ಗ್ರೇ ಮೆಟಾಲಿಕ್ ಬಣ್ಣದಲ್ಲಿ ಬಿಡುಗಡೆಯಾದ ಹೋಂಡಾ ಆಕ್ಟಿವಾ 4ಜಿ ಸ್ಕೂಟರ್
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಕ್ಟಿವಾ 4ಜಿ ಸ್ಕೂಟರ್ ಮಾದರಿಯನ್ನು ಗ್ರೇ ಮೆಟಾಲಿಕ್ ಬಣ್ಣದೊಂದಿಗೆ ಹೋಂಡಾ ಮೋಟಾರ್ಸ್ ಆ್ಯಂಡ್ ಸ್ಕೂಟರ್ ಸಂಸ್ಥೆಯು ಬಿಡುಗಡೆಗೊಳಿಸಿದ್ದು, ಸ್ಟೂಟರ್ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಕ್ಟಿವಾ 4ಜಿ ಸ್ಕೂಟರ್ ಮಾದರಿಯನ್ನು ಗ್ರೇ ಮೆಟಾಲಿಕ್ ಬಣ್ಣದೊಂದಿಗೆ ಹೋಂಡಾ ಮೋಟಾರ್ಸ್ ಆ್ಯಂಡ್ ಸ್ಕೂಟರ್ ಸಂಸ್ಥೆಯು ಬಿಡುಗಡೆಗೊಳಿಸಿದ್ದು, ಸ್ಟೂಟರ್ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಅತ್ಯುತ್ತಮ ಸ್ಕೂಟರ್ ಮಾದರಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಹೋಂಡಾ ಆಕ್ಟಿವಾ ಮಾದರಿಯೂ ಹಲವು ವಿಶೇಷತೆಗಳಿಂದ ಕೂಡಿದ್ದು, ಇದೀಗ ಗ್ರಾಹಕರ ಬೇಡಿಕೆಯಂತೆ ಗ್ರೇ ಮೆಟಾಲಿಕ್ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಪ್ರಕಟಿಸಿರುವ ಹೋಂಡಾ ಮೋಟಾರ್ಸ್ ಆ್ಯಂಡ್ ಸ್ಕೂಟರ್ ವಿಭಾಗವು, ಹೋಂಡಾ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟಗಾರರ ಬಳಿ ಹೊಸ ಬಗೆಯ ಸ್ಕೂಟರ್ ಖರೀದಿ ಲಭ್ಯವಿದೆ ಎಂದಿದೆ.

ಹೊಸ ಬಣ್ಣದ ಮಾದರಿಯೊಂದಿಗೆ ಮಾತ್ರ ಆಕ್ಟಿವಾ 4ಜಿ ಮಾದರಿಯನ್ನು ಬಿಡುಗಡೆ ಮಾಡಲಾಗಿದ್ದು, ತಾಂತ್ರಿಕ ವಿಭಾಗದ ವೈಶಿಷ್ಟ್ಯತೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಎಂಜಿನ್ ವಿಭಾಗ
109-ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಆಕ್ಟಿವಾ ಸ್ಕೂಟರ್, 8-ಬಿಎಚ್‌ಪಿ ಮತ್ತು 9-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿರುವುದು ವಿಶೇಷ.
Recommended Video


ಇನ್ನು ಬಿಎಸ್-4 ಬದಲಾವಣೆಗಳನ್ನು ಹೊಸ ಮಾದರಿಯ ಆಕ್ಟಿವಾದಲ್ಲಿ ಅಳವಡಿಸಲಾಗಿದ್ದು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್, ಟ್ಯೂಬ್‌ಲೇಸ್ಸ್ ಟೈರ್ ಮತ್ತು ಮೊಬೈಲ್ ಚಾರ್ಚರ್ ಪಾಯಿಂಟ್ ಹೊಂದಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸ್ಕೂಟರ್ ವಿಭಾಗದಲ್ಲೇ ಅತಿಹೆಚ್ಚು ಬೇಡಿಕೆ ಹೊಂದಿರುವ ಹೋಂಡಾ ಆಕ್ಟಿವಾ ಸ್ಕೂಟರ್ ಸದ್ಯ ಬ್ಲ್ಯಾಕ್, ಇಂಪಿಯಿರಲ್ ರೆಡ್ ಮೆಟಾಲಿಕ್, ಟ್ರಾನ್ಸ್ ಮೆಟಾಲಿಕ್ ಬ್ಲೂ, ಪರ್ಲ ಅಮ್ಯಾಜಿಂಗ್ ವೈಟ್, ಬ್ರೌನ್ ಮೆಟಾಲಿಕ್, ಮ್ಯಾಟ್ ಸೆವೆನ್ ಸಿಲ್ವರ್ ಮೆಟ್ಯಾಲಿಕ್ ಲಭ್ಯವಿದ್ದು ಇದೀಗ ಗ್ರಾಹಕರ ಬೇಡಿಕೆ ತಕ್ಕಂತೆ ಗ್ರೇ ಮೆಟಾಲಿಕ್ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ.


Click it and Unblock the Notifications