ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

ಭಾರತದಲ್ಲಿ ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿರುವ ಹೊಚ್ಚ ಹೊಸ ಬೈಕ್ ಗಳ ಪಟ್ಟಿ ಇಲ್ಲಿದೆ.

By Nagaraja

ಹೊಸ ಬೈಕ್ ಖರೀದಿಸುವ ಯೋಜನೆಯಲ್ಲಿದ್ದೀರಾ ? 2016 ವರ್ಷಾಂತ್ಯವನ್ನು ತಲುಪಿರುವ ಹಿನ್ನಲೆಯಲ್ಲಿ ಈಗ ಹೊಸ ಬೈಕ್ ಖರೀದಿಸುವುದು ಯೋಗ್ಯವಲ್ಲ. ಯಾಕೆಂದರೆ ಬಿಡುಗಡೆಯಾದ ಬೈಕ್‌ನ ಮಾಡೆಲ್ ವರ್ಷ ಅತಿ ಮುಖ್ಯ ಘಟಕವೆನಿಸುವುದರಿಂದ ನಿಸ್ಸಂಶವಾಗಿಯೂ ಸ್ವಲ್ಪ ಸಮಯ ಕಾಯುವುದರಲ್ಲಿ ತಪ್ಪೇನಿಲ್ಲ. 2017ನೇ ಸಾಲಿನಲ್ಲಿ ಅನೇಕ ಹೊಸ ಬೈಕ್ ಗಳು ಬಿಡುಗಡೆಯಾಗಲಿದ್ದು, ಬೈಕ್ ಪ್ರೇಮಿಗಳಲ್ಲಿ ರೋಮಾಂಚನವನ್ನುಂಟು ಮಾಡಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

ನಾವು ಈ ಮೊದಲೇ ತಿಳಿಸಿರುವಂತೆಯೇ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯು ಪ್ರಯಾಣಿಕ ವಿಭಾಗದಿಂದ ಕ್ರೀಡಾ ಬೈಕ್ ವಿಭಾಗಕ್ಕೆ ನಿಧಾನವಾಗಿ ವಾಲುತ್ತಿದೆ. ಇದರಂಗವಾಗಿ ಜಗತ್ತಿನ ಮುಂಚೂಣಿಯ ಸಂಸ್ಥೆಗಳು ಹೆಚ್ಚೆಚ್ಚು ಕ್ರೀಡಾ ಬೈಕ್ ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಕೆಟಿಎಂ ಡ್ಯೂಕ್ 390

ಕೆಟಿಎಂ ಡ್ಯೂಕ್ 390

ಕೆಟಿಎಂ ಡ್ಯೂಕ್ 390 ಈಗಾಗಲೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ. ಇದಕ್ಕೆ ಮತ್ತಷ್ಟು ಮೆರಗು ತುಂಬಲು ಎರಡನೇ ತಲೆಮಾರಿನ ಕೆಟಿಎಂ ಡ್ಯೂಕ್ 390 ಪ್ರವೇಶವಾಗುತ್ತಿದೆ. ಹಿಂದಿನ ಮಾದರಿಗಿಂತಲೂ ಗಮನಾರ್ಹ ವೈಶಿಷ್ಟ್ಯ ಮತ್ತು ತಂತ್ರಗಾರಿಕೆಗಳನ್ನು ನೂತನ ಕೆಟಿಎಂ ಡ್ಯೂಕ್ 390 ಗಿಟ್ಟಿಸಿಕೊಳ್ಳಲಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

2017 ಕೆಟಿಎಂ ಡ್ಯೂಕ್ 390 ಬೈಕ್, ರೈಡ್-ಬೈ-ವೈರ್ ತಂತ್ರಜ್ಞಾನ, ಟಿಎಫ್ ಟಿ ಇನ್ಸ್ಟ್ರುಮೆಂಟ್ ಪ್ಯಾನೆಲ್, ಸ್ಟ್ಯಾಂಡರ್ಡ್ ಎಬಿಎಸ್, ವಿಭಜಿತ ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು ಹೊಸತಾದ ದೇಹ ಸಂರಚನೆಯನ್ನು ಗಳಿಸಲಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

