ದೇಶದ 5 ಜನಪ್ರಿಯ ಪಾಕೆಟ್ ಸ್ನೇಹಿ ಬೈಕ್ ಗಳು

By Nagaraja

ಕಾರುಗಳನ್ನು ಹೊರತುಪಡಿಸಿದರೆ ದ್ವಿಚಕ್ರ ವಾಹನ ವಿಭಾಗವು ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಗೆ ಗ್ರಾಸವಾಗಿದೆ. ಅದರಲ್ಲೂ ಪ್ರಯಾಣಿಕ ಬೈಕ್ ವಿಭಾಗವು ಬಹುಪಾಲು ಮಾರಾಟವನ್ನು ಕಸಿದುಕೊಂಡಿದೆ. ಇದರಿಂದಾಗಿ ಜನಪ್ರಿಯ ಸಂಸ್ಥೆಗಳು ನಿರಂತರ ಅಂತರಾಳದಲ್ಲಿ ಬಜೆಟ್ ಬೈಕ್ ಗಳನ್ನು ಬಿಡುಗಡೆ ಮಾಡುವುದರಲ್ಲಿ ತಲ್ಲೀನವಾಗಿದೆ.

ಕಡಿಮೆ ಬೆಲೆ, ಹೆಚ್ಚು ಮೈಲೇಜ್, ಗಮನಾರ್ಹ ನಿರ್ವಹಣೆ ಹಾಗೂ ಅಗತ್ಯಕ್ಕೆ ಬೇಕಾದಷ್ಟು ಶೈಲಿ ಪಾಕೆಟ್ ಸ್ನೇಹಿ ಬೈಕ್ ಗಳ ವಿಶೇಷತೆಯಾಗಿದೆ. ಪ್ರಸ್ತುತ ಲೇಖನದಲ್ಲಿ ಸಮಕಾಲೀನ ಮಾರುಕಟ್ಟೆಯಲ್ಲಿ ದೇಶದಲ್ಲಿ ಲಭ್ಯವಿರುವ ಐದು ಜನಪ್ರಿಯ ಬಜೆಟ್ ಬೈಕ್ ಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಿದ್ದೇವೆ.

05. ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್

05. ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್

ಸ್ಪ್ಲೆಂಡರ್ ಶ್ರೇಣಿಯ ಅತಿ ನೂತನ ಐಸ್ಮಾರ್ಟ್ 110 ಸಿಸಿ ಬೈಕ್ ಈಗಷ್ಟೇ ಮಾರುಕಟ್ಟೆ ಪ್ರವೇಶ ಪಡೆದಿದೆ. ಇದರಲ್ಲಿರುವ ಅತಿ ನೂತನ ಐ3ಎಸ್ ತಂತ್ರಗಾರಿಕೆಯಿಂದಾಗಿ ಹೆಚ್ಚು ಉಂಧನ ಉಳಿತಾಯವಾಗಲಿದ್ದು, ಜಾಸ್ತಿ ಮೈಲೇಜ್ ಸಿಗಲಿದೆ.

ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್

ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್

ನೂತನ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 100 ಪ್ರಯಾಣಿಕ ಬೈಕ್‌ನ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 53,800 ರು.ಗಳಾಗಿರಲಿದೆ. ಇದು ಈ ವಿಭಾಗದಲ್ಲಿ ಭಾರತ್ ಸ್ಟೇಜ್ IV ಎಮಿಷನ್ ಗುಣಮಟ್ಟವನ್ನು ಕಾಪಾಡಿಕೊಂಡಿರುವ ಮೊದಲ ಬೈಕೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದರ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್ 9 ಎನ್ ಎಂ ತಿರುಗುಬಲದಲ್ಲಿ (5500 ಆರ್‌ಪಿಎಂ) 9.4 ಅಶ್ವಶಕ್ತಿಯನ್ನು (7500 ಆರ್‌ಪಿಎಂ) ಉತ್ಪಾದಿಸಲಿದೆ.

04. ಟಿವಿಎಸ್ ಸ್ಟಾರ್ ಸಿಟಿ ಪ್ಲಸ್

04. ಟಿವಿಎಸ್ ಸ್ಟಾರ್ ಸಿಟಿ ಪ್ಲಸ್

ಪ್ರಯಾಣಿಕ ಬೈಕ್ ವಿಭಾಗದಲ್ಲಿ ಸ್ಟಾರ್ ಸಿಟಿ ಪ್ಲಸ್ ಎಂಬ ಅತ್ಯುತ್ತಮ ಉತ್ಪನ್ನವನ್ನು ಬಿಡುಗಡೆ ಮಾಡಿರುವ ಟಿವಿಎಸ್ ಪ್ರಯತ್ನವನ್ನು ಮೆಚ್ಚಲೇಬೇಕು. ಹೀರೊ, ಹೋಂಡಾದಂತಹ ಅಗ್ರ ದ್ವಿಚಕ್ರ ಸಂಸ್ಥೆಗಳ ನಡುವೆಯೂ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಗಮನಾರ್ಹ ಮಾರಾಟವನ್ನು ಕಾಪಾಡಿಕೊಂಡಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್

109.7 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿರುವ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, 8.7 ಎನ್ ತಿರುಗುಬಲದಲ್ಲಿ 8.28 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 44,000 ರು.ಗಳಾಗಿದೆ.

