ನಿಕಟ ಭವಿಷ್ಯದಲ್ಲೇ ಯುಎಂ 250 ಸಿಸಿ ಅಡ್ವೆಂಚರ್ ಬೈಕ್ ಭಾರತಕ್ಕೆ

By Nagaraja

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ಯುಎಂ ಮೋಟಾರ್ ಸೈಕಲ್ಸ್, ಆಗಲೇ ಎರಡು ಕ್ರೂಸರ್ ಬೈಕ್ ಗಳನ್ನು ಪರಿಚಯಿಸಿದೆ. ಅಮೆರಿಕ ಮೂಲದ ಈ ಪ್ರತಿಷ್ಠಿತ ಸಂಸ್ಥೆಯೀಗ ನಿಕಟ ಭವಿಷ್ಯದಲ್ಲೇ ಮಗದೊಂದು ಸಾಹಸಿ ಬೈಕ್ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿ ರೆನೆಗೇಡ್ ಸ್ಪೋರ್ಟ್ ಎಸ್, ರೆನೆಗೇಡ್ ಕಮಾಂಡೊ ಮತ್ತು ರೆನೆಗೇಡ್ ಕ್ಲಾಸಿಕ್ ಮಾದರಿಗಳನ್ನು ಯುಎಂ ಮೋಟಾರ್ ಸೈಕಲ್ಸ್ ಮಾರಾಟ ಮಾಡುತ್ತಿದೆ. ನೂತನ ಬೈಕ್ ಆಗಮನದೊಂದಿಗೆ ತನ್ನ ಸಾನಿಧ್ಯವನ್ನು ಮತ್ತಷ್ಟು ಬಲಪಡಿಸಲಿದೆ.

ಯುಎಂ ಮೋಟಾರ್‌ಸೈಕಲ್ಸ್

2018 ಆಟೋ ಎಕ್ಸ್ ಪೋದಲ್ಲಿ 250 ಸಿಸಿ ಸಾಮರ್ಥ್ಯದ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಇದು ಭಾರತೀಯ ಗ್ರಾಹಕರ ಪಾಲಿಗೆ ನೆಚ್ಚಿನ ಆಯ್ಕೆಯಾಗಿರಲಿದೆ. ಎಂಜಿನ್ ತಾಂತ್ರಿಕತೆ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಹಾಗಿದ್ದರೂ ಈಗಿರುವ ರೆನೆಗೇಡ್ ಟ್ವಿನ್ ನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಆಳವಡಿಕೆಯಾಗುವ ಸಾಧ್ಯತೆಯಿದೆ.

ಯುಎಂ ಹೈಪರ್ ಸ್ಪೋರ್ಟ್ ಆಗಲೇ ಭಾರತ ಮಾರುಕಟ್ಟೆಯಲ್ಲಿ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ್ದು, 223 ಸಿಸಿ, ಸಿಂಗಲ್ ಪೊಟ್ ಎಂಜಿನ್ ಜೋಡಿಸಲಾಗಿದೆ. ಇದು 17.69 ಎನ್ ಎಂ ತಿರುಗುಬಲದಲ್ಲಿ 16 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಯುಎಂ ಮೋಟಾರ್‌ಸೈಕಲ್ಸ್

ಭಾರತ ಮಾರುಕಟ್ಟೆಯಲ್ಲಿ ರಾಯಲ್ ಎನ್ ಫೀಲ್ಡ್, ಟ್ರಯಂಪ್, ಬಿಎಂಡಬ್ಲ್ಯು ಹಾಗೂ ಡುಕಾಟಿ ಮಾದರಿಗಳಿಗೆ ಯುಎಂ ಮೋಟಾರ್ ಸೈಕಲ್ಸ್ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಭಾರತದಲ್ಲಿ ಲೋಹಿಯಾ ಆಟೋ ಜೊತೆ ಕೈಜೋಡಿಸಿಕೊಂಡಿರುವ ಯುಎಂ ಮೋಟಾರ್ ಸೈಕಲ್ಸ್ ಶೇಕಡಾ 100ರಷ್ಟು ಸ್ಥಳೀಯವಾಗಿ ನಿರ್ಮಾಣ ಕಾರ್ಯವನ್ನು ಆರಂಭಿಸಲಿದೆ. ಭಾರತದಲ್ಲಿರುವ ರೆನೆಗೇಡ್ ಕಮಾಂಡೊ, ರೆನೆಗೇಡ್ ಸ್ಪೋರ್ಟ್ ಎಸ್ ಮತ್ತು ರೆನೆಗೇಡ್ ಕ್ಲಾಸಿಕ್ ಮಾದರಿಗಳು ಅನುಕ್ರಮವಾಗಿ 1.59, 1.49 ಮತ್ತು 1.69 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

More from DriveSpark

Article Published On: Thursday, September 22, 2016, 15:51 [IST]
English summary
Adventure Bikes Coming To India From UM Motorcycles In The Near Future
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+