ಸದ್ಯದರಲ್ಲಿಯೇ ಬಿಡುಗಡೆಗೊಳ್ಳಲಿರುವ ಪ್ಯಾಷನ್ ಎಕ್ಸ್‌ಪ್ರೊ 110 ಬೈಕಿನ ಮಾಹಿತಿ ತಿಳಿದುಕೊಳ್ಳಿ
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೊ ಮೊಟೊಕಾರ್ಪ್ ಸಂಸ್ಥೆಯು ಭಾರತದಲ್ಲಿ ತನ್ನ ಹೊಸ ಪ್ರಯಾಣಿಕ ಮೋಟಾರ್‌ಸೈಕಲ್ ಪ್ರಾರಂಭಿಸಲು ಸಿದ್ಧವಾಗಿದೆ.
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೊ ಮೊಟೊಕಾರ್ಪ್ ಸಂಸ್ಥೆಯು ಭಾರತದಲ್ಲಿ ತನ್ನ ಹೊಸ ಪ್ರಯಾಣಿಕ ಮೋಟಾರ್‌ಸೈಕಲ್ ಪ್ರಾರಂಭಿಸಲು ಸಿದ್ಧವಾಗಿದೆ.

ಹೀರೊ ಮೊಟೊಕಾರ್ಪ್ ಕಂಪನಿಯು ತನ್ನ ಪ್ರಸಿದ್ಧ ಪ್ಯಾಷನ್ ಪ್ರೊ ಬ್ರಾಂಡ್‌ನ ಮತ್ತೊಂದು ಆವೃತಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ವಾಹನಕ್ಕೆ ಪ್ಯಾಷನ್ ಎಕ್ಸ್‌ಪ್ರೊ 110 ಎಂದು ಹೆಸರಿಸಲಿದೆ ಎಂದು ವರದಿಯಾಗಿದೆ. ಈ ದ್ವಿಚಕ್ರ ವಾಹನವು ಡಿಸೆಂಬರ್ 18ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.

ಭಾರತದಲ್ಲಿ ಪ್ಯಾಷನ್ ಪ್ರೊ ಬ್ರಾಂಡ್ ತನ್ನದೇ ರೀತಿಯ ಅಭಿಮಾನಿ ಬಳಗವನ್ನು ಹೊಂದಿದ್ದು, ಈ ವಾಹನವು ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿರುವುದು ಗಮನಿಸಬೇಕಾಗಿರುವ ವಿಚಾರ. ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಈ ವಾಹನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ವಿಶೇಷತೆಗಳು :
ಹೀರೊ ಮೊಟೊಕಾರ್ಪ್ ಕಂಪನಿಯ ಪ್ರವೇಶ ಮಟ್ಟದ ಪ್ಯಾಶನ್ ಪ್ರೊ ವಾಹನವು 97.2 ಸಿಸಿ ಇಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಎಂಜಿನ್, 9.3 ಬಿಎಚ್‌ಪಿ ಮತ್ತು 9 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸೂಪರ್ ಸ್ಪ್ಲೆಂಡರ್ ವಾಹನದಲ್ಲಿ ನಿಯೋಜಿಸಲಾಗಿರುವ ಎಂಜಿನ್ ಪಡೆದುಕೊಡಿರುವ ಈ ಬೈಕ್, 4-ಸ್ಪೀಡ್ ಗೇರ್ ಬಾಕ್ಸ್ ಅಳವಡಿಕೆಗೊಂಡಿರಲಿದೆ ಹಾಗು ಮಾರ್ಚ್‌ನಲ್ಲಿ ಸ್ಥಗಿತಗೊಂಡ ಎಕ್ಸ್‌ಪೋ ದ್ವಿಚಕ್ರ ವಾಹನದ ಬದಲಿ ಬೈಕಾಗಿ ಈ ಹೊಸ ಪ್ಯಾಷನ್ ಎಕ್ಸ್‌ಪ್ರೊ 110 ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

ವಿನ್ಯಾಸ :
ವಿನ್ಯಾಸದಲ್ಲಿ ಈ ಹೊಸ ಪ್ಯಾಷನ್ XPro 110 ಬೈಕ್, ತನ್ನ ಬಳಗದ 100 ಸಿಸಿ ಮೋಟಾರ್ ಸೈಕಲ್‌ಗೆ ಹೋಲುತ್ತದೆ. ಸ್ಪ್ಲೆಂಡರ್ 110ಯಲ್ಲಿ ಕಂಡು ಬರುವ ಅನಲಾಗ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯುವ ಸಾಧ್ಯತೆ ಇದೆ.

ಬೆಲೆ :
ಐಸ್ಮಾಟ್ ತಂತ್ರಜ್ಞಾನದ ಕಾರಣದಿಂದ, 100 ಸಿಸಿ ಮೋಟಾರ್ ಸೈಕಲ್‌ಗೆ ಹೋಲಿಸಿದರೆ ಹೊಸ ಪ್ಯಾಷನ್ XPro 110 ಬೈಕ್ ಸುಧಾರಿತ ಮೈಲೇಜ್ ನೀಡುತ್ತದೆ ಹಾಗು ಸುಮಾರು 57,000 ರೂ. ಎಕ್ಸ್ ಶೋರೂಂ ಬೆಲೆ ಪಡೆಯುವ ಸಾಧ್ಯತೆ ಇದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ನೂತನ ಉತ್ಪನ್ನಗಳನ್ನು ಪ್ರಾರಂಭಿಸುವುದಾಗಿ ಹೀರೊ ಮೊಟೊಕಾರ್ಪ್ ಕಂಪನಿಯು ಈಗಾಗಲೇ ಹೇಳಿಕೆ ನೀಡಿದೆ. ಈ ಪಟ್ಟಿಯಲ್ಲಿರುವ ಮೊದಲ ಉತ್ಪನ್ನ ಪ್ಯಾಷನ್ XPro ಎನ್ನಲಾಗಿದೆ. ಈ ವಾಹನದ ಮೂಲಕ ಪ್ರಯಾಣಿಕರ ಮೋಟಾರ್ ಸೈಕಲ್ ವಿಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ಆಶಯವನ್ನು ಕಂಪನಿ ಹೊಂದಿದೆ.


Click it and Unblock the Notifications