ಡುಕಾಟಿ ಸ್ಕ್ರಾಂಬ್ಲರ್ ಮ್ಯಾಕ್ 2.0 ಭಾರತದಲ್ಲಿ ಪ್ರಾರಂಭ; ಬೆಲೆ ರೂ.8.52 ಲಕ್ಷ
ಡುಕಾಟಿ ಸ್ಕ್ರಾಂಬ್ಲರ್ ಮ್ಯಾಕ್ 2.0 ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಮ್ಯಾಕ್ 2.0 ಮೋಟಾರ್ ಸೈಕಲ್ ಭಾರತದಲ್ಲಿ ರೂ.8.52 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ.
ಡುಕಾಟಿ ಸ್ಕ್ರಾಂಬ್ಲರ್ ಮ್ಯಾಕ್ 2.0 ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಮ್ಯಾಕ್ 2.0 ಮೋಟಾರ್ ಸೈಕಲ್ ಭಾರತದಲ್ಲಿ ರೂ.8.52 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ.

70ರ ದಶಕದ ಸಾಮಾನ್ಯ ವೆಸ್ಟ್ ಕೋಸ್ಟ್ ಶೈಲಿಯ ಬಣ್ಣಗಳನ್ನು ಹೊಂದಿರುವ ಡುಕಾಟಿ ಸ್ಕ್ರಾಂಬ್ಲರ್ ಮ್ಯಾಕ್ 2.0 ಬೈಕನ್ನು ಕ್ಯಾಲಿಫೋರ್ನಿಯಾದ ಡಿಸೈನರ್ ರೋಲ್ಯಾಂಡ್ ಸ್ಯಾಂಡ್ಸ್ ವಿನ್ಯಾಸಗೊಳಿಸಿದೆ. ದೆಹಲಿ ಎನ್‌ಸಿಆರ್, ಮುಂಬೈ, ಬೆಂಗಳೂರು, ಪುಣೆ, ಅಹಮದಾಬಾದ್, ಕೊಲ್ಕತ್ತಾ ಮತ್ತು ಕೊಚ್ಚಿಯಲ್ಲಿರುವ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಮೋಟಾರ್‌ಸೈಕಲ್ ಲಭ್ಯವಿದೆ.

ಈ ಬೈಕ್ ಬೈಕ್ ನಯವಾದ, ಕಡಿಮೆ ಸ್ಲಂಗ್‌ನ ಮೊನಚಾದ ಅಲ್ಯೂಮಿನಿಯಂ ಹ್ಯಾಂಡಲ್‌ಗಳು, ಸಮರ್ಪಿತ ಫ್ಲಾಟ್ ಟ್ರ್ಯಾಕ್ ಪ್ರೊ ಸೀಟ್, ಕಪ್ಪು ಎಕ್ಸ್‌ಸಾಸ್ಟ್ ಮತ್ತು ಸಿಲಿಂಡರ್ ಹೆಡ್ ಕವರ್, ಜೊತೆಗೆ ಕೆಫೆ ರೇಸರ್ ಶೈಲಿ ಪಡೆದಿದೆ.

1965ರಲ್ಲಿ, ಮ್ಯಾಕ್ 1 250 ಹೆಸರಿನ ಮೊದಲ ಆವೃತಿಯನ್ನು ಡುಕಾಟಿ ಸಂಸ್ಥೆಯು ಪ್ರಾರಂಭಿಸಿತ್ತು. ಪ್ರಸ್ತುತ, ಡುಕಾಟಿ ಸ್ಕ್ರಾಂಬ್ಲರ್ ಬೈಕ್ ಐಕಾನ್, ಕ್ಲಾಸಿಕ್ ಮತ್ತು ಫುಲ್ ತ್ರೊಟಲ್ ಎಂಬ ಆವೃತಿಗಳಲ್ಲಿ ಲಭ್ಯವಿದೆ.

ಡುಕಾಟಿ ಸ್ಕ್ರಾಂಬ್ಲರ್ ಮ್ಯಾಕ್ 2.0 ಬೈಕ್, 803 ಸಿಸಿ ವಿ-ಟ್ವಿನ್ ಎಂಜಿನ್ ಹೊಂದಿದೆ. ಇದು 72.4 ಬಿಎಚ್‌ಪಿ ಮತ್ತು 67 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಮೋಟಾರ್‌ಸೈಕಲ್ ಟ್ರಯಂಪ್ ಸ್ಟ್ರೀಟ್ ಸ್ಕ್ರಾಂಬ್ಲರ್ ಮತ್ತು ಯಮಹಾ ಎಫ್‌ಝೆಡ್-07 ಬೈಕುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

ಡುಕಾಟಿ ಸ್ಕ್ರಾಂಬ್ಲರ್ ಮ್ಯಾಕ್ 2.0 ಭಾರತದಲ್ಲಿ ಮೋಟಾರ್ ಸೈಕಲ್ ಖರೀದಿದಾರರಿಗೆ ಮತ್ತೊಂದು ಆಯ್ಕೆಯಾಗಿದೆ ಮತ್ತು ತನ್ನ ಹೆಸರಿನೊಂದಿಗೆ ಇರುವ ಇತಿಹಾಸದ ಸಹಾಯದೊಂದಿಗೆ ಸ್ಕ್ರಾಂಬ್ಲರ್ ಮ್ಯಾಕ್ 2.0 ನಿಜವಾಗಿಯೂ ವಿಶಿಷ್ಟ ಖರೀದಿ ಎನ್ನವುದನ್ನು ಖಾತರಿಪಡಿಸುತ್ತದೆ.


Click it and Unblock the Notifications