2017 ವರ್ಷಾರಂಭದಲ್ಲೇ ಬಿಡುಗಡೆಯಾಗಲಿರುವ ನೂತನ ಕೆಟಿಎ ಡ್ಯೂಕ್ 390 ಬೈಕ್ ದೇಶದಲ್ಲಿ 2.45 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

2017 ಡ್ಯೂಕ್ 200

2017 ಡ್ಯೂಕ್ 200

ಮುಂದಿನ ವರ್ಷದಲ್ಲೇ 2017 ಡ್ಯೂಕ್ 200 ಸಹ ಬಿಡುಗಡೆಯಾಗಲಿದೆ. ಇದು ವಿಭಜಿತ ಹೆಡ್ ಲ್ಯಾಂಪ್ ಹೊರತುಪಡಿಸಿ ತನ್ನ ಹಿರಿಯ ಸೋದರ ಡ್ಯೂಕ್ 390 ಮಾದರಿಗೆ ಸಮಾನವಾದ ವಿನ್ಯಾಸವನ್ನು ಗಿಟ್ಟಿಸಿಕೊಳ್ಳಲಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

ಹೆಡ್ ಲ್ಯಾಂಪ್ ನವೀಕೃತಗೊಳಿಸಲಾಗಿದ್ದು, ಹೆಚ್ಚು ಪ್ರಕಾಶಮಾನವಾಗಿರಲಿದೆ. ಇನ್ನು ಡ್ಯೂಕ್ 390 ಮಾದರಿಗೆ ಸಮಾನವಾಗಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಥ್ರಾಟಲ್ ವ್ಯವಸ್ಥೆಯನ್ನು ಪಡೆಯಲಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

ಇದರಲ್ಲಿರುವ 200 ಸಿಸಿ ಎಂಜಿನ್ 26 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ತನ್ಮೂಲಕ ಎಂಜಿನ್ ನಿರ್ವಹಣೆಯಲ್ಲೂ ಸುಧಾರಣೆ ಕಂಡುಬಂದಿದೆ. ಸದ್ಯ ಮಾರಾಟದಲ್ಲಿರುವ ಕೆಟಿಎಂ 200 ಡ್ಯೂಕ್ ಆವೃತ್ತಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.43 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಅಂದರೆ ನೂತನ ಮಾದರಿಯು ಇದಕ್ಕಿಂತಲೂ ಕೊಂಚ ದುಬಾರಿಯೆನಿಸಲಿದೆ.

ಬಿಎಂಡಬ್ಲ್ಯು ಜಿ310ಆರ್

ಬಿಎಂಡಬ್ಲ್ಯು ಜಿ310ಆರ್

ನಾವು ಈಗಾಗಲೇ ವರದಿ ಮಾಡಿರುವಂತೆಯೇ ಟಿವಿಎಸ್ ಜೊತೆಗಾರಿಕೆಯಲ್ಲಿ ಜರ್ಮನಿಯ ಖ್ಯಾತ ಸಂಸ್ಥೆ ಬಿಎಂಡಬ್ಲ್ಯು ಮೊಟೊರಾಡ್ ಅಭಿವೃದ್ಧಿಪಡಿಸಿರುವ ಜಿ310ಆರ್ ಕ್ರೀಡಾ ಬೈಕ್ ಭಾರತಕ್ಕೆ ಅಧಿಕೃತ ಪಾದಾರ್ಪಣೆಗೈಯಲು ಸಜ್ಜಾಗಿ ನಿಂತಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

