ಮನಸೊರೆಗೈದ ರಾಯಲ್ ಎನ್ ಫೀಲ್ಡ್ ಥಂಡರ್ ಕ್ಯಾಟ್
ವಾಹನ ಮಾರ್ಪಾಡು ಸಂಸ್ಥೆಗಳ ಪಾಲಿಗೆ ರಾಯಲ್ ಎನ್ ಫೀಲ್ಡ್ ಬುಲೆಟ್ ಗಳು ಎಂದೂ ಪ್ರಿಯವೆನಿಸಿದೆ. ಸದೃಢವಾದ ದೇಹ ಹಾಗೂ ಕ್ಲಾಸಿಕ್ ವಿನ್ಯಾಸಗಳು ಬೈಕ್ ಪ್ರೇಮಿಗಳ ಪಾಲಿಗೆ ಅತ್ಯಂತ ಪ್ರಿಯವೆನಿಸಿದೆ.
ಚೆನ್ನೈ ಮೂಲದ ಪ್ರತಿಷ್ಠಿತ ರಾಯನ್ ಎನ್ ಫೀಲ್ಡ್ ಸಂಸ್ಥೆಗಳು ಅನೇಕ ಐಕಾನಿಕ್ ಮಾದರಿಗಳನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದೆ. ಇವುಗಳಲ್ಲಿ ಥಂಡರ್ ಬರ್ಡ್ ಕೂಡಾ ಒಂದಾಗಿದೆ. ಕ್ರೂಸರ್ ವಿಭಾಗದಲ್ಲಿ ಅದ್ಭುತ ಚಾಲನಾ ಅನುಭವ ಖಾತ್ರಿಪಡಿಸುವ ಥಂಡರ್ ಬರ್ಡ್ ದೇಶದಲ್ಲಿ 500 ಹಾಗೂ 350 ಆವೃತ್ತಿಗಳು ಮಾರಾಟದಲ್ಲಿವೆ.

ಈ ನಡುವೆ ಬೆಂಗಳೂರು ತಳಹದಿಯ ಆಟೋಮೋಟಿವ್ ಸಂಸ್ಥೆಯಾಗಿರುವ ಬುಲೆಟೀರ್ ಕಸ್ಟಮ್ಸ್, ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ ಬುಲೆಟನ್ನು ವಿಶಿಷ್ಟವಾಗಿ ಮಾರ್ಪಾಡುಗೊಳಿಸಿದೆ.

2005ರಲ್ಲಿ ಆರಂಭವಾಗಿರುವ ಸಂಸ್ಥೆಯು ತನ್ನದೇ ಆದ ಕಸ್ಟಮೈಸ್ಡ್ ವಿನ್ಯಾಸದಿಂದ ಹೆಚ್ಚಿನ ಜನಪ್ರಿಯತೆಗೆ ಪಾತ್ರವಾಗಿದೆ.

ಇಲ್ಲಿ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 500 ಕ್ರೂಸರ್ ಬೈಕನ್ನು ಮಾರ್ಪಾಡುಗೊಳಿಸಿ ಕೆಫೆ ರೇಸರ್ ಶೈಲಿಯ ನೋಟವನ್ನು ಕಲ್ಪಿಸಿಕೊಡಲಾಗಿದೆ.

ಇದನ್ನು ಥಂಡರ್ ಕ್ಯಾಟ್ ಎಂದು ಹೆಸರಿಸಲಾಗಿದ್ದು, ಏಕಮಾತ್ರ ಸೀಟು ಲಗತ್ತಿಸಲಾಗಿದೆ. ಇನ್ನು ಡೇಮೇಕರ್ ಹೆಡ್ ಲೈಟ್ ಪ್ರಮುಖ ಆಕರ್ಷಣೆಯಾಗಿದೆ.

ಮುಂಭಾಗದಲ್ಲಿ 120 ಸೆಕ್ಷನ್ ಹಾಗೂ ಹಿಂಭಾಗದಲ್ಲಿ 190 ಸೆಕ್ಷನ್ ಅಗಲವಾದ ಚಕ್ರಗಳನ್ನು ಜೋಡಣೆ ಮಾಡಲಾಗಿದೆ.

ರಿಯರ್ ಮೊನೊಶಾಕ್, ಡಿಜಿಟಲ್ ಸ್ಪೀಡೋ ಕನ್ಸಾಲ್, ಹ್ಯಾಂಡಲ್ ಬಾರ್ ನಲ್ಲಿ ಕ್ಲಿಪ್, ಸೀಟು ಕಳೆಗಡೆ ಟೈಲ್ ಲ್ಯಾಂಪ್, ಪರಿಷ್ಕೃತ ಎಕ್ಸಾಸ್ಟ್ ಇತ್ಯಾದಿ ವೈಶಿಷ್ಟ್ಯಗಳಿವೆ.

ರಾಯಲ್ ಎನ್ ಫೀಲ್ಡ್ ಥಂಡರ್ ಕ್ಯಾಟ್ ವಿಶೇಷ ಮೈ ಬಣ್ಣದೊಂದಿಗೆ ಆಗಮನವಾಗಿದೆ.

ಅಂದ ಹಾಗೆ 499 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಟ್ವಿನ್ ಸ್ಪಾರ್ಕ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 41.3 ಎನ್ ಎಂ ತಿರುಗುಬಲದಲ್ಲಿ 27.2 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.


Click it and Unblock the Notifications








