ಸ್ಪ್ಲೆಂಡರ್ ಟಾಪ್; ಅಗ್ರ 10 ಬೈಕ್ ಗಳ ಪಟ್ಟಿಗೆ ಬಜಾಜ್ ವಿ ಎಂಟ್ರಿ

By Nagaraja

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಐತಿಹಾಸಿಕ ವಿಕ್ರಾಂತ್ ಯುದ್ಧ ಹಡಗಿನ ಲೋಹದಿಂದ ನಿರ್ಮಿಸಲಾಗಿರುವ ಬಜಾಜ್ ವಿ, 2016 ಎಪ್ರಿಲ್ ತಿಂಗಳ ಅಗ್ರ 10 ಮೋಟಾರ್ ಸೈಕಲ್ ಗಳ ವಿಭಾಗಗಳ ಪಟ್ಟಿಗೆ ಎಂಟ್ರಿ ಕೊಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

ದೇಶದ ದ್ವಿಚಕ್ರ ಮಾರುಕಟ್ಟೆ ವಾಹನ ಮಾರುಕಟ್ಟೆಯಲ್ಲಿ ಬೈಕ್ ಗಳಿಗೆ ದೊರಕುತ್ತಿರುವ ಗರಿಷ್ಠ ಬೇಡಿಕೆಯನ್ನು ಇದು ತೋರಿಸುತ್ತದೆ. ಹಾಗಿದ್ದರೆ 2016 ಎಪ್ರಿಲ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಕಾಪಾಡಿಕೊಂಡಿರುವ ಅಗ್ರ 10 ಬೈಕ್ ಗಳು ಯಾವುವು ಎಂಬುದು ನಿಮಗೆ ಗೊತ್ತೇ?

10. ಬಜಾಜ್ ವಿ

10. ಬಜಾಜ್ ವಿ

ತನ್ನ ಮೊದಲ ತಿಂಗಳ ಮಾರಾಟದಲ್ಲೇ 24,057 ಯುನಿಟ್ ಗಳ ಮಾರಾಟ ಕಾಪಾಡಿಕೊಂಡಿರುವ ಬಜಾಜ್ ವಿ15 ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಿವುಡ್ ನಟ ಅಮೀರ್ ಖಾನ್ ಸಹ ಬಜಾಜ್ ವಿ15 ಬೈಕ್ ನ ಹೆಮ್ಮೆಯ ಮಾಲಿಕ ಎಂಬುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

09. ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350

09. ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350

ಒಂಬತ್ತನೇ ಸ್ಥಾನದಲ್ಲಿರುವ ರಾಯಲ್ ಎನ್ ಫೀಲ್ಡ್ ಬುಲೆಟ್ 28,567 ಯುನಿಟ್ ಗಳ ಮಾರಾಟವನ್ನು ಕಾಪಾಡಿಕೊಂಡಿದೆ. ಕ್ಲಾಸಿಕ್ ವಿನ್ಯಾಸ ಹಾಗೂ ವಿಶ್ವಸಾರ್ಹತೆಯು ಬುಲೆಟ್ 350 ಹಾಟ್ ಕೇಕ್ ನಂತೆ ಮಾರಾಟವಾಗಲು ನೆರವಾಗಿದೆ.

08. ಹೋಂಡಾ ಡ್ರೀಮ್

08. ಹೋಂಡಾ ಡ್ರೀಮ್

ಎಂಟನೇ ಸ್ಥಾನದಲ್ಲಿ ಹೀರೊ ಡ್ರೀಮ್ ಕಾಣಿಸಿಕೊಂಡಿದ್ದು, 2016 ಎಪ್ರಿಲ್ ತಿಂಗಳಲ್ಲಿ 32,503 ಯುನಿಟ್ ಗಳ ಮಾರಾಟ ಕಾಪಾಡಿಕೊಳ್ಳುವ ಮೂಲಕ ಸ್ಥಿರತೆಯನ್ನು ಕಾಪಾಡಿಕೊಂಡಿದೆ.

07. ಬಜಾಜ್ ಪಲ್ಸರ್

07. ಬಜಾಜ್ ಪಲ್ಸರ್

15 ವರ್ಷಗಳೇ ಕಳೆದರೂ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿರುವ ಬಜಾಜ್ ಪಲ್ಸರ್ 2016 ಎಪ್ರಿಲ್ ತಿಂಗಳಿನಲ್ಲೂ 50,419 ಯುನಿಟ್ ಗಳ ಮಾರಾಟ ಸಾಧಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

06. ಹೋಂಡಾ ಸಿಬಿ ಶೈನ್

06. ಹೋಂಡಾ ಸಿಬಿ ಶೈನ್

ಆರನೇ ಸ್ಥಾನದಲ್ಲಿರುವ ದೇಶದ ಅಗ್ರ 125 ಸಿಸಿ ಬೈಕ್ ಆಗಿರುವ ಹೋಂಡಾ ಸಿಬಿ ಶೈನ್, 52,751 ಯುನಿಟ್ ಗಳ ಮಾರಾಟ ದಾಖಲಿಸಿದೆ. ಅತ್ಯುತ್ತಮ ಕಾರ್ಯ ನಿರ್ವಾಹಕ ಬೈಕ್ ಎಂಬ ಪಟ್ಟವು ಶೈನಿ ಮಿಂಚಿನ ಓಟಕ್ಕೆ ಕಾರಣವಾಗಿದೆ.

