TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಹೊಸ ಬಿಎಸ್ಎ ಮೋಟಾರ್ ಸೈಕಲ್ ಉತ್ಪಾದನೆಯನ್ನು ಖಚಿತಪಡಿಸಿದ ಮಹೀಂದ್ರಾ
ಮಹೀಂದ್ರಾ ಸಂಸ್ಥೆಯು 2016ರಲ್ಲಿ ಬ್ರಿಟಿಷ್ ಮೂಲದ ಬಿಎಸ್‌ಎ ಮೋಟಾರ್‌ಸೈಕಲ್ ಬ್ರ್ಯಾಂಡ್ ಖರೀದಿಸಿರುವ ಬಗ್ಗೆ ವರದಿ ಮಾಡಿದ್ದೆವು. ಇದರ ನಂತರ ಮೊದಲ ಹಂತವಾಗಿ ಮಹೀಂದ್ರಾ ಹೊಸ ಬೈಕ್ ಹೊರ ತರುವ ಯೋಜನೆ ರೂಪಿಸಿದೆ.
ಹೌದು, ಈ ವಿಚಾರ ಸದ್ಯ ಹೆಚ್ಚು ಚರ್ಚೆಯಾಗುತ್ತಿದೆ. ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಕೂಡ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಕಂಪನಿಯು ಈಗಾಗಲೇ ಹೊಸ ಬ್ರ್ಯಾಂಡ್ ಮೋಟಾರ್‌ಸೈಕಲ್ ಉತ್ಪಾದನೆಯ ಕಡೆ ಗಮನಹರಿಸಿದೆ ಎನ್ನಲಾಗಿದೆ.
ಕ್ರಿಸ್ಮಸ್ ಸಂದರ್ಭದಲ್ಲಿ, ಬಿಎಸ್‌ಎ ಸಂಸ್ಥೆಯ ಹಳೆಯ ಕ್ರಿಸ್ಮಸ್ ಜಾಹೀರಾತನ್ನು ಮಹೀಂದ್ರಾ ಸದ್ಯ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಈ ಫೋಟೋದಲ್ಲಿ ಕ್ರಿಸ್ಮಸ್ ಸಂತ ಬಿಎಸ್‌ಎ ಮೋಟಾರ್‌ಸೈಕಲ್ ಸವಾರಿ ಮಾಡುತ್ತಿದ್ದಾನೆ.
ಬಲ್ಲ ಮೂಲಗ ಪ್ರಕಾರ ಮಹೀಂದ್ರಾ ಸಂಸ್ಥೆಯು ಉತ್ಪಾದನೆ ಮಾಡುವ ಹೊಸ ಮೋಟಾರ್‌ಸೈಕಲ್ ತನ್ನ ಹಳೆಯ ಬಿಎಸ್‌ಎ ಮಾದರಿಯ ಎಲ್ಲಾ ವಿಶೇಷತೆಗಳನ್ನು ಪಡೆದುಕೊಳ್ಳಲಿದೆ.


ಇಲ್ಲಿಯವರೆಗೆ ಮಹೀಂದ್ರಾ ಕಂಪನಿಯು ಹೊಸ ಬಿಎಸ್ಎ ಮೋಟಾರ್ ಸೈಕಲ್ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಹೊಸ ಮೋಟಾರ್‌ಸೈಕಲ್ ಆಧುನಿಕ ಕ್ಲಾಸಿಕ್ ವಿನ್ಯಾಸವನ್ನು ಪಡೆದುಕೊಳ್ಳುವುದಂತೂ ಸತ್ಯ. ಈ ವಿನ್ಯಾಸವು ಸದ್ಯ ಭಾರತದಲ್ಲಿ ಓಡುತ್ತಿರುವ ಕುದುರೆ ಎನ್ನಬಹುದು.
2016ರ ಅಕ್ಟೋಬರ್‌ನಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಸಂಸ್ಥೆಯು, ಸುಮಾರು ರೂ.28 ಕೋಟಿ ನೀಡಿ ಬಿಎಸ್ಎ ಬ್ರಾಂಡನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಘೋಷಿಸಿತ್ತು.
ಬಿಎಸ್ಎ ಕಂಪೆನಿ ಲಿಮಿಟೆಡ್‌ನ ಶೇಕಡಾ 100% ರಷ್ಟು ಷೇರುಗಳನ್ನು ಮಹೀಂದ್ರಾ ಕಂಪೆನಿ, ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಪಡೆದುಕೊಂಡಿದೆ. ಆದರೆ, ಬ್ರಿಟಿಷ್ ಬ್ರಾಂಡ್ ಖರೀದಿಸಿದ ಕೆಲವೇ ದಿನಗಳಲ್ಲಿ, ಹೊಸ ಬಿಎಸ್ಎ ಮೋಟಾರ್‌ಸೈಕಲ್ ಭಾರತದಲ್ಲಿ ಉತ್ಪಾದಿಸಲಾಗುವುದಿಲ್ಲ ಎಂದು ಮಹೀಂದ್ರಾ ಬಹಿರಂಗಪಡಿಸಿತ್ತು.
ಒಳ್ಳೆಯ ಸುದ್ದಿಯೆಂದರೆ, ಜಾವಾ ಸೈಕಲ್‌ಗಳನ್ನು ಮತ್ತೆ ಭಾರತದಲ್ಲಿ ಉತ್ಪಾದಿಸಲು ಕಂಪನಿಯು ಮುಂದಾಗಿದೆ ಮತ್ತು ಮೊದಲ ಉತ್ಪನ್ನವು 2018ರ ಅಂತ್ಯದೊಳಗೆ ಹೊರ ಬರಲಿದೆ ಎಂದು ನಿರೀಕ್ಷಿಸಲಾಗಿದೆ.