ಹೀರೊ ಎಕ್ಸ್‌ಟ್ರಿಮ್ 200 ಎಸ್ ಬೈಕಿನ ಬಿಡುಗಡೆ ದಿನಾಂಕ ಅನಾವರಣ

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೊ ಮೊಟೊಕಾರ್ಪ್ ತನ್ನ ನೂತನ 200 ಸಿಸಿ ಮೋಟಾರ್ ಸೈಕಲ್ ತನ್ನ ಎಕ್ಸ್‌ಟ್ರಿಮ್ 200 ಎಸ್ ದ್ವಿಚಕ್ರ ವಾಹನವನ್ನು ಭಾರತದಲ್ಲಿದಲ್ಲಿ ಸದ್ಯದರಲ್ಲಿಯೇ ಪ್ರಾರಂಭಿಸಲಿದೆ.

By Girish

2016ರಲ್ಲಿ ನೆಡೆದ ಆಟೊ ಎಕ್ಸ್ ಪೋದಲ್ಲಿ ಎಕ್ಸ್‌ಟ್ರಿಮ್ 200 ಎಸ್ ಮೋಟಾರ್ ಸೈಕಲ್‌ನ ಪರಿಕಲ್ಪನೆಯನ್ನು ಪ್ರದರ್ಶಿಸಲಾಗಿತ್ತು. ಮುಂದಿನ ವರ್ಷ ಫೆಬ್ರವರಿಯಲ್ಲಿ ನೆಡೆಯುವ 2018ರ ಆಟೊ ಎಕ್ಸ್‌ಪೋದಲ್ಲಿ ಈ ಮೋಟಾರ್ ಸೈಕಲ್‌ನ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶಿಸಲಾಗುತ್ತದೆ.

ಹೀರೊ ಎಕ್ಸ್‌ಟ್ರಿಮ್ 200 ಎಸ್ ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಈ ವರ್ಷದ ಡಿಸೆಂಬರ್ 18ರಂದು ತನ್ನ ಹೊಸ 125 ಸಿಸಿ ಸ್ಕೂಟರ್ ಮತ್ತು 110 ಸಿಸಿ ಪ್ಯಾಷನ್ ಎಕ್ಸ್‌ಪ್ರೊ ವಾಹನಗಳ ಜೊತೆ ಎಕ್ಸ್‌ಟ್ರಿಮ್ 200 ಎಸ್ ಬೈಕನ್ನು ಭಾರತದಲ್ಲಿ ಪರಿಚಯಿಸಲಿದೆ ಎಂದು ಮಾಹಿತಿ ಸಿಕ್ಕಿದೆ.

ಹೀರೊ ಎಕ್ಸ್‌ಟ್ರಿಮ್ 200 ಎಸ್ ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಹೀರೊ ಮೊಟೊಕಾರ್ಪ್ ಸಂಸ್ಥೆಯು ಸ್ಪ್ಲೆಂಡರ್ ಮತ್ತು ಪ್ಯಾಷನ್ ಉತ್ಪನ್ನಗಳ ಸಹಾಯದಿಂದ ಪ್ರಯಾಣಿಕರ ಮೋಟಾರ್‌ಸೈಕಲ್ ವಿಭಾಗದಲ್ಲಿ ಹೆಚ್ಚು ಪ್ರಾಬಲ್ಯವನ್ನು ಸಾಧಿಸಿರುವುದು ತಿಳಿದಿರುವ ವಿಚಾರವಾಗಿದೆ.

