300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

Written By:

ಜಪಾನ್ ನ ದೈತ್ಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಯಮಹಾ, ಮಗದೊಮ್ಮೆ ತಾನ್ಯಾಕೆ ಸ್ಕೂಟರ್ ವಿಭಾಗದಲ್ಲಿ ಅಗ್ರಗಣ್ಯವೆನಿಸಿಕೊಂಡಿದೆ ಎಂಬುದನ್ನು ಸಾಬೀತುಪಡಿಸಿದೆ. ಜಾಗತಿಕ ವಾಹನ ವಲಯಕ್ಕೆ ನಾವೀನ್ಯ ತಂತ್ರಗಾರಿಕೆಯನ್ನು ಪರಿಚಯಿಸುತ್ತಲ್ಲೇ ಬಂದಿರುವ ಯಮಹಾ, ಅತಿ ನೂತನ ಎಕ್ಸ್ ಮ್ಯಾಕ್ಸ್ 300 ಮ್ಯಾಕ್ಸಿ ಸ್ಕೂಟರನ್ನು ಪರಿಚಯಿಸಿದೆ. ತನ್ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

To Follow DriveSpark On Facebook, Click The Like Button
300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಬೈಕನ್ನೇ ಮೀರಿಸುವಂತಹ ಯಮಹಾ ನೂತನ 292 ಸಿಸಿ ಸ್ಕೂಟರ್, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಮಾರಾಟದಲ್ಲಿರುವ ಎಕ್ಸ್-ಮ್ಯಾಕ್ಸ್ 250 ಸ್ಥಾನವನ್ನು ತುಂಬಲಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಮುಂಬರುವ 2016 ಇಒಸಿಎಂಎ ಮೋಟಾರ್ ಸೈಕಲ್ ಶೋ ಅಥವಾ ಮಿಲಾನ್ ಶೋದಲ್ಲಿ ಭರ್ಜರಿ ಪ್ರದರ್ಶನಕ್ಕೂ ಮುಂಚಿತವಾಗಿ ಸಂಸ್ಥೆಯು ನೂತನ ಎಕ್ಸ್-ಮ್ಯಾಕ್ಸ್ 300 ಮ್ಯಾಕ್ಸಿ ಸ್ಕೂಟರನ್ನು ಅನಾವರಣಗೊಳಿಸಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಎಕ್ಸ್-ಮ್ಯಾಕ್ಸ್ 250 ಬದಲಿಯಾಗಿ ಮತ್ತಷ್ಟು ಶಕ್ತಿಶಾಲಿ ಎಕ್ಸ್-ಮ್ಯಾಕ್ಸ್ 300 ಮ್ಯಾಕ್ಸಿ ಸ್ಕೂಟರ್ ಕಾಲಿಡುತ್ತಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ವರ್ಷಾರಂಭದಲ್ಲಿ ಭಾರತದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಎನ್-ಮ್ಯಾಕ್ಸ್ ಸಮಾನವಾದ ವಿನ್ಯಾಸ ನೀತಿಯನ್ನು ಎಕ್ಸ್-ಮ್ಯಾಕ್ಸ್ 300 ಸ್ಕೂಟರ್ ನಲ್ಲಿ ಅನುಸರಿಸಲಾಗಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಆಕ್ರಮಣಕಾರಿ ಹಾಗೂ ಪ್ರಭಾವಶಾಲಿ ವಿನ್ಯಾಸ, ಮುಂಭಾಗದಲ್ಲಿ ಟ್ವಿನ್ ಹೆಡ್ ಲೈಟ್ ಮತ್ತು ದೊಡ್ದದಾದ ವಿಂಡ್ ಸ್ಕ್ರೀನ್ ಪ್ರಮುಖ ಆಕರ್ಷಣೆಯಾಗಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಬದಿಯಲ್ಲಿ ಬೈಕ್ ಗೆ ಹೋಲುವಂತಹ ಫೇರಿಂಗ್ ವಿನ್ಯಾಸವನ್ನು ತುಂಬಲಾಗಿದ್ದು, ಕ್ಲಿಯರ್ ಲೆನ್ಸ್ ಇಂಡಿಕೇಟರ್ ಮತ್ತು ಫ್ರಂಟ್ ಮಡ್ ಗಾರ್ಡ್ ಕಾಣಬಹುದಾಗಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಹಾಗೆಯೇ ಹಿಂದುಗಡೆಯ ಟೈಲ್ ಲ್ಯಾಂಪ್ ನಲ್ಲೂ ಟ್ವಿನ್ ವಿಭಜಿತ ವಿನ್ಯಾಸವನ್ನು ಅನುಸರಿಸಲಾಗಿದೆ. ಇದಕ್ಕೆ ತಕ್ಕುದಾಗಿ ಆರಾಮದಾಯಕ ಸೀಟು ಕೊಡಲಾಗಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಪರಿಷ್ಕೃತ ಚಾಸೀ, ಟೆಲಿಸ್ಕಾಫಿಕ್ ಫ್ರಂಟ್ ಫಾರ್ಕ್, ಟ್ವಿನ್ ಶಾಕ್ ಅಬ್ಸಾರ್ಬರ್ ರಿಯರ್ ಸಸ್ಪೆನ್ಷನ್ ವ್ಯವಸ್ಥೆಗಳನ್ನು ಪಡೆದಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಇನ್ನು ಸಾಮಾನ್ಯ ಸ್ಕೂಟರ್ ಗಿಂತಲೂ ವಿಭಿನ್ನವಾಗಿ ಮುಂದುಗಡೆ 15 ಇಂಚು ಹಾಗೂ ಹಿಂದುಗಡೆ 14 ಇಂಚುಗಳ ಅಲಾಯ್ ಚಕ್ರಗಳನ್ನು ಗಿಟ್ಟಿಸಿಕೊಂಡಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಸೀಟು ಕಳಗಡೆ ಗರಿಷ್ಠ ಸ್ಥಳಾವಕಾಶಕ್ಕೆ ಆದ್ಯತೆ ಕೊಡಲಾಗಿದ್ದು, ಎರಡು ಹೆಲ್ಮೆಟ್ ಗಳನ್ನು ಇಡಬಹುದಾಗಿದೆ. ಇನ್ನು ಮೊಬೈಲ್ ಚಾರ್ಜ್ ಮಾಡಿಸಲು ಪವರ್ ಸಾಕೆಟ್ ಸೇವೆಯೂ ಲಭ್ಯವಾಗಲಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಕೀಲೆಸ್ ಇಗ್ನಿಷನ್, ಟ್ರಾಕ್ಷನ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿ ಸೌಲಭ್ಯಗಳು ಕಂಡುಬರಲಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಸ್ಪೀಡೋಮೀಟರ್, ಟ್ಯಾಕೋಮೀಟರ್, ಫ್ಯೂಯಲ್ ಗೇಜ್, ಎಂಜಿನ್ ತಾಪಮಾನ, ಓಡೋಮೀಟರ್, ಟ್ರಿಪ್ ಮೀಟರ್ ಮತ್ತು ಇತರೆ ಬೆಳಕಿನ ಬಗ್ಗೆ ಮಾಹಿತಿಯನ್ನು ನೀಡಲಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

