ಯಮಹಾ ಹೊಸ ಅವತಾರದೊಂದಿಗೆ 'ಸಿಗ್ನಸ್' ಸ್ಕೂಟರ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ಮೋಟಾರು ಇಂಡಿಯಾ ಸಂಸ್ಥೆಯು 2016 ಆಟೋ ಎಕ್ಸ್ ಪೋದಲ್ಲಿ ಅನೇಕ ನೂತನ ಮಾದರಿಗಳನ್ನು ಪರಿಚಯಿಸಿತ್ತು. ಈ ನಡುವೆ ಅತಿ ನೂತನ ಸೆಲ್ಯೂಟೊ ಆರ್‌ಎಕ್ಸ್ ಪ್ರಯಾಣಿಕ ಬೈಕನ್ನು ಬಿಡುಗಡೆಗೊಳಿಸಿತ್ತು.

ತನ್ನ ಯೋಜನೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಿರುವ ಜಪಾನ್ ಮೂಲದ ಈ ಪ್ರಖ್ಯಾತ ಸಂಸ್ಥೆಯೀಗ ಮಗದೊಂದು ಸ್ಕೂಟರ್ ಅವತಾರವನ್ನು ದೇಶಕ್ಕೆ ಪರಿಚಯಿಸಲು ಸಿದ್ದವಾಗುತ್ತಿದೆ. ಅದುವೇ ಯಮಹಾ ಸಿಗ್ನಸ್ ರೇ-ಝಡ್‌ಆರ್.

ಯಮಹಾ ಹೊಸ ಅವತಾರದೊಂದಿಗೆ 'ಸಿಗ್ನಸ್' ಸ್ಕೂಟರ್

ಸಹಜವಾಗಿಯೇ ಸ್ಕೂಟರ್ ಅಂದ ಮೇಲೆ ಎಷ್ಟು ಎಂಜಿನ್ ಸಾಮರ್ಥ್ಯ ಇರಬಹುದು ಎಂಬ ಗೊಂದಲ ಮೂಡಬಹುದು. ಇದಕ್ಕುತ್ತರ ಇಲ್ಲಿದೆ ನೋಡಿ. ನೂತನ ಯಮಹಾ ಸಿಗ್ನಸ್ ರೇ-ಝಡ್‌ಆರ್ 113 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಯಮಹಾ ಹೊಸ ಅವತಾರದೊಂದಿಗೆ 'ಸಿಗ್ನಸ್' ಸ್ಕೂಟರ್

ಇದರ 113 ಸಿಸಿ ಎಂಜಿನ್ 8 ಎನ್ ಎಂ ತಿರುಗುಬಲದಲ್ಲಿ 7 ಅಶ್ವಶಕ್ತಿ ಉತ್ಪಾದಿಸಲಿದ್ದು, ಪರಿಪೂರ್ಣ ಪ್ರಯಾಣಿಕ ಬೈಕ್ ಎನಿಸಿಕೊಳ್ಳಲಿದೆ. ಅಂತೆಯೇ ಸಿವಿಟಿ ಗೇರ್ ಇದರಲ್ಲಿರುತ್ತದೆ.

ಯಮಹಾ ಹೊಸ ಅವತಾರದೊಂದಿಗೆ 'ಸಿಗ್ನಸ್' ಸ್ಕೂಟರ್

ಬಲ್ಲ ಮೂಲಗಳ ಪ್ರಕಾರ ಎಪ್ರಿಲ್ ತಿಂಗಳಾಂತ್ಯದಲ್ಲಿ ಯಮಹಾ ಸಿಗ್ನಸ್ ರೇ-ಝಡ್‌ಆರ್ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಇತ್ತೀಚೆಗಷ್ಟೇ ಯಮಹಾ ರೇ ಸ್ಕೂಟರ್ ವಿವರಗಳನ್ನು ಸಂಸ್ಥೆಯ ಅಧಿಕೃತ ವೆಬ್ ಸೈಟ್ ನಿಂದ ತೆರವು ಮಾಡಲಾಗಿತ್ತು.

ಯಮಹಾ ಹೊಸ ಅವತಾರದೊಂದಿಗೆ 'ಸಿಗ್ನಸ್' ಸ್ಕೂಟರ್

ಯಮಹಾ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್ ನಲ್ಲಿ ಐಚ್ಛಿಕ ಡಿಸ್ಕ್ ಬ್ರೇಕ್ ಸೌಲಭ್ಯವೂ ಇರುತ್ತದೆ. ಇದು ಪುರುಷರ ಜೊತೆ ಜೊತೆಗೆ ಮಹಿಳೆಯರನ್ನು ಹೆಚ್ಚು ಆಕರ್ಷಿಸಲಿದೆ.

ಯಮಹಾ ಹೊಸ ಅವತಾರದೊಂದಿಗೆ 'ಸಿಗ್ನಸ್' ಸ್ಕೂಟರ್

ಯಮಹಾ ರೇ-ಝಡ್ ಆರ್ ತಳಹದಿಯಲ್ಲಿ ನಿರ್ಮಾಣವಾಗಿರುವ ಸಿಗ್ನಸ್ ರೇ-ಝಡ್‌ಆರ್ ನಿಖರ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಅಲ್ಲದೆ ಹೋಂಡಾ ಡಿಯೋ ಮತ್ತು ಹೀರೊ ಮ್ಯಾಸ್ಟ್ರೋ ಸ್ಕೂಟರ್ ಗಳಿಗೆ ನಿಕಟ ಪೈಪೋಟಿಯನ್ನು ಒಡ್ಡಲಿದೆ. ಇನ್ನು ಬೆಲೆಯು ಹಿಂದಿನ ಮಾದರಿಗಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ.

Article Published On: Saturday, April 16, 2016, 16:46 [IST]
English summary
Yamaha Cygnus Ray-ZR Could Be Launched By April-End
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+