07. ಬಜಾಜ್ ಸಿಟಿ

07. ಬಜಾಜ್ ಸಿಟಿ

ಕಡಿಮೆ ಬೆಲೆಯಲ್ಲಿ ಕೈಗೆಟುಕುವ ಬೈಕ್ ಬಜಾಜ್ ಸಿಟಿ 100 ಗರಿಷ್ಠ ಸಂಖ್ಯೆಯ ಮಾರಾಟಕ್ಕೆ ನೆರವಾಗಿದೆ. ಪ್ರಸ್ತುತ ಬೈಕ್ ಅಗ್ರ 5ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 66,409 ಯುನಿಟ್ ಗಳ ಮಾರಾಟ ಸಾಧಿಸಿದೆ.

04. ಹೀರೊ ಗ್ಲಾಮರ್

04. ಹೀರೊ ಗ್ಲಾಮರ್

ಸ್ಥಿರತೆಯ ಮಾರಾಟ ಕಾಪಾಡಿಕೊಳ್ಳುವಲ್ಲಿ ಹೀರೊ ಗ್ಲಾಮರ್ ಸ್ಟೈಲ್ ಜೊತೆಗೆ ಪರಿಣಾಮಕಾರಿ ಮೈಲೇಜ್ ಕಾಪಾಡಿಕೊಂಡಿದೆ. ಇದೇ ಕಾರಣಕ್ಕಾಗಿ 66,756 ಯುನಿಟ್ ಗಳ ಮಾರಾಟದೊಂದಿಗೆ ನಾಲ್ಕನೇ ಸ್ಥಾನಕ್ಕೇರಿದೆ.

03. ಹೀರೊ ಪ್ಯಾಶನ್

03. ಹೀರೊ ಪ್ಯಾಶನ್

ಮೂರನೇ ಸ್ಥಾನದಲ್ಲಿ ಮಗದೊಂದು ಹೀರೊ ಜನಪ್ರಿಯ ಮಾದರಿ ಕಾಣಿಸಿಕೊಂಡಿದೆ. 2016 ಎಪ್ರಿಲ್ ತಿಂಗಳಲ್ಲಿ ಹೀರೊ ಪ್ಯಾಶನ್ 98,976 ಯುನಿಟ್ ಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ಯಾಶನ್ 1,19,491 ಯುನಿಟ್ ಗಳ ಮಾರಾಟ ಸಾಧಿಸಿತ್ತು.

02. ಹೀರೊ ಎಚ್‌ಎಫ್ ಡಿಲಕ್ಸ್

02. ಹೀರೊ ಎಚ್‌ಎಫ್ ಡಿಲಕ್ಸ್

ಮಾಡೆಲ್ ಹಳೆಯದಾದರೂ ಏನು ಬ್ರ್ಯಾಂಡ್ ಮೌಲ್ಯ ಮುಖ್ಯ ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ. ಕಳೆದ ವರ್ಷವಿದ್ದ 88,635 ಯುನಿಟ್ ಗಳಿಂದ ಭರ್ಜರಿ ನೆಗೆತ ಕಂಡಿರುವ ಹೀರೊ ಎಚ್‌ಎಫ್ ಡಿಲಕ್ಸ್ 2016 ಎಪ್ರಿಲ್ ತಿಂಗಳಲ್ಲಿ 1,16,567 ಯುನಿಟ್ ಗಳ ಮಾರಾಟ ಸಾಧಿಸಿದೆ.

01. ಹೀರೊ ಸ್ಪ್ಲೆಂಡರ್

01. ಹೀರೊ ಸ್ಪ್ಲೆಂಡರ್

ಮಗದೊಮ್ಮ ತನಗೆ ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಹೀರೊ ಸ್ಪ್ಲೆಂಡರ್ ಸಾಬೀತುಪಡಿದಿಸಿದೆ. ಮಾರಾಟದಲ್ಲಿ ಆಕ್ಟಿವಾದಂತಹ ಸ್ಕೂಟರ್ ಗಳಿಂದ ಮಾತ್ರ ನಿಕಟ ಪೈಪೋಟಿ ಎದುರಿಸುತ್ತಿರುವ ಹೀರೊ ಸ್ಪ್ಲೆಂಡರ್ ಬರೋಬ್ಬರಿ 2,23,248 ಯುನಿಟ್ ಗಳ ಮಾರಾಟದೊಂದಿಗೆ ಅಗ್ರಸ್ಥಾನಕ್ಕೇರಿದೆ.

More from DriveSpark

Article Published On: Saturday, May 21, 2016, 15:51 [IST]
English summary
Top 10 Selling Motorcycles In April 2016 – The Bajaj V15 Makes An Entry
Read more on ಬೈಕ್ motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+