1 ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ಟಾಪ್ 5 ನಿರ್ವಹಣಾ ಬೈಕ್ಸ್

ಒಂದು ಲಕ್ಷ ರುಪಾಯಿ ಬಜೆಟ್ ನೊಳಗೆ ಲಭ್ಯವಿರುವ ದೇಶದ ಅಗ್ರ ಐದು ನಿರ್ವಹಣಾ ಬೈಕ್ ಗಳ ಬಗ್ಗೆ ಚರ್ಚಿಸಲಿದ್ದೇವೆ.

By Nagaraja

ಭಾರತದಲ್ಲಿ ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್ ವಿಭಾಗವು ಅತಿ ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿದೆ. ಭಾರತೀಯ ಗ್ರಾಹಕರು ಪ್ರಯಾಣಿಕ ಬೈಕ್ ಗಿಂತಲೂ ನಿರ್ವಹಣಾ ಬೈಕ್ ಗಳನ್ನು ಖರೀದಿಸಲು ಬಯಸುತ್ತಾರೆ. ನೀವು ಕೂಡಾ ನಿಮ್ಮ ಕೈಗೆಟುಕುವ ಬೆಲೆಗಳಲ್ಲಿ ನಿರ್ವಹಣಾ ಬೈಕ್ ಖರೀದಿಸುವ ಇರಾದೆಯಲ್ಲಿದ್ದೀರಾ? ಪ್ರಸ್ತುತ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಆಧಾರದಲ್ಲಿ ಒಂದು ಲಕ್ಷ ರುಪಾಯಿಗಳ ಬಜೆಟ್ ನಲ್ಲಿ ಭಾರತದಲ್ಲಿ ಲಭ್ಯವಿರುವ ಐದು ನಿರ್ವಹಣಾ ಬೈಕ್ ಗಳ ಬಗ್ಗೆ ಚರ್ಚಿಸಲಿದ್ದೇವೆ.

ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ

ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ

2006ನೇ ಇಸವಿಯಲ್ಲಿ ಮೊದಲು ಬಿಡುಗಡೆಗೊಂಡು ಟಿವಿಎಸ್ ಆರ್ ಟಿಆರ್ ತದಾ ಬಳಿಕ ತಿರುಗಿ ನೋಡಿಯೇ ಇಲ್ಲ. ಇಲ್ಲಿ ಆರ್ ಟಿಆರ್ ಎಂಬುದು ರೇಸಿಂಗ್ ಥ್ರಾಟಲ್ ರೆಸ್ಪಾನ್ಸ್ ಎಂಬ ಅರ್ಥವನ್ನು ನೀಡುತ್ತದೆ. ಅಲ್ಲದೆ ಇದುವರೆಗೆ ಎರಡು ದಶಲಕ್ಷಕ್ಕೂ ಹೆಚ್ಚು ಅಪಾಚಿ ಬೈಕ್ ಗಳನ್ನು ಮಾರಾಟ ಮಾಡಿದೆ.

1 ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ಟಾಪ್ 5 ನಿರ್ವಹಣಾ ಬೈಕ್ಸ್

ಕೆಲವು ಸಮಯಗಳ ಹಿಂದೆಯಷ್ಟೇ ಆಧುನಿಕತೆಗೆ ತಕ್ಕಂತೆ ಟಿವಿಆಸ್ ಆರ್ ಟಿಆರ್-200 4ವಿ ಬೈಕನ್ನು ಬಿಡುಗಡೆಗೊಳಿಸಲಾಗಿತ್ತು. ಇದು 197.75 ಸಿಸಿ ಸಿಂಗಲ್ ಸಿಲಿಂಡರ್ ಒಯಿಲ್ ಕೂಲ್ಡ್ ಎಂಜಿನ್ ಪಡೆದಿದ್ದು, 20.71 ಅಶ್ವಶಕ್ತಿಯನ್ನು ನೀಡುತ್ತದೆ. ಅಲ್ಲದೆ 3.9 ಸೆಕೆಂಡುಗಳಲ್ಲೇ ಗಂಟೆಗೆ 0-60 ಕೀ.ಮೀ. ವೇಗ ವರ್ಧಿಸುವಷ್ಟು ಸಮರ್ಥವಾಗಿದೆ.

ಬೆಲೆ ಮಾಹಿತಿ: 89,215 ರು.ಗಳಿಂದ 94,215 ರು. (ಎಕ್ಸ್ ಶೋ ರೂಂ ದೆಹಲಿ)

ಬಜಾಜ್ ಪಲ್ಸರ್ 220

ಬಜಾಜ್ ಪಲ್ಸರ್ 220

2001ನೇ ಇಸವಿಯಲ್ಲಿ ಭಾರತಕ್ಕೆ ಕಾಲಿಟ್ಟ ಪಲ್ಸರ್ ಶ್ರೇಣಿಯ ಎಂಟ್ರಿ ಲೆವೆಲ್ ಬೈಕ್ ಗಳು ಕೆಲವೇ ವರ್ಷಗಳಲ್ಲಿ ದೇಶದ ನಂ.1 ಕ್ರೀಡಾ ಬೈಕಾಗಿ ಹೊರಹೊಮ್ಮಿತ್ತು. ಇದು ದೇಶದ ನಿರ್ವಹಣಾ ವಿಭಾಗದ ಬೈಕ್ ಗಳಿಗೆ ಹೊಸ ಆಯಾಮವನ್ನು ತುಂಬಿತ್ತು.

