ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾಗಲಿರುವ 10 ಆಕರ್ಷಕ ಸ್ಕೂಟರ್‌ಗಳು

By Nagaraja

ಈ ಮೊದಲೇ ತಿಳಿಸಿರುವಂತೆಯೇ ಭಾರತೀಯ ವಾಹನ ಮಾರುಕಟ್ಟೆ ಬದಲಾಗುತ್ತಿದೆ. ಈ ಬದಲಾವಣೆಯ ಪರ್ವ ಕಾರು ವಿಭಾಗದಲ್ಲಿ ಮಾತ್ರವಲ್ಲದೆ ದ್ವಿಚಕ್ರ ವಿಭಾಗಕ್ಕೂ ತಟ್ಟಿದೆ. ಇದರ ಪರಿಣಾಮವಾಗಿ ರಸ್ತೆಗಳೆಲ್ಲೆಡೆ ಓಡಾಡುತ್ತಾ ಬೈಕ್‌ಗಳ ಆರ್ಭಟ ಮಂಕಾಗಿದೆ.

Also Read: 2016 - ಮುಂಬರುವ ಕಾರುಗಳು

ಇವೆಲ್ಲಕ್ಕೂ ಕಾರಣ ಹೆಚ್ಚು ಸುಲಲಿತವಾಗಿ ಚಾಲನೆ ಮಾಡಬಹುದಾದ ಸ್ಕೂಟರ್‌ಗಳ ರಂಗ ಪ್ರವೇಶವೇ ಆಗಿದೆ. ಕೇವಲ ದೈನಂದಿನ ಸವಾರಿಗಷ್ಟೇ ಸೀಮಿತವಾಗದೇ ಮನೆಯ ದೈನಂದಿನ ಅಗತ್ಯಗಳಿಗೆ ಬೇಕಾದ ಸಾಮಾಗ್ರಿಗಳನ್ನು ಒತ್ತೊಯ್ಯಲು ಸಾಧ್ಯ ಎಂಬ ಧನಾತ್ಮಕ ಅಂಶವೂ ಇದರಲ್ಲಿದೆ. ಇನ್ನು ಗೇರ್ ಬದಲಾಯಿಸಬೇಕೆಂಬ ಕಿರಿಕಿರಿ ಕಾಡದು. ಅಲ್ಲದೆ ಸ್ಕೂಟರ್ ನಿರ್ವಹಣೆಯು ಪುರುಷ ಸೇರಿದಂತೆ ಸ್ತ್ರೀಯರಿಗೂ ಹೆಚ್ಚು ಯೋಗ್ಯವೆನಿಸಿದೆ. ಪ್ರಸ್ತುತ ಲೇಖನದಲ್ಲಿ 2016ನೇ ಸಾಲಿನಲ್ಲಿ ದೇಶದಲ್ಲಿ ಬಿಡುಗಡೆಯಾಗಲಿರುವ ಅಗ್ರ 10 ಸ್ಕೂಟರ್ ಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

01. ಮಹೀಂದ್ರ ಗಸ್ಟೊ 125

01. ಮಹೀಂದ್ರ ಗಸ್ಟೊ 125

ಗಸ್ಟೊ 110 ಸಿಸಿ ಆವೃತ್ತಿಯ ಯಶಸ್ಸಿನಿಂದ ಪುಳಕಿತಗೊಂಡಿರುವ ಭಾರತದ ಮುಂಚೂಣಿಯ ಸ್ಕೂಟರ್ ಸಂಸ್ಥೆ ಮಹೀಂದ್ರ ಟು ವೀಲರ್ಸ್ ಹೆಚ್ಚು ಶಕ್ತಿಶಾಲಿ 125 ಸಿಸಿ ಗಸ್ಟೊ ಮಾದರಿಯನ್ನು ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಅಲ್ಲದೆ ತನ್ನ ವಿಶಿಷ್ಟ ಎತ್ತರ ಹೊಂದಾಣಿಸಬಹುದಾದ ಸೀಟು ಎತ್ತರ ಸೇರಿದಂತೆ ರಿಮೋಟ್ ಪ್ಲಿಪ್ ಕೀ, ಗೈಡ್ ಮಿ ಹೋಮ್ ಲೈಟ್ಸ್ ಮತ್ತು ಈಸಿ ಟು ಲೋಕೆಟ್ ಬಟನ್ ವ್ಯವಸ್ಥೆಯನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.