ಯುರೋಪ್ ಮಾನದಂಡಗಳಿಗೆ ಅನುಸಾರವಾಗಿ ಯಮಹಾ ಎಕ್ಸ್-300 ಮ್ಯಾಕ್ಸಿ ಸ್ಕೂಟರ್ 292 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 29 ಎನ್ ಎಂ ತಿರುಗುಬಲದಲ್ಲಿ 27 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

300 ಸಿಸಿ ಶಕ್ತಿಶಾಲಿ ಎಂಜಿನ್; ಬೈಕನ್ನೇ ಮೀರಿಸುವ ಯಮಹಾ ಸ್ಕೂಟರ್

2017 ಮಾರ್ಚ್ ವೇಳೆಯಾಗುವಾಗ ಯುರೋಪ್ ಮಾರುಕಟ್ಟೆಯನ್ನು ತಲುಪಲಿರುವ ಯಮಹಾ ಎಕ್ಸ್-ಮ್ಯಾಕ್ಸ್ 300, ಸದ್ಯಕ್ಕಂತೂ ಭಾರತವನ್ನು ತಲುಪುವುದು ಕಷ್ಟಸಾಧ್ಯವಾಗಿದೆ. ಹಾಗಿದ್ದರೂ ಯಮಹಾ ಭವಿಷ್ಯದ ಯೋಜನೆಯಲ್ಲಿ ಎಕ್ಸ್-ಮ್ಯಾಕ್ಸ್ 300 ಸೇರ್ಪಡೆಗೊಂಡರೆ ಅಚ್ಚರಿಪಡಬೇಕಿಲ್ಲ.

Read more on ಯಮಹಾ yamaha
English summary
Yamaha Unveils X-300 Maxi Scooter
Story first published: Saturday, October 22, 2016, 10:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark