ಬೈಕ್ ಖರೀದಿಗೆ ಸುವರ್ಣಾವಕಾಶ- ಕೇವಲ 29 ಸಾವಿರಕ್ಕೆ ವಿನೂತನ ಬಜಾಜ್ ಸಿಟಿ 100
ಬಿಎಸ್- 4 ಎಂಜಿನ್ ಹಾಗೂ ಎಎಚ್‍ಒ ಸೌಲಭ್ಯ ಹೊಂದಿರುವ ಬಜಾಜ್ ಸಿಟಿ 100 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದು, ವಿನೂತನ ಆವೃತ್ತಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೈಕ್ ಖರೀದಿಗೆ ಇದು ಸುವರ್ಣಾವಕಾಶ ಎಂದರೇ ತಪ್ಪಾಗಲಾರದು. ಏಕೆಂದರೆ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಬಜಾಜ್ ಸಿಟಿ 100 ಭಾರತದಲ್ಲಿ ಬಿಡುಗಡೆಗೊಂಡಿದ್ದು, ಆರಂಭಿಕ ಬೆಲೆಗಳು ರೂ.29,988ಕ್ಕೆ (ದೆಹಲಿ ಎಕ್ಸ್‌ಶೋರಂ ಪ್ರಕಾರ) ಲಭ್ಯವಿರಲಿವೆ.

ಸಿಟಿ 100 ಬೈಕ್ ನಮೂನೆಗಳು
ಹೊಸ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ಸಿಟಿ 100, ಒಟ್ಟು 3 ವಿವಿಧ ನಮೂನೆಗಳಲ್ಲಿ ಬಿಡುಗಡೆಗೊಂಡಿದೆ. ಹೊಸ ಮಾದರಿಗಳಲ್ಲಿ ಬಿಎಸ್-4 ಮತ್ತು ಎಎಚ್‍ಎ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸಿಟಿ 100 ಬೈಕ್ ಬೆಲೆಗಳು
ಸಿಟಿ 100ಬಿ - ರೂ.29,988
ಸಿಟಿ 100 - ರೂ. 35,389
ಸಿಟಿ 100 (ಅಲಾಯ್ ವೀಲ್ಹ್) - ರೂ. 38,981

ಎಂಜಿನ್ ಸಾಮರ್ಥ್ಯ
99.27 ಸಿಸಿ ಸಿಂಗಲ್ ಸಿಲಿಂಡರ್ ಸಾಮರ್ಥ್ಯ ಹೊಂದಿರುವ ಬಜಾಜ್ ಸಿಟಿ 100, 8.1-ಬಿಎಚ್‌ಪಿ ಮತ್ತು 8.05-ಎಂಎನ್ ಉತ್ಪಾದನಾ ಶಕ್ತಿ ಹೊಂದಿದೆ.

ಹೊಚ್ಚ ಹೊಸ ಮಾದರಿಗಳಲ್ಲಿ 4-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯಿದ್ದು, ಗರಿಷ್ಠ ಪ್ರಮಾಣದಲ್ಲಿ ಪ್ರತಿಗಂಟೆಗೆ 90 ಕಿಮಿ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ.

ಟೆಲಿಸ್ಕೋಪಿಕ್ ಫ್ರೋಕ್ಸ್ ಹಾಗೂ ಎಸ್ಎನ್ಎಸ್ ಅಳವಡಿಕೆಯಿದ್ದು, 110-ಎಂಎಂ ಡ್ರಮ್ ಬ್ರೇಕ್ ವ್ಯವಸ್ಥೆಯಿದೆ. ಜೊತೆಗೆ ಬಜಾಜ್ ಸಿಟಿ ಉನ್ನತ ಮಟ್ಟದ ಮಾದರಿಯಲ್ಲಿ ಅಲಾಯ್ ವೀಲ್ಹ್ ಪಡೆದುಕೊಂಡಿದೆ.

108-ಕೆ.ಜಿ ತೂಕ ಹೊಂದಿರುವ ಬಜಾಜ್ ಸಿಟಿ 100 ಮಾದರಿಗಳು, ಹೊಸ ವಿನ್ಯಾಸದಿಂದಾಗಿ ಗ್ರಾಹಕರನ್ನು ಸೆಳೆಯಲು ಸಜ್ಜುಗೊಂಡಿವೆ.

ಹೊಸ ಮಾದರಿಗಳಲ್ಲಿ 10.5-ಲೀಟರ್ ಪ್ಯೂಲ್ ಟ್ಯಾಂಕ್ ಹಾಗೂ ಎಎಚ್‌ಒ (ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆಯಿದೆ. ಜೊತೆಗೆ ಬೈಕಿನ ಟೈರುಗಳು 3-ಇಂಚಿನಷ್ಟು ಅಗಲ ಹೊಂದಿವೆ.

ಇನ್ನು ಹೊಸ ಬೈಕ್‌ಗಳು ಪ್ರಮುಖ 2 ಬಣ್ಣಗಳಲ್ಲಿ ಲಭ್ಯವಿದೆ. ರೆಡ್ ಮತ್ತು ಎಬೋನಿ ಬ್ಲ್ಯಾಕ್‌ನಲ್ಲಿ ಸಿಗಲಿದ್ದು, ಬೈಕ್ ಹೊರ ವಿನ್ಯಾಸ ಸಾಕಷ್ಟು ಗಮನಸೆಳೆಯುತ್ತಿವೆ.

ಒಟ್ಟಾರೆ ಕಡಿಮೆ ಬಜೆಟ್‌ನಲ್ಲಿ ಒಂದು ಬೈಕ್ ಖರೀದಿ ಮಾಡಬೇಕೆಂಬ ಮಧ್ಯಮ ವರ್ಗಗಳಿಗೆ ಬಜಾಜ್ ಸಿಟಿ 100 ಒಂದು ಅತ್ಯುತ್ತಮ ಬೈಕ್ ಎಂದರೇ ತಪ್ಪಾಗಲಾರದು.

ಬಿಎಸ್-4 ಎಂಜಿನ್ ವ್ಯವಸ್ಥೆ ಹೊಂದಿರುವ ಹೊಚ್ಚ ಹೊಸ ಬಜಾಜ್ ಡೋಮಿನಾರ್ ಬೈಕ್ ಚಿತ್ರಗಳಿಗಾಗಿ ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.


Click it and Unblock the Notifications