1 ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ಟಾಪ್ 5 ನಿರ್ವಹಣಾ ಬೈಕ್ಸ್

ವೇಗದಲ್ಲಿ ಯಾವುದೇ ರಾಜಿಗೂ ತಯಾರಾಗದೇ ಬೈಕ್ ಪ್ರೇಮಿಗಳನ್ನು ಮನ ಮೆಚ್ಚುವಂತಹ ವಿನ್ಯಾಸವು ಪಲ್ಸರ್ ಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿತ್ತು. ಈ ಪೈಕಿ ಬಜಾಜ್ 220 ಸಿಸಿ ಸಿಂಗಲ್ ಸಿಲಿಂಡರ್ ಒಯಿಲ್ ಕೂಲ್ಡ್ ಎಂಜಿನ್ 20.71 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಬೆಲೆ ಮಾಹಿತಿ: 91,201 ರು. (ಎಕ್ಸ್ ಶೋ ರೂಂ ದೆಹಲಿ)

ಹೋಂಡಾ ಸಿಬಿ ಹಾರ್ನೆಟ್ 160ಆರ್

ಹೋಂಡಾ ಸಿಬಿ ಹಾರ್ನೆಟ್ 160ಆರ್

ಹೋಂಡಾ ಬಿಡುಗಡೆ ಮಾಡಿರುವ ತಾಜಾ ನಿರ್ವಹಣಾ ಬೈಕ್ ಗಳಲ್ಲಿ ಸಿಬಿ ಹಾರ್ನೆಟ್ 160ಆರ್ ಒಂದಾಗಿದೆ. 2015ನೇ ಸಾಲಿನಲ್ಲಿ ಭಾರತಕ್ಕೆ ಪ್ರವೇಶಿಸಿರುವ ಹೋಂಡಾ ಸಿಬಿ ಹಾರ್ನೆಟ್ ತನ್ನ ಆಕ್ರಮಣಕಾರಿ ವಿನ್ಯಾಸದಿಂದಲೇ ಗಮನ ಸೆಳೆದಿದೆ.

1 ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ಟಾಪ್ 5 ನಿರ್ವಹಣಾ ಬೈಕ್ಸ್

162.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೋಂಡಾ ಸಿಬಿ ಹಾರ್ನೆಟ್ 15.66 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಂತೆಯೇ ಕಾಂಬಿ ಬ್ರೇಕ್ ಜೊತೆಗೆ ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯಗಳನ್ನು ಒಳಗೊಂಡಿದೆ.

ಬೆಲೆ ಮಾಹಿತಿ: 80,603 ರು.ಗಳಿಂದ 86,084 ರು. (ಎಕ್ಸ್ ಶೋ ರೂಂ ದೆಹಲಿ)

ಸುಜುಕಿ ಜಿಕ್ಸರ್ ಎಸ್ ಎಫ್

ಸುಜುಕಿ ಜಿಕ್ಸರ್ ಎಸ್ ಎಫ್

ಹಾಗೊಂದು ವೇಳೆ ನೀವು ನೆಕ್ಡ್ ಬೈಕ್ ಬದಲು ಫೇರ್ಡ್ ಬೈಕ್ ಹುಡುಕಾಟದಲ್ಲಿದ್ದೀರಾ? ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ಸಂಸ್ಥೆ ಸುಜುಕಿ ನಿರ್ಮಿತ ಜಿಕ್ಸರ್ ಎಸ್ ಎಫ್ ಅತ್ಯುತ್ತಮ ಆಯ್ಕೆಯಾಗಿರಲಿದೆ. ರೇಸಿಂಗ್ ಬೈಕ್ ನಿಂದ ಸ್ಪೂರ್ತಿ ಪಡೆದು ಇದನ್ನು ಅಭಿವೃದ್ಧಿಪಡಿಸಲಾಗಿದೆ.