03. ಬಜಾಜ್ ಪ್ಲಾಟಿನಾ 100 ಇಎಸ್

03. ಬಜಾಜ್ ಪ್ಲಾಟಿನಾ 100 ಇಎಸ್

ಮೈಲೇಜ್ ಚಾಂಪಿಯನ್ ಎಂಬ ಪಟ್ಟ ಕಟ್ಟಿಕೊಂಡಿರುವ ಬಜಾಜ್ ಪ್ಲಾಟಿನಾ 100ಇಎಸ್, ಅತಿ ಸರಳ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿದೆ. ಉದ್ದವಾದ ಸೀಟು, ಅಲಾಯ್ ಚಕ್ರಗಳು ಮತ್ತು ಗ್ರಾಫಿಕ್ಸ್ ಗಳೊಂದಿಗೆ ಎಂಜಿನ್ ಎಲೆಕ್ಟ್ರಿಕ್ ಸ್ಟ್ಯಾರ್ಟ್ ವ್ಯವಸ್ಥೆಯೂ ಇರುತ್ತದೆ.

ಬಜಾಜ್ ಪ್ಲಾಟಿನಾ 100ಇಎಸ್

ಬಜಾಜ್ ಪ್ಲಾಟಿನಾ 100ಇಎಸ್

ಬಜಾಜ್ ಪ್ಲಾಟಿನಾ 100ಇಎಸ್, 102 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 8.6 ಎನ್ ಎಂ ತಿರುಗುಬಲದಲ್ಲಿ 8.08 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ನಾಲ್ಕು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ದೆಹಲಿ ಎಕ್ಸ್ ಶೋ ರೂಂ ಬೆಲೆ 43,241 ರು.

02. ಹೋಂಡಾ ನವಿ

02. ಹೋಂಡಾ ನವಿ

ನೋಡಲು ಥೇಟ್ ಬೈಕ್ ತರಹನೇ ವಿನ್ಯಾಸ ಅಂತೆಯೇ ಸ್ಕೂಟರ್ ನಂತೆ ಸುಸಲಿತವಾಗಿ ಚಾಲನೆ ಮಾಡಬಲ್ಲ ಹೋಂಡಾ ನವಿ, ಮಾರುಕಟ್ಟೆಗೆ ಪ್ರವೇಶ ಪಡೆದಿರುವ ಕ್ರಾಂತಿಕಾರಿ ದ್ವಿಚಕ್ರ ವಾಹನ ಎಂದೇ ವರ್ಣಿಸಬಹುದಾಗಿದೆ. ಸದಾ ಟ್ರಾಫಿಕ್ ದಟ್ಟಣೆಯಿಂದ ತುಂಬಿ ತುಳುಕುತ್ತಿರುವ ನಗರ ಪ್ರದೇಶದಲ್ಲಿ ಹೋಂಡಾ ನವಿ ಗೇರ್ ಲೆಸ್ ದ್ವಿಚಕ್ರ ವಾಹನವು ದಣಿವು ರಹಿತ ಪ್ರಯಾಣವನ್ನು ಖಾತ್ರಿಪಡಿಸಲಿದೆ.

 ಹೋಂಡಾ ನವಿ

ಹೋಂಡಾ ನವಿ

ಬಿಡುಗಡೆಯ ಬೆನ್ನಲ್ಲೇ ಹೆಚ್ಚಿನ ಬೇಡಿಕೆ ಕಾಪಾಡಿಕೊಂಡಿರುವ ಹೋಂಡಾ ನವಿ, 109.19 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 8.96 ಎನ್ ಎಂ ತಿರುಗುಬಲದಲ್ಲಿ 7.83 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ ಕೇವಲ 39,500 ರು.ಗಳಾಗಿವೆ.

01. ಬಜಾಜ್ ಸಿಟಿ100ಬಿ

01. ಬಜಾಜ್ ಸಿಟಿ100ಬಿ

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಅಗ್ಗದ ದ್ವಿಚಕ್ರ ವಾಹನ ಬಜಾಜ್ ಸಿಟಿ100ಬಿ ಆಗಿದೆ. ಜನ ಸಾಮಾನ್ಯರ ಅಗತ್ಯಗಳಿಗೆ ತಕ್ಕಂತೆ ದೆಹಲಿ ಎಕ್ಸ್ ಶೋ ರೂಂ 31,485 ರು.ಗಳಲ್ಲಿ ಮಾರುಕಟ್ಟೆಗೆ ಬಿಡಲಾಗಿದೆ.

ಬಜಾಜ್ ಸಿಟಿ100ಬಿ

ಬಜಾಜ್ ಸಿಟಿ100ಬಿ

99.27 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಸಿಟಿ100ಬಿ, 8.05 ಎನ್ ಎಂ ತಿರುಗುಬಲದಲ್ಲಿ 8.08 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 4 ಸ್ಪೀಡ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸ್ಪಡುತ್ತದೆ.

ದೇಶದ 5 ಜನಪ್ರಿಯ ಪಾಕೆಟ್ ಸ್ನೇಹಿ ಬೈಕ್ ಗಳು

ಈಗ ನಿಮ್ಮ ನೆಚ್ಚಿನ ಬಜೆಟ್ ಬೈಕ್ ಗಳ ಬಗ್ಗೆ ಅನಿಸಿಕೆಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.

More from DriveSpark

Article Published On: Wednesday, July 20, 2016, 15:57 [IST]
English summary
Top 5 Budget Friendly Bikes In India 2016
Read more on ಬೈಕ್ bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+