ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳ ಬೆಲೆ ಕಡಿಮೆಗೊಳಿಸಿದ ಹೋಂಡಾ

ಹೋಂಡಾ ಸಂಸ್ಥೆಯ ಸ್ಕೂಟರ್ ಮತ್ತು ಮೋಟಾರ್ ಸೈಕಲ್‌ಗಳ ಬೆಲೆ ಜಿಎಸ್‌ಟಿ ತೆರಿಗೆಯ ಪ್ರಯುಕ್ತ ಕಡಿಮೆಯಾಗಲಿದ್ದು, ಇದರಿಂದಾಗಿ ಸಂಸ್ಥೆಗೆ ನಷ್ಟ ಮತ್ತು ಗ್ರಾಹಕರಿಗೆ ಲಾಭವಾಗಲಿದೆ ಎನ್ನಬಹುದು.

By Girish

ಹೋಂಡಾ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಭಾರತದಲ್ಲಿ ಅತಿದೊಡ್ಡ ಅಭಿಮಾನಿಗಳನ್ನು ಈಗಾಗಲೇ ಪಡೆದುಕೊಂಡಿದ್ದು, ತನ್ನ ವಾಹನಗಳ ಮಾರಾಟದ ಸಂಖ್ಯೆಗಳನ್ನು ದಿನದಿಂದ ದಿನಕ್ಕೆ ನಿಧಾನವಾಗಿ ಹೆಚ್ಚಿಸಿಕೊಳ್ಳುತ್ತಿದೆ ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳ ಬೆಲೆ ಕಡಿಮೆಗೊಳಿಸಿದ ಹೋಂಡಾ

ಜಿಎಸ್‌ಟಿ ಕಾರ್ಯರೂಪಕ್ಕೆ ಬಂದ ನಂತರ ಬೆಲೆಗಳು ಕಡಿಮೆಯಾಗುವುದರಿಂದ ಅದರ ಮಾರಾಟ ಹೆಚ್ಚಾಗುತ್ತದೆ ಎನ್ನವ ವಿಚಾರವನ್ನು ನಾವು ಗಮನಿಸಬಹುದಾಗಿದೆ.

ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳ ಬೆಲೆ ಕಡಿಮೆಗೊಳಿಸಿದ ಹೋಂಡಾ

ಬೆಲೆ ಕಡಿಮೆಗೊಳ್ಳುವುದರಿಂದ ಮಾರಾಟದಲ್ಲಿ ಯಾವುದೇ ರೀತಿಯಲ್ಲಿಯೂ ಪರಿಣಾಮ ಬೀರುವುದಿಲ್ಲ ಎಂಬ ವರದಿ ಬಂದಿದ್ದು, ವಾಸ್ತವವಾಗಿ ವಾಹನಗಳ ಮಾರಾಟ ಹೆಚ್ಚಳವಾಗಲಿದೆ ಹೆಚ್ಚು ಲಾಭವಾಗಲಿದೆ ಎನ್ನಲಾಗಿದೆ.

ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳ ಬೆಲೆ ಕಡಿಮೆಗೊಳಿಸಿದ ಹೋಂಡಾ

ಭಾರತದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಸಂಸ್ಥೆಯು ಭಾರತದಲ್ಲಿ 350ಸಿಸಿ ವರೆಗೆ ಇರುವಂತಹ ತನ್ನ ಉತ್ಪನ್ನಗಳ ಬೆಲೆಗಳನ್ನು ಶೇಕಡಾ 3 % ರಿಂದ 5 % ರಷ್ಟು ಕಡಿಮೆಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳ ಬೆಲೆ ಕಡಿಮೆಗೊಳಿಸಿದ ಹೋಂಡಾ

ಜಿಎಸ್‌ಟಿ ಯೋಜನೆಯಡಿಯಲ್ಲಿ, 350ಸಿಸಿ ಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಮೋಟಾರು ಸೈಕಲ್‌ಗಳು ದರ ಹೆಚ್ಚಿಗೆಯಾಗಲಿರುವುದನ್ನು ನಾವು ನಿರೀಕ್ಷಿಸಬಹುದು.

ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳ ಬೆಲೆ ಕಡಿಮೆಗೊಳಿಸಿದ ಹೋಂಡಾ

ಜಿಎಸ್‌ಟಿ ನಿಯಮದಂತೆ ಸಿಬಿಆರ್650 ಎಫ್, ಸಿಬಿಆರ್ 1000 ಆರ್‌ಆರ್ ಮತ್ತು ಹೊಸದಾಗಿ ಬಿಡುಗಡೆಯಾಗಿರುವ ಆಫ್ರಿಕಾ ಟ್ವಿನ್ ನಂತಹ ದೊಡ್ಡ ಹೋಂಡಾ ಮೋಟರ್ ಸೈಕಲ್‌ಗಳ ಬೆಲೆ ಹೆಚ್ಚಳವಾಗಲಿದೆ.

ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳ ಬೆಲೆ ಕಡಿಮೆಗೊಳಿಸಿದ ಹೋಂಡಾ

ಬೆಲೆ ಕಡಿತವು ರಾಜ್ಯದಿಂದ ರಾಜ್ಯಕ್ಕೆ ಮತ್ತು ಉತ್ಪನ್ನದಿಂದ ಉತ್ಪನ್ನಕ್ಕೆ ಭಿನ್ನವಾಗಿರಲಿದ್ದು, ಜಿಎಸ್‌ಟಿ ಕಾರ್ಯಗತಗೊಳಿಸುವುದರಿಂದ 350ಸಿಸಿಗಿಂತ ಕಡಿಮೆ ಇರುವಂತಹ ವಾಹನಗಳ ಕಡೆ ಜನತೆ ಹೆಚ್ಚು ಒಲವು ತೋರುವ ಲಕ್ಷಣ ಕಂಡುಬರುತ್ತಿರುವುದಂತೂ ಖಂಡಿತ.

Most Read Articles

Kannada
Read more on ಹೋಂಡಾ honda
English summary
Honda Motorcycle and Scooter India is expected to reduce prices of its entire product range in India up to 350cc, by 3-5 percent.
Story first published: Thursday, June 29, 2017, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X