82 ಕೀ.ಮೀ. ಮೈಲೇಜ್ ನೀಡಬಲ್ಲ ಯಮಹಾ ನೂತನ ಬೈಕ್ ಬಿಡುಗಡೆ
ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಇಂಡಿಯಾ ಯಮಹಾ ಮೋಟಾರ್ ಪ್ರೈವೇಟ್ ಲಿಮೆಟೆಡ್ ಸಂಸ್ಥೆಯು ದೇಶದಲ್ಲಿ ಅತಿ ನೂತನ ಸೆಲ್ಯೂಟೊ ಆರ್‌ಎಕ್ಸ್, ಎಂಟ್ರಿ ಲೆವೆಲ್ ಪ್ರಯಾಣಿಕ ಬೈಕ್ ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 46,400 ರು. (ದೆಹಲಿ ಎಕ್ಸ್ ಶೋ ರೂಂ)
ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ವಿಭಾಗದಲ್ಲಿ ತನ್ನ ಅಧಿಪತ್ಯ ಸಾಧಿಸಿರುವ ಯಮಹಾ ಈಗ ಗ್ರಾಹಕರ ಕೈಗೆಟುಕುವ ಬೆಲೆಗಳಲ್ಲಿ ಬಜೆಟ್ ಬೈಕ್ ಬಿಡುಗಡೆಗೊಳಿಸಿದೆ.

ಎಂಜಿನ್
ಬ್ಲೂ ಕೋರ್ ಡೆವಲಪ್ ಮೆಟ್ ಕಾನ್ಸೆಪ್ಟ್ ತಳಹದಿಯಲ್ಲಿ ನಿರ್ಮಾಣವಾಗಿರುವ ನೂತನ ಯಮಹಾ ಸೆಲ್ಯೂಟೊ ಆರ್‌ಎಕ್ಸ್, 110 ಸಿಸಿ, ಏರ್ ಕೂಲ್ಡ್, 4 ಸ್ಟ್ರೋಕ್, 2 ವಾಲ್ವ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 8.5 ಎನ್‌ಎಂ ತಿರುಗುಬಲದಲ್ಲಿ 7.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮೈಲೇಜ್
ಸ್ಟ್ಯಾಂಡರ್ಡ್ ರಸ್ತೆ ಪರಿಸ್ಥಿತಿಯಲ್ಲಿ ನೂತನ ಯಮಹಾ ಸೆಲ್ಯೂಟೊ ಆರ್‌ಎಕ್ಸ್ ಪ್ರತಿ ಲೀಟರ್ ಗೆ 82 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಭಾರ
ಹಳೆಯ ಮಾದರಿಗಿಂತಲೂ 22 ಕೆ.ಜಿ. ಗಳಷ್ಟು ಭಾರ ಕಡಿಮೆ ಹೊಂದಿರಲಿರುವ ಯಮಹಾ ಸೆಲ್ಯುಟೊ ಆರ್‌ಎಕ್ಸ್ ಹಗುರ ಭಾರದ ಬೈಕ್ ಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ಇದು ಒಟ್ಟಾರೆ 98 ಕೆ.ಜಿ ತೂಕವನ್ನು ಪಡೆದಿದೆ.

ವೈಶಿಷ್ಟ್ಯಗಳು
- ಕ್ರೀಡಾತ್ಮಕ ಹೊರಮೈ,
- ಹಗುರಭಾರ,
- ಬಳಕೆ ಸ್ನೇಹಿ,
- ಸುಲಭ ಹ್ಯಾಂಡ್ಲಿಂಗ್,
- ಆರಾಮದಾಯಕ ನಿರ್ವಹಣೆ,
- ಸುಧಾರಿತ ಇಂಧನ ಕ್ಷಮತೆ,
- ಸ್ಪರ್ಧಾತ್ಮಕ ಬೆಲೆ

ಸಸ್ಪೆನ್ಷನ್:
ಟೆಲಿಸ್ಕಾಪಿಕ್ ಫಾರ್ಕ್ ಮತ್ತು ರಿಯರ್ ಸ್ವಿಂಗ್ ಆರ್ಮ್

ಆಯಾಮ (ಎಂಎಂ)
ಉದ್ದ: 2020
ಅಗಲ: 740
ಎತ್ತರ: 1045
ಸೀಟು ಎತ್ತರ: 785
ಚಕ್ರಾಂತರ: 1255
ಗ್ರೌಂಡ್ ಕ್ಲಿಯರನ್ಸ್: 175

ಇಂಧನ ಟ್ಯಾಂಕ್ ಸಾಮರ್ಥ್ಯ: 7.2 ಲೀಟರ್
ಗೇರ್ ಬಾಕ್ಸ್: 4 ಸ್ಪೀಡ್

ಪ್ರತಿಸ್ಪರ್ಧಿಗಳು
ಹೋಂಡಾ ಡ್ರೀಮ್ ಯುಗಾ,
ಮಹೀಂದ್ರ ಸೆಂಚುರೊ,
ಮಹೀಂದ್ರ ಸೆಂಚುರೊ

ಬಣ್ಣಗಳು
ಬ್ರೀಝಿ ಬ್ಲೂ,
ಮ್ಯಾಟ್ ಬ್ಲ್ಯಾಕ್,
ಇನ್‌ಸ್ಪೈರಿಂಗ್ ರೆಡ್,
ಗ್ಲೀಮಿಂಗ್ ಬ್ಲ್ಯಾಕ್


Click it and Unblock the Notifications