ಎಲ್ಲ ಹಂತದಲ್ಲೂ ದೇಶದ ಬೈಕ್ ಪ್ರೇಮಿಗಳಿಗೆ ಹೊಸತನವನ್ನು ನೀಡಲಿರುವ ಬಿಎಂಡಬ್ಲ್ಯು ಜಿ310ಆರ್, ತಂತ್ರಜ್ಞಾನದಲ್ಲಿ ಉತ್ಕೃಷ್ಟತೆಯನ್ನು ಕಾಪಾಡಿಕೊಂಡಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದು 2017 ಮಾರ್ಚ್ ನಿಂದ ಎಪ್ರಿಲ್ ಅವಧಿಯಲ್ಲಿ ಬಿಡುಗಡೆಯಾಗಲಿದ್ದು, 1.8 ಲಕ್ಷ ರು.ಗಳಿಂದ 2 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಟಿವಿಎಸ್ ಅಕುಲಾ 310

ಟಿವಿಎಸ್ ಅಕುಲಾ 310

ಬಿಎಂಡಬ್ಲ್ಯು ಜಿ310ಆರ್ ಅದೇ ತಳಹದಿಯಲ್ಲಿ ನಿರ್ಮಾಣವಾಗಿರುವ ಟಿವಿಎಸ್ ಅಕುಲಾ 310 ಒಂದು ಫೇರ್ಡ್ ಮಾದರಿಯಾಗಿದ್ದು, 2017ನೇ ಸಾಲಿನಲ್ಲೇ ಬಿಡುಗಡೆಯಾಗಲಿದೆ. ಇವೆರಡು ತಮಿಳುನಾಡಿನಲ್ಲಿ ಸ್ಥಿತಗೊಂಡಿರುವ ಹೊಸೂರು ಘಟಕದಲ್ಲಿ ನಿರ್ಮಾಣವಾಗುತ್ತಿರುವುದು ಗಮನಾರ್ಹವೆನಿಸುತ್ತದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

ದೇಶದಲ್ಲಿ ಹೆಚ್ಚು ಜನಪ್ರಿಯತೆ ಕಾಪಾಡಿಕೊಂಡಿರುವ ಅಪಾಚಿ ನಾಮಕರಣದೊಂದಿಗೆ ಅಕುಲಾ 310 ಮಾರಾಟವಾಗುವ ಸಾಧ್ಯತೆಯಿದೆ. ಇದು 2017 ಮಾರ್ಚ್ ವೇಳೆಯಾಗುವಾಗ ಮಾರುಕಟ್ಟೆಗೆ ಅಪ್ಪಳಿಸಲಿದ್ದು, ಎರಡು ಲಕ್ಷ ಬೆಲೆ ಪರಿಧಿಯನ್ನು ಹೊಂದಿರಲಿದೆ.

ಬಜಾಜ್ ಡೊಮಿನರ್

ಬಜಾಜ್ ಡೊಮಿನರ್

ಸಹಜವಾಗಿಯೇ ಹೊಸ ಹೊಸ ಸಂಸ್ಥೆಗಳ ಪಾದಾರ್ಪಣೆಯೊಂದಿಗೆ ದೇಶದ ನಂ.1 ಎಂಟ್ರಿ ಲಿವೆಲ್ ಕ್ರೀಡಾ ಬೈಕ್ ಸಂಸ್ಥೆಯಾಗಿರುವ ಬಜಾಜ್ ಆಟೋ ಹಿನ್ನಡೆ ಅನುಭವಿಸಿದೆ. ಆದರೆ ಇಲ್ಲಿಗೆ ಸೋಲೊಪ್ಪಿಕೊಳ್ಳಲು ತಯಾರಾಗದ ಸಂಸ್ಧೆಯು ನೂತನ ಡೊಮಿನರ್ 400 ಸಿಸಿ ಬೈಕ್ ನೊಂದಿಗೆ ತಕ್ಕ ಉತ್ತರವನ್ನೇ ನೀಡಲಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

