ಇನ್ನು ಮುಂದೆ ಯಮಹಾದ ಜನಪ್ರಿಯ ಆರ್15 ಬೈಕ್‌ನಲ್ಲೂ ಆಟೋ ಹೆಡ್ ಲ್ಯಾಂಪ್

ಯಮಹಾ ಆರ್15

By Nagaraja

ದ್ವಿಚಕ್ರ ವಾಹನಗಳಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ (ಎಎಚ್ ಒ) ಕಡ್ಡಾಯವಾಗಲಿರುವಂತೆಯೇ ದೇಶದ ಮುಂಚೂಣಿಯ ವಾಹನ ಸಂಸ್ಥೆಗಳೆಲ್ಲ ಒಂದೊಂದಾಗಿ ಈ ವೈಶಿಷ್ಟ್ಯಕ್ಕೆ ಒಗ್ಗಿ ಕೊಳ್ಳುತ್ತಿದೆ. ಈ ಪಟ್ಟಿಗೀಗ ಜಪಾನ್ ಮೂಲದ ಜನಪ್ರಿಯ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ತಯಾರಕ ಸಂಸ್ಥೆಯಾಗಿರುವ ಯಮಹಾ ಸಹ ಸೇರ್ಪಡೆಗೊಂಡಿದೆ.

ಇನ್ನು ಮುಂದೆ ಯಮಹಾದ ಜನಪ್ರಿಯ ಆರ್15 ಬೈಕ್‌ನಲ್ಲೂ ಆಟೋ ಹೆಡ್ ಲ್ಯಾಂಪ್

ಇನ್ನು ಮುಂದೆ ಯಮಹಾದ ಜನಪ್ರಿಯ ವೈಝಡ್‌ಎಫ್-ಆರ್15 ಬೈಕ್ ನಲ್ಲೂ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯು ಲಭ್ಯವಾಗಲಿದೆ.

ಇನ್ನು ಮುಂದೆ ಯಮಹಾದ ಜನಪ್ರಿಯ ಆರ್15 ಬೈಕ್‌ನಲ್ಲೂ ಆಟೋ ಹೆಡ್ ಲ್ಯಾಂಪ್

ಯಮಹಾ ಆರ್15 ಬೈಕ್ ನಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆ ಬಂದರೂ ಬೆಲೆಯಲ್ಲಿ ಮಾತ್ರ ಯಾವುದೇ ವ್ಯತ್ಯಾಸವುಂಟಾಗಲಿಲ್ಲ. ಆರ್15 ವರ್ಷನ್ 2.0 ಹಾಗೂ ಆರ್15 ಎಸ್ ಮಾದರಿಗಳಲ್ಲೂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಆರ್15 ವರ್ಷನ್ 2.0: 1.18 ಲಕ್ಷ ರು.

ಆರ್15 ಎಸ್: 1.15 ಲಕ್ಷ ರು.

ಇನ್ನು ಮುಂದೆ ಯಮಹಾದ ಜನಪ್ರಿಯ ಆರ್15 ಬೈಕ್‌ನಲ್ಲೂ ಆಟೋ ಹೆಡ್ ಲ್ಯಾಂಪ್

ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಪ್ರಮಾಣವನ್ನು ಗಂಭೀರವಾಗಿ ಪರಿಣಮಿಸಿರುವ ಕೇಂದ್ರ ಸರಕಾರವು 2017 ಎಪ್ರಿಲ್ ತಿಂಗಳಿಂದ ಎಲ್ಲ ದ್ವಿಚಕ್ರ ವಾಹನಗಳಲ್ಲೂ 'ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್' ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ನಿರ್ಧರಿಸಿದೆ.

ಇನ್ನು ಮುಂದೆ ಯಮಹಾದ ಜನಪ್ರಿಯ ಆರ್15 ಬೈಕ್‌ನಲ್ಲೂ ಆಟೋ ಹೆಡ್ ಲ್ಯಾಂಪ್

ಕೇಂದ್ರ ಸರಕಾರದ ಭವಿಷ್ಯದ ಯೋಜನೆಯನ್ನು ಮುಂಚಿತವಾಗಿಯೇ ಅರಿತುಕೊಂಡಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೀರೊ ಮೊಟೊಕಾರ್ಪ್ ತನ್ನೆಲ್ಲ ಶ್ರೇಣಿಯ ವಾಹನಗಳಿಗೂ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯನ್ನು ಒದಗಿಸಲು ನಿರ್ಧರಿಸಿದೆ.

ಇನ್ನು ಮುಂದೆ ಯಮಹಾದ ಜನಪ್ರಿಯ ಆರ್15 ಬೈಕ್‌ನಲ್ಲೂ ಆಟೋ ಹೆಡ್ ಲ್ಯಾಂಪ್

ಈ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿರುವ ಹೀರೊ ಸಂಸ್ಥೆಯು ಸ್ಪ್ಲೆಂಡರ್ ಹಾಗೂ ಹೀರೊ ಅಚೀವರ್ 150 ಬೈಕ್ ನಲ್ಲೂ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯನ್ನು ನೀಡುತ್ತದೆ.

ಏನಿದು ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ತಂತ್ರಜ್ಞಾನ ?

ಏನಿದು ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ತಂತ್ರಜ್ಞಾನ ?

ನೀವು ಇಗ್ನಿಷನ್ ಗೆ ಕೀ ಹಾಕಿ ಗಾಡಿ ಸ್ಟ್ಯಾರ್ಟ್ ಮಾಡಿದಾಗ ಸ್ವಯಂಚಾಲಿತವಾಗಿ ಹೆಡ್ ಲ್ಯಾಂಪ್ ಆನ್ ಆಗಲಿದೆ. ಇದು ಹಗಲು ರಾತ್ರಿಯೆನ್ನದೇ ಸವಾರಿಯುದ್ಧಕ್ಕೂ ಆನ್ ನಲ್ಲಿರಲಿದೆ.

ಇನ್ನು ಮುಂದೆ ಯಮಹಾದ ಜನಪ್ರಿಯ ಆರ್15 ಬೈಕ್‌ನಲ್ಲೂ ಆಟೋ ಹೆಡ್ ಲ್ಯಾಂಪ್

ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯೊಂದಿಗೆ ಹೆಚ್ಚಿನ ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸಬಹುದಾಗಿದ್ದು, ಅಪಘಾತ ಪ್ರಮಾಣದಲ್ಲಿ ಇಳಿಕೆಯುಂಟಾಗಲಿದೆ.

ಇನ್ನು ಮುಂದೆ ಯಮಹಾದ ಜನಪ್ರಿಯ ಆರ್15 ಬೈಕ್‌ನಲ್ಲೂ ಆಟೋ ಹೆಡ್ ಲ್ಯಾಂಪ್

ರಸ್ತೆ ಸುರಕ್ಷತೆಯತ್ತ ಮಗದೊಂದು ಹೆಜ್ಜೆ ಮುಂದಿಡಲಿರುವ ಕೇಂದ್ರ ಸರಕಾರವು 2018ನೇ ಸಾಲಿನಿಂದ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಮತ್ತು ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ ಸಹ ಕಡ್ಡಾಯಗೊಳಿಸಲಿದೆ.

More from DriveSpark

Article Published On: Friday, December 2, 2016, 16:01 [IST]
English summary
Yamaha YZF-R15 With 'Auto Headlamp On' Launched In India
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+