕ್ರೋಮ್ ಆವೃತ್ತಿಯ ಮುಂಬೈ ಆನ್ ರೋಡ್ ಬೆಲೆಯಲ್ಲಿ 3,652 ರುಪಾಯಿಗಳ ಹೆಚ್ಚಳುವುಂಟಾಗಿದೆ.

More from DriveSpark

Article Published On: Wednesday, August 24, 2016, 11:27 [IST]
English summary
Royal Enfield Hikes Prices For Entire Range — Here's The Detailed List
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+