1 ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ಟಾಪ್ 5 ನಿರ್ವಹಣಾ ಬೈಕ್ಸ್

154.9 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸುಜುಕಿ ಜಿಕ್ಸರ್ ಎಸ್ ಎಫ್ 14.6 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಬೆಲೆ ಮಾಹಿತಿ: 94,774 ರು.ಗಳಿಂದ 98,703 ರು. (ಎಕ್ಸ್ ಶೋ ರೂಂ ದೆಹಲಿ)

ಬಜಾಜ್ ಅವೆಂಜರ್ 220 ಕ್ರೂಸ್

ಬಜಾಜ್ ಅವೆಂಜರ್ 220 ಕ್ರೂಸ್

ಭಾರತೀಯ ವಾಹನ ಪ್ರೇಮಿಗಳಿಗೆ ಕೈಗೆಟುಕುವ ಬೆಲೆಗಳಲ್ಲಿ ಕ್ರೂಸರ್ ಬೈಕ್ ಒದಗಿಸಿರುವ ಬಜಾಜ್, 2001ರಿಂದಲೇ ಅವೆಂಜರ್ ಶ್ರೇಣಿಯ ಬೈಕ್ ಗಳನ್ನು ನೀಡುತ್ತಿದೆ. ಈ ಸ್ಟೈಲಿಷ್ ಬೈಕ್ ಈಗಲೂ ಜನಮೆಚ್ಚುಗೆಯನ್ನು ಕಾಪಾಡಿಕೊಂಡಿದೆ.

1 ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ಟಾಪ್ 5 ನಿರ್ವಹಣಾ ಬೈಕ್ಸ್

ಕಡಿಮೆ ಚಾಲನಾ ಎತ್ತರ, ಅನುಕೂಲತೆ, ಸಾಂಪ್ರದಾಯಿಕ ಕ್ರೂಸಿಂಗ್ ಶೈಲಿ ಇವೆಲ್ಲವೂ ಬಜಾಜ್ ಅವೆಂಜರ್ ಗೆ ವರದಾನವಾಗಿದೆ. ಇದರಲ್ಲಿರುವ 220 ಸಿಸಿ ಸಿಂಗಲ್ ಸಿಲಿಂಡರ್ ಒಯಿಲ್ ಕೂಲ್ಡ್ ಎಂಜಿನ್ 18.76 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಬೆಲೆ ಮಾಹಿತಿ: 87,331 ರು. (ಎಕ್ಸ್ ಶೋ ರೂಂ ದೆಹಲಿ)

1 ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ಟಾಪ್ 5 ನಿರ್ವಹಣಾ ಬೈಕ್ಸ್

ಪ್ರಸ್ತುತ ಪಟ್ಟಿಯಲ್ಲೀಗ ಒಂದು ಲಕ್ಷ ಬೆಲೆ ಪರಿಧಿಯಲ್ಲಿ ಲಭ್ಯವಾಗುವ ಒಂದೆರಡು ಬೈಕ್ ಗಳನ್ನು ಉಲ್ಲೇಖಿಸಲು ಬಯಸುತ್ತೇವೆ. ಅವುಗಳೇ ಯಮಹಾ ಎಫ್ ಝಡ್ ಮತ್ತು ಬಜಾಜ್ ಪಲ್ಸರ್ 180. ಈ ಪೈಕಿ 153 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಯಮಹಾ ಎಫ್ ಝಡ್ 13.80 ಅಶ್ವಶಕ್ತಿಯನ್ನು ನೀಡುತ್ತದೆ.

ಬೆಲೆ ಮಾಹಿತಿ: 74,491 ರು. (ಎಕ್ಸ್ ಶೋ ರೂಂ ದೆಹಲಿ)

1 ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ಟಾಪ್ 5 ನಿರ್ವಹಣಾ ಬೈಕ್ಸ್

ಅತ್ತ ಬಜಾಜ್ ಪಲ್ಸರ್ 180 ಮಗದೊಂದು ಆಕರ್ಷಕ ಎಂಟ್ರಿ ಲೆವೆಲ್ ಕ್ರೀಡಾ ಬೈಕಾಗಿದೆ. ಇದರಲ್ಲಿರುವ 178.6 ಸಿಸಿ ಸಿಂಗಲ್ ಸಿಲಂಡರ್ ಏರ್ ಕೂಲ್ಡ್ ಎಂಜಿನ್ 16.78 ಅಶ್ವಶಕ್ತಿಯನ್ನು ನೀಡುತ್ತದೆ.

ಬೆಲೆ ಮಾಹಿತಿ: 79,545 ರು. (ಎಕ್ಸ್ ಶೋ ರೂಂ ದೆಹಲಿ)

1 ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ಟಾಪ್ 5 ನಿರ್ವಹಣಾ ಬೈಕ್ಸ್

ಪ್ರಸ್ತುತ ಪಟ್ಟಿಯಲ್ಲೀಗ ನಿಮ್ಮ ನೆಚ್ಚಿನ ಬೈಕ್ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳಿರಿ.

More from DriveSpark

Article Published On: Tuesday, December 6, 2016, 11:21 [IST]
English summary
Top 5 Best Performance Bikes Under 1 Lakh — Mix Of Performance And Value
Read more on ಬೈಕ್ bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+