ಹೀರೊ ಎಕ್ಸ್‌ಟ್ರಿಮ್ 200 ಎಸ್ ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಕಾರ್ಯಕ್ಷಮತೆ ಹೊಂದಿರುವ ಮೋಟಾರ್ ಸೈಕಲ್‌ಗಳ ವಿಚಾರದಲ್ಲಿ ಹೀರೊ ಕಂಪನಿಯು ಹೇಳಿಕೊಳ್ಳುವಂತಹ ಯಶಸ್ಸನ್ನು ಗಳಿಸಿಲ್ಲ ಎನ್ನಬಹುದು. ಇದನ್ನು ಅರಿತಿರುವ ಹೀರೊ ಮುಂಬರುವ ದಿನಗಳಲ್ಲಿ ಕಾರ್ಯಕ್ಷಮತೆ ಹೊಂದಿರುವ ಮೋಟಾರ್ ಸೈಕಲ್‌ಗಳನ್ನು ಬಗ್ಗೆ ಹೆಚ್ಚು ಗಮನಹರಿಸಲಿದೆ.

ಹೀರೊ ಎಕ್ಸ್‌ಟ್ರಿಮ್ 200 ಎಸ್ ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಎಕ್ಟ್ರೀಮ್ 200 ಎಸ್ ಬೈಕಿನ ಮುಂಭಾಗದ ವಿನ್ಯಾಸವು ಹೆಚ್ಚು ತೀಕ್ಷ್ಣ ಮತ್ತು ಆಕ್ರಮಣಶೀಲವಾಗಿದೆ. ಇದು ಸ್ನಾಯುವಿನ ರೀತಿಯ ಇಂಧನ ಟ್ಯಾಂಕ್ ಮತ್ತು ಎಲ್ಇಡಿ ಡಿಆರ್‌ಎಲ್‌ಗಳನ್ನು ಪಡೆಯುತ್ತದೆ. ಮೆಟ್ಟಿಲುಗಳ ರೀತಿಯ ಆಸನ, ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲ್ಇಡಿ ಟೈಲ್ ಲೈಟ್ ಆಯ್ಕೆಯನ್ನು ಹೊಂದಲಿದೆ.

ಹೀರೊ ಎಕ್ಸ್‌ಟ್ರಿಮ್ 200 ಎಸ್ ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಪ್ರಸ್ತುತ, ಹೀರೊ ಮೊಟೊಕಾರ್ಪ್ ಎಕ್ಸ್‌ಟ್ರಿಮ್ 200 ಎಸ್ ಪರಿಚಯದೊಂದಿಗೆ ಪ್ರೀಮಿಯಂ ಮತ್ತು ಕಾರ್ಯಕ್ಷಮತೆ ಮೋಟಾರ್‌ಸೈಕಲ್ ವಿಭಾಗವನ್ನು ಗುರಿಪಡಿಸುತ್ತಿದೆ. ಈ ವಾಹನದ ಜೊತೆ ಸಂಪೂರ್ಣವಾಗಿ ಅಂದಗೊಂಡ HX250 ದ್ವಿಚಕ್ರ ಮತ್ತು XF3R ಪರಿಕಲ್ಪನೆಯನ್ನು ಆಧಾರದ ಮೇಲೆ ಹೆಚ್ಚಿನ ಸಾಮರ್ಥ್ಯದ ಮಾದರಿಯನ್ನು ಪರಿಚಯಿಸುತ್ತದೆ.

ಹೀರೊ ಎಕ್ಸ್‌ಟ್ರಿಮ್ 200 ಎಸ್ ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಹೀರೊ ಎಕ್ಟ್ರೀಮ್ 200 ಎಸ್ ಮೋಟಾರ್ ಸೈಕಲ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮಾನೊಶಾಕ್ ಸಸ್ಪೆನ್‌ಷನ್ ಅಳವಡಿಸಲಾಗಿದೆ. ಎರಡು ಚಕ್ರಗಳೂ ಡಿಸ್ಕ್ ಬ್ರೇಕ್ ಪಡೆಯಲಿವೆ ಮತ್ತು ಎಬಿಎಸ್ ಆಯ್ಕೆಯನ್ನು ನೀಡುವ ನಿರೀಕ್ಷೆಯಿದೆ.

Article Published On: Tuesday, November 21, 2017, 11:06 [IST]
English summary
Hero MotoCorp company will debut the Xtreme 200S in India on December 18, 2017, alongside the new 125cc scooter and the 110cc Passion XPro.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+