ಈಗಾಗಲೇ ಡೊಮಿನರ್ ನಿರ್ಮಾಣವನ್ನು ಆರಂಭಿಸಿರುವ ಬಜಾಜ್, ಕ್ರೀಡಾ ಬೈಕ್ ವಿಭಾಗದಲ್ಲೂ ಭರ್ಜರಿ ಪುನಾರಗಮನವನ್ನೇ ಎದುರು ನೋಡುತ್ತಿದೆ. ಇದು ಕೆಟಿಎಂ ಡ್ಯೂಕ್ 390 ಮಾದರಿಗೆ ಸಮಾನವಾದ ಎಂಜಿನ್ ಗಳಿಸಲಿದ್ದು, 35 ಅಶ್ವಶಕ್ತಿ ಮತ್ತು ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ. 2016 ವರ್ಷಾಂತ್ಯದಲ್ಲೇ ಬಿಡುಗಡೆಯಾಗಲಿರುವ ಬಜಾಜ್ ಡೊಮಿನರ್ ಎಕ್ಸ್ ಶೋ ರೂಂ ಬೆಲೆಯು 1.6 ಲಕ್ಷ ರು.ಗಳಿಂದ 1.8 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಟಾರ್ಕ್ ಟಿ6ಎಕ್ಸ್

ಟಾರ್ಕ್ ಟಿ6ಎಕ್ಸ್

ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯೆಂಬಂತೆ ಸಂಪೂರ್ಣ ಪರಿಸರ ಸ್ನೇಹಿ ದೇಶದ ಚೊಚ್ಚಲ ವಿದ್ಯುತ್ ಚಾಲಿತ ಮೋಟಾರ್ ಸೈಕಲ್ ಟಾರ್ಕ್ ಟಿ6ಎಕ್ಸ್ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಇದರಂತೆ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

100 ಕೀ.ಮೀ. ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ಟಾರ್ಕ್ ಟಿ6ಎಕ್ಸ್ ಬೈಕ್ ಕ್ರೀಡಾತ್ಮಕ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿದ್ದು, 8 ಅಶ್ವಶಕ್ತಿಯ ಎಲೆಕ್ಟ್ರಿಕ್ ಮೋಟಾರು ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಿಟ್ಟಿಸಿಕೊಂಡಿದೆ. ಅಂದ ಹಾಗೆ ಟಾರ್ಕ್ ಟಿ6ಎಕ್ಸ್ 2017 ವರ್ಷಾರಂಭದಲ್ಲೇ ಬಿಡುಗಡೆಯಾಗಲಿದ್ದು, 1.24 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಹೀರೊ ಎಚ್ ಎಕ್ಸ್250

ಹೀರೊ ಎಚ್ ಎಕ್ಸ್250

ಕರಿಜ್ಮಾ ಯಶಸ್ಸಿನ ಸುದೀರ್ಘಾವಧಿಯ ಬಳಿಕವೀಗ ಹೀರೊ ಅತಿ ನೂತನ ಎಚ್ ಎಕ್ಸ್ 250 ಮುಖಾಂತರ ಭರ್ಜರಿ ಪುನರಾಗಮನ ಮಾಡಿಕೊಳ್ಳಲಿದೆ. ಫುಲ್ ಫೇರ್ಡ್ ಮಾದರಿಯಾಗಿರುವ ಹೀರೊ ಎಚ್ ಎಕ್ಸ್ 250 ಬೈಕ್, ಈ ಶ್ರೇಣಿಯ ವಿಭಾಗದಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗಲಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