02. ಹೋಂಡಾ ಪಿಸಿಎಕ್ಸ್ 150

02. ಹೋಂಡಾ ಪಿಸಿಎಕ್ಸ್ 150

ನಾವು ಈಗಾಗಲೇ ತಿಳಿಸಿರುವಂತೆಯೇ ಹೋಂಡಾ ತನ್ನ ಗರಡಿಯಲ್ಲಿ ಅತಿ ನೂತನ ಪಿಸಿಎಕ್ಸ್ 150 ಮಾದರಿಯನ್ನು ಸಿದ್ಧಗೊಳಿಸುತ್ತಿದೆ. ಇದು ಭಾರತದ ಸ್ಕೂಟರ್ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಲಿದ್ದು, ಇದೇ ಮೊದಲ ಬಾರಿಗೆ ಹೆಚ್ಚು ಶಕ್ತಿಶಾಲಿ 150 ಸಿಸಿ ಸ್ಕೂಟರ್ ಸಹ ರಂಗ ಪ್ರವೇಶ ಮಾಡಲಿದೆ. ಇದರ 153 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

03. ಹೀರೊ ಝಡ್‌ಐಆರ್

03. ಹೀರೊ ಝಡ್‌ಐಆರ್

ಹೋಂಡಾಗೆ ನೇರ ಪ್ರತಿಸ್ಪರ್ಧಿಯಾಗಿರುವ ಹೀರೊ ಮೊಟೊಕಾರ್ಪ್ ಸಹ 150 ಸಿಸಿ ವಿಭಾಗದಲ್ಲಿ ಚೊಚ್ಚಲ ಝಡ್‌ಐಆರ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಇದು ಇತ್ತ ಸಂಸ್ಥೆಗಳ ಆರೋಗ್ಯದಾಯಕ ಪೈಪೋಟಿಗೆ ವೇದಿಕೆವೊದಗಿಸಲಿದೆ. ಹೋಂಡಾ ಝಡ್‌ಐಆರ್ ಒಂದು ಸ್ಪೋರ್ಟಿ ಮ್ಯಾಕ್ಸಿ ಸ್ಕೂಟರ್ ಆಗಿದ್ದು, ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಇದರ ಶಕ್ತಿಶಾಲಿ 157 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಡ್ ಕೂಲ್ಡ್ ಎಂಜಿನ್ 12.7 ಎನ್‌ಎಂ ತಿರುಗುಬದಲ್ಲಿ 13.8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇನ್ನು ಯುರೋಪಿಯನ್ ಶೈಲಿಯ ಸ್ಟೆಪ್ ಸೀಟು, ಡ್ಯುಯಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆಗೆ ಡೇಟೈಮ್ ರನ್ನಂಗ್ ಲೈಟ್ಸ್, ಮುಂಭಾಗದಲ್ಲಿ ಪ್ರೊಟೆಕ್ಷನ್ ಸ್ಕ್ರೀನ್, ಟೈಲ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಲಿದೆ.

04. ಹೋಂಡಾ ಲೀಡ್ 125

04. ಹೋಂಡಾ ಲೀಡ್ 125

ಆಕ್ಟಿವಾದಂತಹ ಯಶಸ್ವಿ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿರುವ ಹೋಂಡಾ 125 ಸಿಸಿ ವಿಭಾಗದಲ್ಲಿ ಮಗದೊಂದು ಮನಮೋಹಕ ಸ್ಕೂಟರ್ ಪರಿಚಯಿಸಲಿದೆ. ಇದರ 125 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ 11.33 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹೋಂಡಾ ಲೀಡ್‌ನಲ್ಲಿ ಎಚ್‌ಇಟಿ ತಂತ್ರಗಾರಿಕೆಯನ್ನು ಆಳವಡಿಸಲಾಗುವುದಲ್ಲದೆ ಇದರಿಂದ ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

05. ಯಮಹಾ ನೋಝಾ

05. ಯಮಹಾ ನೋಝಾ

ಆಕರ್ಷಕ ಸ್ಕೂಟರ್‌ಗಳಿಗೆ ಹೆಸರು ಮಾಡಿರುವ ಯಮಹಾ ಸಂಸ್ಥೆಯು ನೋಝಾ ಬಿಡುಗಡೆಯೊಂದಿಗೆ 2016ನೇ ಸಾಲನ್ನು ಬರಮಾಡಿಕೊಳ್ಳಲಿದೆ. ಯಮಹಾ ನೋಝಾ 113 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 7.6 ಎನ್‌ಎಂ ತಿರುಗುಬಲದಲ್ಲಿ 7.24 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

06. ಪ್ಯೂಜೊ ಸ್ಯಾಟಲಿಸ್ 125

06. ಪ್ಯೂಜೊ ಸ್ಯಾಟಲಿಸ್ 125

ಪ್ಯೂಜೊ ಸ್ಯಾಟಲಿಸ್ ಭಾರತೀಯ ಮಾರುಕಟ್ಟೆಗೆ ಆಗಮನವಾಗಲಿದೆಯೇ ಎಂಬುದಕ್ಕೆ ಸಂಬಂಧಪಟ್ಟಂತೆ ಇನ್ನು ಖಚಿತತೆ ಲಭ್ಯವಾಗಿಲ್ಲ. ಹಾಗೊಂದು ವೇಳೆ ಇದು ಮಾರುಕಟ್ಟೆಗೆ ಎಂಟ್ರಿ ಕೊಟ್ಟಲ್ಲಿ ಎಬಿಎಸ್ ಗಳಂತಹ ಸುರಕ್ಷಾ ವೈಶಿಷ್ಟ್ಯಗಳನ್ನು ಹೊಂದಿರುವ ಪ್ಯೂಜೊ ಸ್ಯಾಟಲಿಸ್ ಸ್ಕೂಟರ್ ಮೋಡಿ ಮಾಡಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಅಲ್ಲದೆ ಇದರಲ್ಲಿರುವ ಎಲ್‌ಸಿಡಿ ಪರದೆಯ ಮೂಲಕ ಚಾಲನೆ ವೇಳೆಯಲ್ಲಿ ಎಲ್ಲ ಮಾಹಿತಿಗಳು ಲಭ್ಯವಾಗಲಿದೆ.

