750ಸಿಸಿ, 140 ಕೆ.ಜಿ, 180 ಅಶ್ವಶಕ್ತಿ ಉತ್ಪಾದಿಸಬಲ್ಲ ಸೂಪರ್ ಬೈಕ್
ರೇಸ್ ಬೈಕ್ ಗಳಿಂದ ಸ್ಪೂರ್ತಿ ಪಡೆದುಕೊಂಡು ಸ್ಪಿರಿಟ್ ಮೋಟಾರ್ ಸೈಕಲ್ ಅತಿ ನೂತನ ಸೂಪರ್ ಬೈಕ್ ಗಳನ್ನು ತಯಾರಿಸಿದೆ.
ನೀವು ಹಲವು ವಿಧದ ಸೂಪರ್ ಬೈಕ್ ಗಳ ಬಗ್ಗೆ ಕೇಳಿರುತ್ತೀರಾ! ಇದಕ್ಕೀಗ ಹೊಸತೊಂದು ಸೂಪರ್ ಬೈಕ್ ಸೇರ್ಪಡೆಯಾಗಿದೆ. ಬ್ರಿಟನ್ ಮೂಲದ ಸ್ಪಿರಿಟ್ ಮೋಟಾರ್ ಸೈಕಲ್ ಸಂಸ್ಥೆಯೇ 750ಸಿಸಿ ಎಂಜಿನ್, 140 ಕೆ.ಜಿ ಭಾರ ಹಾಗೂ 180 ಅಶ್ವಶಕ್ತಿ ಉತ್ಪಾದಿಸಬಲ್ಲ ಎರಡು ಸೂಪರ್ ಬೈಕ್ ಗಳನ್ನು ಪರಿಚಯಿಸಿದೆ.

ಸ್ಪಿರಿಟ್ ಮೋಟಾರ್ ಸೈಕಲ್ ಸಂಸ್ಥೆಯು ಅತಿ ನೂತನ ಜಿಪಿ ಸ್ಪೋರ್ಟ್ ಮತ್ತು ಜಿಪಿ ಸ್ಟ್ರೀಟ್ ಗಳೆಂಬ ಎರಡು ಸೂಪರ್ ಬೈಕ್ ಗಳನ್ನು ಅನಾವರಣಗೊಳಿಸಿದೆ.

ಗ್ರ್ಯಾನ್ ಫ್ರೀಯಿಂದ ಉತ್ತೇಜನ ಪಡೆದು ಪೂರ್ಣವಾಗಿಯೂ ಹೊಂದಾಣಿಕೆ ಮಾಡಬಲ್ಲ ಚಾಸೀ ವ್ಯವಸ್ಥೆಯು ಇಲ್ಲಿ ಕಂಡುಬಂದಿರುವ ಪ್ರಮುಖ ವೈಶಿಷ್ಟ್ಯವಾಗಿದೆ.

ಕಾರ್ಬನ್ ಫೈಬರ್ ದೇಹ ರಚನೆಯನ್ನು ಇದು ಹೊಂದಿದ್ದು, ಒಟ್ಟಾರೆ ಭಾರ ಗಣನೀಯವಾಗಿ ಕಡಿತ ಮಾಡುವಲ್ಲಿ ಯಶ ಕಂಡಿದೆ.

750 ಸಿಸಿ ತ್ರಿ ಸಿಲಿಂಡರ್ ಎಂಜಿನ್, ಹಗುರ ಭಾರದ ಕಾರ್ಬನ್ ಫೈಬರ್ ಮೊನೊಕಾಕ್ ಸಂರಚನೆ ಜೊತೆಗೆ ಕಟ್ಟಿಂಗ್ ಎಡ್ಜ್ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗಿದೆ.

ಬ್ರಿಟನ್ ನಿರ್ವಹಣಾ ಬೈಕ್ ಗಳಲ್ಲಿ ಹೊಸತನಕ್ಕೆ ಕಾರಣವಾಗಿರುವ ಸ್ಪಿರಿಟ್ ಮೋಟಾರ್ ಸೈಕಲ್ ರೋಡ್ ಹಾಗೂ ಸ್ಟ್ರೀಟ್ ಸೂಪರ್ ಬೈಕ್ ವಿಭಾಗದಲ್ಲಿ ಹೊಸ ಅಧ್ಯಾಯ ರಚಿಸಲಿದೆ.

ಮುಂಭಾಗದಲ್ಲಿ ಕೆ ಟೆಕ್ ಕೆಟಿಆರ್ ಫಾರ್ಕ್ ಮತ್ತು ಹಿಂಭಾಗದಲ್ಲಿ ಕೆ ಟೆಕ್ ಡಿಡಿಎಸ್ ನಾಲ್ಕು ವಿಧಗಳಲ್ಲಿ ಹೊಂದಾಣಿಸಬಹುದಾದ ಸಸ್ಪೆನ್ಷನ್ ವ್ಯವಸ್ಥೆಯನ್ನು ಪಡೆದಿದೆ.

ಸ್ಪಿರಿಟ್ ಆಫ್ ದಿ ಸೆವೆಂಟೀಸ್ ಮತ್ತು ಟಿ3 ರೇಸಿಂಗ್ ಜೊತೆಗಾರಿಕೆಯಲ್ಲಿ ವಿಶ್ವ ದರ್ಜೆಯ ಸೂಪರ್ ಬೈಕ್ ಹೊರತರಲಾಗುತ್ತಿದೆ.


Click it and Unblock the Notifications