249 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ ಗಿಟ್ಟಿಸಿಕೊಳ್ಳಲಿರುವ ಹೀರೊ ಎಚ್ ಎಕ್ಸ್ 250 ಬೈಕ್, 26 ಎನ್ ಎಂ ತಿರುಗುಬಲದಲ್ಲಿ 31 ಅಶ್ವಶಕ್ತಿಯನ್ನು ಮತ್ತು ಆರು ಸ್ಪೀಡ್ ಗೇರ್ ಬಾಕ್ಸ್ ಪಡೆದಿದೆ. ಇದು ಕೂಡಾ 2017 ವರ್ಷಾರಂಭದಲ್ಲಿ ಮಾರುಕಟ್ಟೆ ತಲುಪಲಿದ್ದು, 1.5 ಲಕ್ಷ ರು.ಗಳಿಂದ 1.8 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಡಿಎಸ್‌ಕೆ ಬೆನೆಲ್ಲಿ ಲಿಯೊನ್ಸಿನೊ

ಡಿಎಸ್‌ಕೆ ಬೆನೆಲ್ಲಿ ಲಿಯೊನ್ಸಿನೊ

ಇಟಲಿಯ ಐಕಾನಿಕ್ ದ್ವಿಚಕ್ರ ಸಂಸ್ಥೆಗಳು ಆಗಲೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದರಲ್ಲಿ ಡಿಎಸ್ ಕೆ ಬೆಂಬಲದೊಂದಿಗೆ ಪ್ರವೇಶಿಸಿರುವ ಬೆನೆಲ್ಲಿ ಕೂಡಾ ಒಂದಾಗಿದೆ. ಪ್ರಸ್ತುತ ಸಂಸ್ಥೆಯೀಗ 2017 ಮಗದೊಂದು ಆಕರ್ಷಕ ಲಿಯೊನ್ಸಿನೊ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

499.6 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬೆನೆಲ್ಲಿ ಲಿಯೊನ್ಸಿನೊ 45 ಎನ್ ಎಂ ತಿರುಗುಬಲದಲ್ಲಿ 46.9 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ. ಪ್ರಸ್ತುತ ಬೈಕ್ 2017 ಫೆಬ್ರವರಿ ವೇಳೆಯಾಗುವ ಮಾರುಕಟ್ಟೆಗೆ ಪ್ರವೇಶಿಸಲಿದ್ದು ಆರರಿಂದ ಏಳು ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಬಜಾಜ್ ತ್ರಿವಳಿ ಬೈಕ್ ಗಳು

ಬಜಾಜ್ ತ್ರಿವಳಿ ಬೈಕ್ ಗಳು

ದೇಶದ ನಂ.1 ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ನಿರ್ಮಾಣ ಸಂಸ್ಥೆಯಾಗಿರುವ ಬಜಾಜ್ ಆಟೋ, ಮಾರುಕಟ್ಟೆಯಲ್ಲಿ ತಾಜಾತನ ಕಾಪಾಡಿಕೊಳ್ಳುವ ಭಾಗವಾಗಿ ಅತಿ ಶೀಘ್ರದಲ್ಲೇ ಪಲ್ಸರ್ ಶ್ರೇಣಿಯ ತ್ರಿವಳಿ ಬೈಕ್ ಗಳನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ಆಕರ್ಷಕ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

2017 ಪಲ್ಸರ್ 135, ಪಲ್ಸರ್ 150 ಜೊತೆಗೆ 220ಎಫ್ ಮಾದರಿಗಳನ್ನು ಬಿಡುಗಡೆ ಮಾಡಲು ಬಜಾಜ್ ಸಜ್ಜಾಗುತ್ತಿದೆ. ಇದು ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.

ನಿಸ್ಸಂಶವಾಗಿಯೂ ಕಾಯುವುದರಲ್ಲಿ ತಪ್ಪೇನಿಲ್ಲ; ನೀವೇ ನೋಡಿ ಮುಂಬರುವ ಬೈಕ್ ಗಳು!

ಈಗ ಪ್ರಸ್ತುತ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಬೈಕ್ ಬಗ್ಗೆ ಅಭಿಪ್ರಾಯಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿರಿ.

More from DriveSpark

Article Published On: Wednesday, November 30, 2016, 12:46 [IST]
English summary
Top Bike Launches In 2017 — Definitely Worth The Wait!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+