07. ಪ್ಯೂಜೊ ಜಾಂಗೊ

07. ಪ್ಯೂಜೊ ಜಾಂಗೊ

ಪ್ಯೂಜೊ ದೇಶದಲ್ಲಿ ಬಿಡುಗಡೆ ಮಾಡಲಿರುವ ಮಗದೊಂದು ಮಾದರಿ ಜಾಂಗೊ ಆಗಿರಲಿದ್ದು ಇದರಲ್ಲಿ ಗ್ರಾಹಕರಿಗೆ ಕೆಲವೊಂದು ಮಾರ್ಪಾಡುಗೊಳಿಸುವ ಅವಕಾಶವನ್ನು ನೀಡಲಾಗುವುದು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜಾಂಗೊ 24ಕ್ಕೂ ಹೆಚ್ಚು ಬಣ್ಣಗಳು ಹಾಗೂ ಮೂರು ಎಂಜಿನ್ ಆಯ್ಕೆಗಳಲ್ಲಿ (50 ಸಿಸಿ, 125 ಸಿಸಿ, 150 ಸಿಸಿ) ಲಭ್ಯವಾಗುತ್ತಿದೆ. ಆದರೆ ದೇಶಕ್ಕೆ 125 ಸಿಸಿ ಮಾದರಿಯು ಎಂಟ್ರಿ ಕೊಡುವ ಸಾಧ್ಯತೆಯಿದೆ.

08. ಪ್ಯೂಜೊ ಸ್ಪೀಡ್ ಲೈಟ್ 3

08. ಪ್ಯೂಜೊ ಸ್ಪೀಡ್ ಲೈಟ್ 3

ಹೆಸರಿಗೆ ತಕ್ಕಂತೆ ಪ್ಯೂಜೊ ಸ್ಪೀಡ್ ಲೈಟ್ 3 ಸ್ಕೂಟರ್ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಮಗೂಡಿಸಿಕೊಂಡು ಬರಲಿದೆ. ಇದು ಕೂಡಾ ಜಾಂಗೊದಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಪಡೆಯಲಿದೆ. ಒಟ್ಟಿನಲ್ಲಿ ಸ್ಕೂಟರ್ ಪ್ರೇಮಿಗಳಿಗೆ ಇಂದೊಂದು ವಿಶಿಷ್ಟ ಅನುಭವವಾಗಲಿದೆ.

09. ಪಿಯಾಜಿಯೊ ಲಿಬರ್ಟಿ 125

09. ಪಿಯಾಜಿಯೊ ಲಿಬರ್ಟಿ 125

ಐಕಾನಿಕ್ ವೆಸ್ಪಾ ಮುಖಾಂತರ ಈಗಾಗಲೇ ಭಾರತ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯವನ್ನು ತೋರ್ಪಡಿಸಿರುವ ಪಿಯೊಜಿಯೊ ಸಂಸ್ಥೆಯು ತನ್ನ ಅತಿ ಯಶಸ್ವಿ ಲಿಬರ್ಟಿ ಸ್ಕೂಟರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದರ 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 10.4 ಎನ್‌ಎಂ ತಿರುಗುಬಲದಲ್ಲಿ 10.2 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

10. ಪಿಯಾಜಿಯೊ ಫ್ಲೈ 125

10. ಪಿಯಾಜಿಯೊ ಫ್ಲೈ 125

ಪಿಯಾಜಿಯೊ ಫ್ಲೈ 125 ಸ್ಕೂಟರ್ ದೇಶಕ್ಕೆ ಎಂಟ್ರಿ ಕೊಡಲಿರುವ ಎರನಡೇ ಪಿಯಾಜಿಯೊ ಮಾದರಿಯಾಗಿರಲಿದೆ. ಇದರ 124 ಸಿಸಿ ಎಂಜಿನ್ 10.7 ಎನ್‌ಎಂ ತಿರುಗುಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಹಿಂದಿನ ಚಕ್ರಗಳಿಗೆ ಸಿವಿಟಿ ಗೇರ್ ಬಾಕ್ಸ್ ಮುಖಾಂತರ ಶಕ್ತಿ ವರ್ಗಾವಣೆಯಾಗಲಿದೆ.


More from DriveSpark

Article Published On: Tuesday, January 5, 2016, 10:09 [IST]
English summary
Top 10 Upcoming Scooters in 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+