ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಮಾದರಿಗಾಗಿ ಬುಕ್ಕಿಂಗ್ ಶುರು

ಪಲ್ಸರ್ ಎನ್ಎಸ್‌200 ಅನ್ನು ಬಿಡುಗಡೆಗೊಳಿಸುವ ಮೂಲಕ ಸೂಪರ್ ಬೈಕ್ ಪ್ರಿಯರ ಕ್ರೇಜ್ ಹೆಚ್ಚಿಸಿತ್ತು. ಹೀಗಾಗಿ ಅದೇ ಮಾದರಿಯನ್ನು ಇದೀಗ ಎಬಿಎಸ್ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ ಮಾಡುತ್ತಿದೆ.

By Praveen

ಭಾರತದ ಆಟೋ ಮೊಬೈಲ್ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ಬಜಾಜ್ ಸಂಸ್ಥೆಯು ಕಳೆದ ಕೆಲ ದಿನಗಳ ಹಿಂದೆ ವಿನೂತನ ಮಾದರಿಯ ಪಲ್ಸರ್ ಎನ್ಎಸ್‌200 ಅನ್ನು ಬಿಡುಗಡೆಗೊಳಿಸುವ ಮೂಲಕ ಸೂಪರ್ ಬೈಕ್ ಪ್ರಿಯರ ಕ್ರೇಜ್ ಹೆಚ್ಚಿಸಿತ್ತು. ಹೀಗಾಗಿ ಅದೇ ಮಾದರಿಯನ್ನು ಇದೀಗ ಎಬಿಎಸ್ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ ಮಾಡುತ್ತಿದೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಮಾದರಿಗಾಗಿ ಬುಕ್ಕಿಂಗ್ ಶುರು

ಎಬಿಎಸ್ ತಂತ್ರಜ್ಞಾನ ಹೊಂದಿರುವ ಬೈಕ್ ಮಾದರಿಗಳಿಗೆ ಹೆಚ್ಚಿನ ಬೆೇಡಿಕೆ ಬರುತ್ತಿರುವ ಹಿನ್ನೆಲೆ ಬಜಾಜ್ ಪಲ್ಸರ್ ಎನ್ಎಸ್200 ಬೈಕ್ ಮಾದರಿಯೂ ಕೂಡಾ ಎಬಿಎಸ್‌ನೊಂದಿಗೆ ಬಿಡುಗಡೆಯಾಗುತ್ತಿದ್ದು, ಇದೀಗ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಮಾದರಿಗಾಗಿ ಬುಕ್ಕಿಂಗ್ ಶುರು

2018ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಕೇಂದ್ರ ಸರ್ಕಾರದ ಹೊಸ ಗೈಡ್‌ಲೈನ್ಸ್ ಪ್ರಕಾರ ಎನ್ಎಸ್ 200 ಬೈಕ್ ಮಾದರಿಯನ್ನು ಎಬಿಎಸ್(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ)ನೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಮಾದರಿಗಾಗಿ ಬುಕ್ಕಿಂಗ್ ಶುರು

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಎಲ್ಲಾ ಬೈಕ್ ಮಾದರಿಗಳಲ್ಲೂ ಎಬಿಎಸ್ (ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ) ವ್ಯವಸ್ಥೆಯಿದ್ದು, ಎಬಿಎಸ್‌ಗಳಿಲ್ಲದ ಮಾದರಿಗಳಿಗಿಂತ ರೂ. 10ರಿಂದ ರೂ.15 ಸಾವಿರ ರೂಪಾಯಿ ದುಬಾರಿಯಾಗುವ ಸಾಧ್ಯತೆಗಳಿವೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಮಾದರಿಗಾಗಿ ಬುಕ್ಕಿಂಗ್ ಶುರು

ಇನ್ನು 199.5 ಸಿಸಿ ಲಿಕ್ವಿಡ್ ಕೂಲ್ಡ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿರುವ ಬಜಾಜ್ ಪಲ್ಸರ್ ಎನ್ಎಸ್200 ಬೈಕ್, 23ಬಿಎಚ್‌ಪಿ ಮತ್ತು 18.3 ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, ಇನ್ಮುಂದೆ ಬಿಡುಗಡೆ ಮಾಡಲಾಗುವ ಪ್ರತಿ ಮಾದರಿಗಳಲ್ಲೂ ಎಬಿಎಸ್ ಕಡ್ಡಾಯಗೊಳಿಸಲಾಗುತ್ತಿದೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಮಾದರಿಗಾಗಿ ಬುಕ್ಕಿಂಗ್ ಶುರು

ಮೂಲಗಳ ಪ್ರಕಾರ ಬಿಡುಗಡೆಯಾಗುತ್ತಿರುವ ಎನ್ಎಸ್200 ಎಬಿಎಸ್ ಮಾದರಿಯ ಬುಕ್ಕಿಂಗ್ ಪ್ರಕ್ರಿಯ ಸದ್ಯ ಮುಂಬೈ ಮತ್ತು ದೆಹಲಿಯಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ವಾರವಷ್ಟೇ ದೇಶಾದ್ಯಂತ ಇರುವ ಎಲ್ಲ ಬಜಾಜ್ ಡಿಲರ್ಸ್‌ಗಳಲ್ಲೂ ಬುಕ್ಕಿಂಗ್ ಮಾಡಬಹುದಾಗಿದೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಮಾದರಿಗಾಗಿ ಬುಕ್ಕಿಂಗ್ ಶುರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸುರಕ್ಷತೆಯ ಬೈಕ್ ಸವಾರಿಗೆ ಎಬಿಎಸ್ ತಂತ್ರಜ್ಞಾನ ಬಹುಮುಖ್ಯವಾಗಿದ್ದು, ಅಪಘಾತಗಳ ಸಂಖ್ಯೆಯನ್ನು ತಡೆಯಲು ಇದು ಸಹಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿರುವ ಬಜಾಜ್ ಕ್ರಮ ಗಮನಾರ್ಹ.

More from DriveSpark

Article Published On: Saturday, September 30, 2017, 18:13 [IST]
English summary
Read in Kannada about Bookings Open For Bajaj Pulsar NS200 Equipped With ABS.
Read more on ಬಜಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+